ಮತದಾರರನ್ನು ಸೆಳೆಯಲು ಸ್ವೀಪ್ ಕಾರ್ಯಕ್ರಮ
ಮೈಸೂರು

ಮತದಾರರನ್ನು ಸೆಳೆಯಲು ಸ್ವೀಪ್ ಕಾರ್ಯಕ್ರಮ

March 12, 2019

ಮೈಸೂರು: ಮತದಾರರನ್ನು ಸೆಳೆದು ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ‘ಸ್ವೀಪ್’ ಕಾರ್ಯ ಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಮೈಸೂರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜ್ಯೋತಿ ತಿಳಿಸಿದ್ದಾರೆ.

ಮಾರ್ಚ್ 4ರವರೆಗೆ 36,163 ಯುವ ಮತದಾ ರರನ್ನು ನೋಂದಾಯಿಸಲಾಗಿದೆ. ಸ್ವೀಪ್ ಸಮಿತಿ ಯಿಂದ ಕಾಲೇಜುಗಳಿಗೆ ಭೇಟಿ ನೀಡಿ ನಮೂನೆ-6ರ ಮೂಲಕ ಬಿಟ್ಟು ಹೋಗಿರುವ ಮತದಾರರನ್ನು ಸೇರಿಸುವ ಪ್ರಯತ್ನ ಮಾಡಲಾಗಿದೆ.

ಶಾಲಾ ಕಾಲೇಜುಗಳಲ್ಲಿ 1145 ‘ಮತದಾರರ ಸಾಕ್ಷ ರತಾ ಕ್ಲಬ್’ಗಳನ್ನು ರಚಿಸಿ ಆ ಮೂಲಕ ವಿದ್ಯಾರ್ಥಿ ಗಳು ಹಾಗೂ ಪೋಷಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜಾಗೃತಿ ಜಾಥಾ, ಬೀದಿ ನಾಟಕಗಳನ್ನು ನಡೆಸಿ ಮತದಾನ ಸಂವಿಧಾನಬದ್ಧ ಹಕ್ಕು ಎಂಬ ಅರಿವು ಮೂಡಿಸಲಾಗಿದೆ.

ಸಾರ್ವಜನಿಕ ಸ್ಥಳ, ಬಸ್, ರೈಲುಗಳ ಟಿಕೆಟ್‍ನಲ್ಲಿ, ಹಾಲಿನ ಪ್ಯಾಕೆಟ್‍ಗಳ ಮೇಲೆ ‘ನಿಮ್ಮ ಮತ-ನಿಮ್ಮ ಹಕ್ಕು’ ಎಂದು ನಮೂದಿಸಲಾಗಿದೆ. ಡಿಜಿಟಲ್ ಡಿಸ್‍ಪ್ಲೇ, ಚಾಮುಂಡಿಬೆಟ್ಟದ ಮೇಲೆ ವಿದ್ಯುತ್ ದೀಪಾಲಂಕಾ ರದ ಫಲಕದಲ್ಲೂ ಮತದಾನ ಜಾಗೃತಿ ಮೂಡಿಸಲಾ ಗುತ್ತಿದೆ ಎಂದು ಜ್ಯೋತಿ ಹೇಳಿದರು.

ಮತಗಟ್ಟೆಗಳಲ್ಲಿ ಅಂಗವಿಕಲರಿಗಾಗಿ ರ್ಯಾಂಪ್, ಅವರನ್ನು ಮನೆಯಿಂದ ಕರೆತಂದು ಮತ್ತೆ ಬಿಡಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. 1829 ಮತ ಕೇಂದ್ರಗಳಲ್ಲಿ ವಿಶೇಷ ಚೇತನರು ಹಾಗೂ ವೃದ್ಧರಿಗೆ ಗಾಲಿ ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿದೆ.
ಮಾಧ್ಯಮ ಕೇಂದ್ರ: ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉಪ ವಿಭಾಗಾಧಿಕಾರಿ ಕಚೇರಿ ಕೋರ್ಟ್ ಹಾಲ್‍ನಲ್ಲಿ ಮಾಧ್ಯಮ ಕೇಂದ್ರ (ಮೀಡಿಯಾ ಸೆಂಟರ್) ಮಂಗಳವಾರ ಆರಂಭಿಸ ಲಾಗುವುದು.

ಮಾಧ್ಯಮಗಳಲ್ಲಿ ಬಿತ್ತರವಾಗುವ ಚುನಾ ವಣಾ ಸಂಬಂಧಿತ ವರದಿ, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿನ ಪ್ರಚಾರ ಸುದ್ದಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನೀಡುವ ಹೇಳಿಕೆಗಳನ್ನು ಕೇಂದ್ರದಲ್ಲಿ ಗಮನಿಸಿ, ಉಲ್ಲಂಘನೆಯಾದರೆ ಸಂಬಂಧಿಸಿದವರಿಗೆ ನೋಟೀಸ್ ಜಾರಿ ಮಾಡಲಾಗುವುದು.

Translate »