ವಿಧಾನಪರಿಷತ್ ಚುನಾವಣೆ; ಬಿಜೆಪಿ ಸೋಲಿಗೆ  ಕಾಂಗ್ರೆಸ್‍ನಿಂದ ವ್ಯಾಪಕ ಹಣ ಹಂಚಿಕೆ ಕಾರಣ
ಮೈಸೂರು

ವಿಧಾನಪರಿಷತ್ ಚುನಾವಣೆ; ಬಿಜೆಪಿ ಸೋಲಿಗೆ ಕಾಂಗ್ರೆಸ್‍ನಿಂದ ವ್ಯಾಪಕ ಹಣ ಹಂಚಿಕೆ ಕಾರಣ

June 20, 2022

ಮೈಸೂರು,ಜೂ.19(ಪಿಎಂ)- ನಾಲ್ಕು ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳಲ್ಲಿ ಪರಾಭವಗೊಳ್ಳಲು ಕಾಂಗ್ರೆಸ್‍ನಿಂದ ಹಣ ಹಂಚಿಕೆ ಕಾರಣ ಎಂದು ಆರೋಪಿಸಿದ ವಿಧಾನ ಪರಿಷತ್ ಸದಸ್ಯರೂ ಆದ ಮೈಸೂರು ವಿಭಾಗದ ಬಿಜೆಪಿ ಉಸ್ತುವಾರಿ ರವಿಕುಮಾರ್, ಅದಾಗ್ಯೂ ಸೋಲಿನ ಪರಮಾರ್ಶೆಗಾಗಿ ಪಕ್ಷದ ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸಿ ಸಮಿತಿ ರಚಿಸುವುದಾಗಿ ತಿಳಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಚುನಾವಣೆಯಲ್ಲಿ ನಮಗೆ ಎರಡು ಸ್ಥಾನ ಗಳು ಉಳಿದುಕೊಂಡಿವೆ. ದಕ್ಷಿಣ ಪದವೀಧರರ ಕ್ಷೇತ್ರ ಮಾತ್ರ ವಲ್ಲದೆ, ಈ ಚುನಾವಣೆಯಲ್ಲಿ ಎಲ್ಲಾ ನಾಲ್ಕು ಸ್ಥಾನ ಗಳನ್ನು ಬಿಜೆಪಿ ಗೆಲ್ಲುತ್ತದೆ ಎಂಬ ವಿಶ್ವಾಸ ಇತ್ತು. ಆದರೆ ಎರಡರಲ್ಲಿ ಸೋಲು ಕಾಣಬೇಕಾಯಿತು. ಇದಕ್ಕೆ ಕಾರಣ ನಾನು ನೇರವಾಗಿ ಹೇಳುತ್ತೇನೆ. ಕಾಂಗ್ರೆಸ್‍ನವರು ವಿಪರೀತ ವಾಗಿ ಹಣ ಹಂಚಿದ್ದಾರೆ ಎಂದು ಆರೋಪಿಸಿದರು.

ಅದಾಗ್ಯೂ ವಾಯವ್ಯ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ್ ಮತ್ತು ಇಲ್ಲಿ ಮೈ.ವಿ.ರವಿಶಂಕರ್ ಸೋಲಿನ ಕಾರಣ ತಿಳಿಯಲು ರಾಜ್ಯಾಧ್ಯಕ್ಷರೊಂದಿಗೆ ಮಾತನಾಡಿ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಪ್ರಸ್ತುತ ಚುನಾವಣೆಯಲ್ಲಿ ಹಣ, ಜಾತಿ ಇವೆಲ್ಲವೂ ನಡೆಯುತ್ತಿದೆ. ಪಕ್ಷ ಈ ಬಗ್ಗೆ ಚರ್ಚೆ ಮಾಡಿ ಎಲ್ಲಾ ಸವಾಲುಗಳಿಗೆ ಉತ್ತರ ಕಂಡುಕೊಳ್ಳಲಿದೆ ಎಂದರಲ್ಲದೆ, ಕೆಲವು ವಿಷಯಗಳನ್ನು ಮಾಧ್ಯಮಗಳೊಂದಿಗೆ ನೇರವಾಗಿ ಹೇಳಲು ಸಾಧ್ಯವಿಲ್ಲ. ಎಲ್ಲಿ ಓಟು ಕಡಿಮೆಯಾಯಿತು ಎಂದು ಚರ್ಚೆ ಮಾಡುತ್ತೇವೆ. ಕೆಲವು ಸಂದರ್ಭದಲ್ಲಿ ಬಹಿರಂಗವಾಗಿ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾಲ ಮಿಂಚಿ ಹೋಗಿದ್ದು ಚಿಂತಿಸಿ ಫಲವಿಲ್ಲ. ಆದರೆ ಮುಂದೆ ಹೀಗಾದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳ ಲಿದ್ದೇವೆ. ಈ ನಿಟ್ಟಿನಲ್ಲಿ ಸೋಲಿನ ಪರಮಾರ್ಶೆಗೆ ಸಮಿತಿ ರಚನೆ ಮಾಡಲಿದ್ದೇವೆ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಮೈ.ವಿ.ರವಿಶಂಕರ್ 2ನೇ ಬಾರಿಗೆ ಸೋಲು ಕಂಡಿ ದ್ದಾರೆ. ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆ ಗಳಿಂದ ಪರಿಷತ್‍ಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕೌಟಿಲ್ಯ ರಘು ಪರಾಭವಗೊಂಡರು. ಇದರಿಂದ ನಾವು ಪಾಠ ಕಲಿಯಬೇಕಿದೆ. ಮುಂದಿನ ದಿನಗಳಲ್ಲಿ ಈಗ ಆಗಿರುವ ನ್ಯೂನತೆ ಸರಿಪಡಿಸಿಕೊಳ್ಳ ಬೇಕಿದೆ. ಬೇರೆ ಬೇರೆ ಆಸೆ ಆಮಿಷಗಳನ್ನು ಕಾಂಗ್ರೆಸ್ ನವರು ತೋರಿಸಿದ್ದಾರೆ. ಇದೆಲ್ಲವೂ ಚುನಾವಣೆಯಲ್ಲಿ ಸೋಲಲು ಕಾರಣವಾಗಿದೆ. ಜೊತೆಗೆ ಕಾರ್ಯಕರ್ತರು, ಮುಖಂಡರು ಇನ್ನಷ್ಟು ತೊಡಗಿಕೊಳ್ಳಬೇಕಿತ್ತು ಎಂದು ಎಂಎಲ್‍ಸಿ ರವಿಕುಮಾರ್ ತಿಳಿಸಿದರು.

ನಿಮ್ಮ ಪಕ್ಷದ ನಾಯಕರಲ್ಲಿನ ಸಮನ್ವಯದ ಕೊರತೆ ಕಾರಣವೇ? ಎಂಬುದಕ್ಕೆ ಉತ್ತರಿಸಿ, ಇನ್ನಷ್ಟು ಸರಿಪಡಿಸಿ ಕೊಳ್ಳಬೇಕು. ಪಕ್ಷದ ಆಂತರಿಕ ವಿಚಾರಗಳನ್ನು ಚರ್ಚೆ ಮಾಡಿ, ಸರಿಪಡಿಸಿಕೊಳ್ಳುತ್ತೇವೆ. ರಾಜ್ಯದ ವರಿಷ್ಠರು ಈ ಚುನಾವಣೆ ಸಂಬಂಧ ಎಲ್ಲವನ್ನೂ ಗಮನಿಸಿದ್ದಾರೆ ಎಂದರು. ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದ ರಾಜು, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಪ್ರತಾಪ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »