ವಿಶ್ವ ಮಾನವರಾಗಿ ಹುಟ್ಟಿ ವಿಶ್ವ ಮಾನವರಾಗೇ ಬೆಳೆದ ಪ್ರೊ.ರಾಮದಾಸ್
ಮೈಸೂರು

ವಿಶ್ವ ಮಾನವರಾಗಿ ಹುಟ್ಟಿ ವಿಶ್ವ ಮಾನವರಾಗೇ ಬೆಳೆದ ಪ್ರೊ.ರಾಮದಾಸ್

June 20, 2022

ಮೈಸೂರು, ಜೂ.19(ಆರ್‍ಕೆಬಿ)- ಅಂತರ ಜಾತೀಯ ವಿವಾಹ ಆಗುವವರಿಗೆ ಸಾಮಾಜಿಕ ಹಾಗೂ ಕಾನೂನಾತ್ಮಕ ರಕ್ಷಣೆ ನೀಡಲೆಂದೇ ವಿಚಾರವಾದಿ ಪ್ರೊ.ಕೆ.ರಾಮದಾಸ್ ಅವರು ಮಾನವ ಮಂಟಪ ನಿರ್ಮಿಸಿದರು. ಅವರ ಮನೆ ಅಂತರ ಜಾತೀಯ ವಿವಾಹಗಳ ಮ್ಯಾರೇಜ್ ಬ್ಯೂರೋ ರೀತಿ ಆಗಿತ್ತು. ಪ್ರತಿನಿತ್ಯ ಯಾವುದಾದರೊಂದು ಅಂತರ ಜಾತೀಯ ವಿವಾಹ ಇನ್ನಿತರೆ ಕಾರ್ಯಕ್ರಮಗಳಿಂದ ತುಂಬಿ ರುತ್ತಿತ್ತು ಎಂದು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮಕುಮಾರ್ ತಿಳಿಸಿದರು.

ಮೈಸೂರಿನ ಕಲಾಮಂದಿರ ಕಿರುರಂಗ ಮಂದಿರ ದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ಭಾನುವಾರ ಆಯೋಜಿಸಿದ್ದ ವಿಚಾರವಾದಿ ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ ನೆನಪಿನಲಿ… ಸಂವಾದ, ಪುಸ್ತಕ ಬಿಡುಗಡೆ, ಲೇಖನ ಪ್ರಶಸ್ತಿ ಪ್ರದಾನ ಸಮಾ ರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಮದಾಸ್ ಅವರು ಬಸವಣ್ಣನವರ ತತ್ವ, ಚಿಂತನೆಗಳ ಬಗ್ಗೆ ಅಚಲ ನಂಬಿಕೆ ಮತ್ತು ನಿರಂತರ ಚಲನಶೀಲರಾಗಿದ್ದರು ಎಂದು ತಿಳಿಸಿದರು.

ಪ್ರೇಮ ವಿವಾಹಗಳಿಗೆ ಯಾವುದೇ ಸಂಕೇತಗಳಿಲ್ಲ. ವರದಕ್ಷಿಣೆ ಪಿಡುಗಿಲ್ಲ, ದುಂದುವೆಚ್ಚ ಇರುವುದಿಲ್ಲ, ಪ್ರೇಮ ವಿವಾಹಗಳು ನಿಜವಾದ ಪ್ರೀತಿಯ ಸಂಕೇತ ಎಂದ ಅವರು, ಪುರಾಣಗಳ ಪ್ರಕಾರ ಶಿವ, ಕೃಷ್ಣ, ರಾಮ ಎಲ್ಲರದ್ದು ಪ್ರೇಮ ವಿವಾಹಗಳೇ ಆಗಿದ್ದವು. ಆದರೆ ಅವರನ್ನು ಪೂಜೆ ಮಾಡುವ ಅವರ ಭಕ್ತರು ತಮ್ಮ ದೇವರುಗಳ ಆದರ್ಶ ಪಾಲಿಸುತ್ತಿಲ್ಲ ಎಂದರು.

ವಿಶ್ವ ಮಾನವನಾಗಿ ಹುಟ್ಟಿ, ವಿಶ್ವ ಮಾನವರಾಗಿಯೇ ಒಳ್ಳೆಯ ಜೀವನ ನಡೆಸಿದ್ದು ನಿದರ್ಶನ. ಯಾವ ರೀತಿ ತಮ್ಮ ಜೀವನದಲ್ಲಿ ರಾಮದಾಸ್ ಅವರು ವಿಶ್ವ ಮಾನವ ರಾಗಿ ಹುಟ್ಟಿ, ವಿಶ್ವ ಮಾನವರಾಗೇ ಬೆಳೆದವರು. ಜಾತ್ಯತೀತ ನಿಲುವಿನ ರಾಮದಾಸ್, ಹುಟ್ಟಿನಿಂದಲೂ ಯಾವುದೇ ಜಾತಿಗೆ ಸೇರಿಲ್ಲ ಎಂಬುದನ್ನು ಪ್ರತಿಪಾದಿ ಸಿದವರು, ಅವರ ಸಾರ್ವಜನಿಕ ಜೀವನವೂ ಇನ್ನೂ ರೋಚಕ ಹಾಗೂ ಕ್ರಾಂತಿಕಾರಕ ಎಂದು ತಿಳಿಸಿದರು.

`ಇದೇ ಸಂದರ್ಭದಲ್ಲಿ ಹಿರಿಯ ಲೇಖಕ, ಅಂಕಣ ಕಾರ ಸನತ್‍ಕುಮಾರ್ ಬೆಳಗಲಿ ಅವರು ಪುಸ್ತಕ ಬಿಡುಗಡೆ ಮಾಡಿದರು. ಪ್ರೇಮ ವಿವಾಹಗಳಿಂದ ಸಾಮಾ ಜಿಕ ಬದಲಾವಣೆ; ಸಾಧಕ-ಬಾಧಕಗಳು’ ಕುರಿತು ಸಂವಾದ ನಡೆಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಚಿಂತಕಿ ಡಾ.ವಸುಂಧರಾ ಭೂಪತಿ, ಕೃಷ್ಣ ಜನಮನ ಇನ್ನಿತರರು ಉಪಸ್ಥಿತರಿದ್ದರು.

Translate »