ಮೈಸೂರಿಗೆ ಬೃಹತ್ ಯೋಜನೆಗಳ ಮಹಾಪೂರ; ಟೀಂ ಮೈಸೂರು
ಮೈಸೂರು

ಮೈಸೂರಿಗೆ ಬೃಹತ್ ಯೋಜನೆಗಳ ಮಹಾಪೂರ; ಟೀಂ ಮೈಸೂರು

June 21, 2022

ಮೈಸೂರು,ಜೂ.20(ಪಿಎಂ)- ಪ್ರಧಾನಿ ನರೇಂದ್ರ ಮೋದಿ ಯವರ ವಿಶೇಷ ಕಾಳಜಿಯಿಂದ ಮೈಸೂರಿಗೆ ಬೃಹತ್ ಯೋಜನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿಗಳ ಗಮನ ಸೆಳೆದು ಮೈಸೂ ರಿಗೆ ಯೋಜನೆಗಳು, ಅನುದಾನ ತರುವ ಮೂಲಕ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಸಂಸದ ಪ್ರತಾಪ್ ಸಿಂಹ ಶ್ರಮಿಸುತ್ತಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿ ರುವ ಟೀ ಮೈಸೂರು, ಇದಕ್ಕಾಗಿ ಪ್ರಧಾನಿ ಮತ್ತು ಸಂಸದರಿಗೆ ಮೈಸೂರಿನ ಜನತೆ ಪರವಾಗಿ ಧನ್ಯವಾದ ಅರ್ಪಿಸಿದೆ.
ಮೈಸೂರು ಸಮೀಪದ ನಾಗನಹಳ್ಳಿ ಬಳಿ ರೈಲ್ವೆ ನಿಲ್ದಾಣ ಮರು ವಿನ್ಯಾಸಕ್ಕೆ 500 ಕೋಟಿ ರೂ. ಯೋಜನೆ ತರಲು ಪ್ರತಾಪ್ ಸಿಂಹ ಸತತ ಶ್ರಮಿಸಿದ್ದಾರೆ. ಇವರ ಶ್ರಮಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹಕರಿಸಿದ್ದಾರೆ. ಮೈಸೂರಿಗೆ ಮಾಮೂಲಾಗಿ ಕೊಡುವುದಕ್ಕಿಂತ ಹೆಚ್ಚಾಗಿ ಕೊಟ್ಟು ಪ್ರಧಾನಿಗಳು ಮೈಸೂರಿಗೆ ಭೇಟಿ ನೀಡಿದ್ದಾರೆ. ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಆವ ರಣದಲ್ಲಿ ಕೇಂದ್ರ ಸರ್ಕಾರದ ಅನುದಾನ 155.49 ಕೋಟಿ ರೂ. ವೆಚ್ಚದಲ್ಲಿ ಶ್ರೇಷ್ಠತಾ ಕೇಂದ್ರ ನಿರ್ಮಿಸಲಾಗಿದೆ. ಜೊತೆಗೆ ಮೈಸೂರು -ಬೆಂಗಳೂರು ದಶಪಥ ರಸ್ತೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಇದರಿಂದ ಮೈಸೂರು-ಬೆಂಗಳೂರು ಅವಳಿ ನಗರಗಳ ಮಾದರಿ ಅಭಿವೃದ್ಧಿ ಹೊಂದು ತ್ತವೆ. ಪ್ರಧಾನಿಯವರ ವಿಶೇಷ ಕಾಳಜಿ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಉತ್ತೇಜನದಿಂದ ಈ ಬೃಹತ್ ಯೋಜನೆ ಅನುಷ್ಠಾನಗೊಳ್ಳಲು ಸಂಸದರು ಶ್ರಮಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣವನ್ನು ಅಂತಾ ರಾಷ್ಟ್ರೀಯ ದರ್ಜೆಗೆ ಏರಿಸುವ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. 1,820 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಗೊಳ್ಳುತ್ತಿದೆ. ಅಲ್ಲದೆ, ಮೈಸೂರಿನ ಬಳಿ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಲಾಗಿದೆ. ಕಡಕೊಳ ಬಳಿ ಬಹುಪಯೋಗಿ ಕಂಟೈನರ್ ಘಟಕ ಸ್ಥಾಪನೆ ಸೇರಿದಂತೆ ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಮುಂಬರುವ ದಿನಗಳಲ್ಲಿ ಮೈಸೂರಿನ ಛಾಪನ್ನು ವಿಶ್ವಭೂಪಟ ದಲ್ಲಿ ಮೂಡಿಸಲಿವೆ. ರಸ್ತೆ, ವಿಮಾನ ಹಾಗೂ ರೈಲ್ವೆ ಸಂಪರ್ಕಗಳು ಯಾವುದೇ ನಗರದ ಬೆಳವಣಿಗೆಗೆ ಅನಿವಾರ್ಯ.

ಮೈಸೂರು ಈ ನಿಟ್ಟಿನಲ್ಲಿ ಬೆಳವಣಿಗೆ ಹೊಂದಲು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ, ಸಚಿವರು ಹಾಗೂ ಸಂಸದರ ಶ್ರಮ ಮುನ್ನುಡಿ ಬರೆಯುತ್ತಿದ್ದು, ಮೈಸೂರು ಇಂದು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಮೈಸೂರಿನ ಅಭಿವೃದ್ಧಿಗೆ ಕಾಳಜಿ ತೋರಿದ ಪ್ರಧಾನಿಗಳು, ಶ್ರಮಿಸುತ್ತಿರುವ ಸಂಸದರು, ಸಚಿವರು ಹಾಗೂ ಅಧಿಕಾರಿ ವರ್ಗಕ್ಕೆ ಟೀಂ ಮೈಸೂರು ಕಡೆಯಿಂದ ಮೈಸೂರಿನ ಜನತೆ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಟೀಂನ ಯಶ್ವಂತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »