ಪ್ರಧಾನಿ ಮೋದಿ ಮೈಸೂರು ಭೇಟಿ ಹಿನ್ನೆಲೆ; ವೃತ್ತಗಳಿಗೆ ಅಲಂಕಾರ
ಮೈಸೂರು

ಪ್ರಧಾನಿ ಮೋದಿ ಮೈಸೂರು ಭೇಟಿ ಹಿನ್ನೆಲೆ; ವೃತ್ತಗಳಿಗೆ ಅಲಂಕಾರ

June 20, 2022

ಮೈಸೂರು,ಜೂ.19(ಪಿಎಂ)- ಪ್ರಧಾನಿ ನರೇಂದ್ರ ಮೋದಿಯವರ ಮೈಸೂರು ಭೇಟಿ ಹಿನ್ನೆಲೆಯಲ್ಲಿ ಅವರು ಸಂಚರಿಸುವ ಮಾರ್ಗದ ವೃತ್ತಗಳನ್ನು ಪಕ್ಷದ ಧ್ವಜದೊಂದಿಗೆ ಅಲಂಕರಿಸಲಾಗುವುದು. ಅಲ್ಲದೆ, ರಸ್ತೆ ಇಕ್ಕಲಗಳಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಪ್ರಧಾನಿಗಳಿಗೆ ಸ್ವಾಗತ ಕೋರಲಿದ್ದಾರೆ ಎಂದು ಪರಿಷತ್ ಸದಸ್ಯರೂ ಆದ ಮೈಸೂರು ವಿಭಾ ಗದ ಬಿಜೆಪಿ ಉಸ್ತುವಾರಿ ರವಿಕುಮಾರ್ ತಿಳಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹೆಮ್ಮೆಯ ನಾಯಕ ಪ್ರಧಾನಿ ನರೇಂದ್ರ ಮೋದಿ ಯವರು ಜೂ.20 ಮತ್ತು 21ರಂದು ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿಗಳು ಐತಿಹಾಸಿಕ ನಗರ ಮೈಸೂರಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಅದ್ಧೂರಿ ಸ್ವಾಗತ ಕೋರುವ ಸಲುವಾಗಿ ಎಲ್ಲಾ ವೃತ್ತ ಗಳಲ್ಲಿ ಪಕ್ಷದ ಧ್ವಜ ಅಳವಡಿಸಿ ಅಲಂಕಾರ ಮಾಡಲಿ ದ್ದೇವೆ. ಮಾರನೇ ದಿನ ಅವುಗಳನ್ನು ತೆರವುಗೊಳಿಸುವ ಕೆಲಸವನ್ನೂ ಮಾಡಲಿದ್ದೇವೆ. ಸುಮಾರು 34 ವೃತ್ತ ಗಳನ್ನು ಅಲಂಕಾರ ಮಾಡಲಾಗುತ್ತಿದೆ ಎಂದರು.

ಪ್ರಧಾನಿಗಳು ಸಾಗುವ ರಸ್ತೆ ಇಕ್ಕಲಗಳಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಸ್ವಾಗತ ಮಾಡ ಲಿದ್ದಾರೆ. ಕೇಂದ್ರದ ಆಯುಷ್ ಇಲಾಖೆ ಸಚಿವ ಸರ್ಬಾ ನಂದ ಸೋನಾವಾಲ್ ಸಹ ಪ್ರಧಾನಿಗಳೊಂದಿಗೆ ಆಗಮಿಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಚಿವರಾದ ಗೋಪಾಲಯ್ಯ, ವಿ.ಸೋಮಣ್ಣ ಸಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.

ಜೂ.20ರಂದು ಬೆಂಗಳೂರಿನಲ್ಲಿ ಅನೇಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ಅಂದು ಸಂಜೆ 6ಕ್ಕೆ ಮೈಸೂ ರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸರ್ಕಾ ರದ ವತಿಯಿಂದ ಹಮ್ಮಿಕೊಂಡಿರುವ ಕೇಂದ್ರ ಸರ್ಕಾ ರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪ್ರಧಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ರವಿಕುಮಾರ್ ತಿಳಿಸಿದರು.

ಯೋಜನೆಗಳ ಫಲಾನುಭವಿಗಳು 30 ಸಾವಿರಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪೈಕಿ 8ರಿಂದ 10 ಸಾವಿರ ಮಂದಿ ಪಕ್ಷದ ಕಾರ್ಯಕರ್ತರ ಸಂಪರ್ಕದಲ್ಲಿರುವ ಫಲಾನುಭವಿ ಗಳಾದರೆ, ಉಳಿದವರನ್ನು ವಿವಿಧ ಇಲಾಖೆಗಳು ಗುರುತಿಸಿ ಕರೆತರಲಿದ್ದಾರೆ ಎಂದು ತಿಳಿಸಿದರು.
ಜೂ.21ರಂದು ನಡೆಯುವ ಯೋಗ ದಿನಾಚರಣೆ ಮುಖ್ಯ ಕಾರ್ಯಕ್ರಮವಾಗಿದ್ದು, ನಮ್ಮ ದೇಶ ಯೋಗ, ತ್ಯಾಗ ಮತ್ತು ಸಂಸ್ಕøತಿಗೆ ಹೆಸರುವಾಸಿ ಯಾಗಿದೆ. ಈ ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿಗೆ ತಿಳಿಸುತ್ತಿದ್ದಾರೆ. ಯೋಗ ನಮ್ಮ ಜೀವನದ ಭಾಗವಾಗಬೇಕೆಂದು ಆಗಿಂದಾಗೆ ಹೇಳುವ ಮೂಲಕ ಕೋಟ್ಯಂತರ ಜನ ತಮ್ಮ ಜೀವನದಲ್ಲಿ ಯೋಗ ರೂಢಿಸಿಕೊಳ್ಳಲು ಪ್ರಧಾನಿಗಳು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ಪ್ರಧಾನಿಗಳ ಮೈಸೂರು ಭೇಟಿ ಸಂಬಂಧ ಬಿಜೆಪಿಯವರು `ಮೋದಿ ದಸರಾ’ ಮಾಡಲು ಹೊರಟ್ಟಿ ದ್ದಾರೆಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ವಿರೋಧ ಏಕೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಪ್ರಧಾನಿ ಗಳು ಯೋಗದ ಬಗ್ಗೆ ಜಾಗೃತಿ ಮೂಡಿಸಲು ಬರುತ್ತಿ ದ್ದಾರೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಉತ್ತೇಜನ ನೀಡಲಿ ದ್ದಾರೆ ಎಂದರು. ಪಾಪ ವಿರೋಧಿಸುವವರಿಗೆ ಹೊಟ್ಟೆಬೇನೆ ಇರಬಹುದು. ಏಕೆಂದರೆ ಎಲ್ಲಾ ವ್ಯವಸ್ಥೆ ಮಾಡಿ ಕರೆದುಕೊಂಡು ಹೋಗುತ್ತೇವೆ ಎಂದರೂ ವಿರೋಧಿಸುತ್ತಿರುವವರ ಜೊತೆಗೆ ಜನ ಬರುವುದಿಲ್ಲ. ಅದೇ ಮೋದಿಯವರು ಬರುವೆಡೆ ಲಕ್ಷಾಂತರ ಮಂದಿ ಸೇರುತ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್, ಜೆಡಿಎಸ್‍ನಂತೆ ಅಲ್ಲ, ನಮ್ಮದು ಧರ್ಮ ಅಳವಡಿಸಿಕೊಂಡ ಪಕ್ಷ: ಇದು ಮುಂದಿನ ವಿಧಾನ ಸಭಾ ಚುನಾವಣೆಗೆ ಪೂರಕವಾಗಿ ನಡೆಯುತ್ತಿರುವ ಕಾರ್ಯಕ್ರಮ ಎಂಬ ಆರೋಪವಿದೆ ಎಂಬುದಕ್ಕೆ ಉತ್ತರಿಸಿ, ಚುನಾವಣೆ ಇರಲಿ, ಇಲ್ಲದಿರಲಿ ಯೋಗ ದಿನಾಚರಣೆ ನಡೆಯುತ್ತದೆ. ನಮ್ಮ ಪಕ್ಷವು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇನ್ನಾವುದೂ ಪಕ್ಷದಂತೆ ಅಲ್ಲ. ಯೋಗ ಮತ್ತು ಧರ್ಮ ಹಾಗೂ ಈ ದೇಶಕ್ಕೆ ಅಗತ್ಯ ವಿರುವ ಚಟುವಟಿಕೆಗಳನ್ನು ಅಳವಡಿಸಿಕೊಂಡಿರುವ ಪಕ್ಷ ನಮ್ಮದು. ಚುನಾವಣೆಗೆ ಇನ್ನು ಸಾಕಷ್ಟು ತಿಂಗಳು ಇದ್ದು, ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದರು.

Translate »