ಮೈಸೂರು ಮಹಾನಗರ ಪಾಲಿಕೆ ವಾರ್ಡ್‍ವಾರು ಮತದಾರರ ಪರಿಷ್ಕೃತ  ಪಟ್ಟಿ ಸಿದ್ಧ
ಮೈಸೂರು

ಮೈಸೂರು ಮಹಾನಗರ ಪಾಲಿಕೆ ವಾರ್ಡ್‍ವಾರು ಮತದಾರರ ಪರಿಷ್ಕೃತ ಪಟ್ಟಿ ಸಿದ್ಧ

June 12, 2018

ಮೈಸೂರು:  ರಾಜ್ಯಾದ್ಯಂತ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮುಗಿದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿರುವ ಬೆನ್ನಲ್ಲೇ ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಸೆಪ್ಟೆಂ ಬರ್ ಮಾಹೆಯಲ್ಲಿ ನಡೆಯಬೇಕಿರುವ ಚುನಾ ವಣೆಗೆ ಮೈಸೂರು ಮಹಾನಗರ ಪಾಲಿಕೆಯು ಸಿದ್ಧತೆ ಮಾಡುತ್ತಿದ್ದು, ಈಗಾಗಲೇ ಮೈಸೂರಿ ನಲ್ಲಿರುವ 65 ವಾರ್ಡ್‍ಗಳನ್ನು ಪುನರ್ ವಿಂಗ ಡಣೆ ಮಾಡಲಾಗಿದೆ. ಆ ಬಗ್ಗೆ ರಾಜ್ಯ ಪತ್ರದಲ್ಲಿ ಅಧಿಸೂಚನೆಯನ್ನೂ ಪ್ರಕಟಿಸಲಾಗಿದೆ. ಮೈಸೂರು ಮಹಾ ನಗರಪಾಲಿಕೆ ಸೇರಿದಂತೆ ರಾಜ್ಯದ 116 ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಸೆಪ್ಟೆಂಬರ್ ಮಾಹೆಯಲ್ಲಿ ನಡೆಸಲು ಭಾರತ ಚುನಾವಣಾ ಆಯೋಗವು ನಿರ್ದೇಶನ ನೀಡಿದ್ದು, ಆಗಸ್ಟ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಪ್ರಸ್ತುತ ಜೆಡಿಎಸ್-ಬಿಜೆಪಿ ಮೈತ್ರಿ ಆಡಳಿತ ನಡೆಸುತ್ತಿರುವ ಮೈಸೂರು ನಗರಪಾಲಿಕೆ ಅಧಿಕಾರಾವಧಿ ಸೆ.5ಕ್ಕೆ ಅಂತ್ಯಗೊಳ್ಳಲಿದೆ.

ಮುಂಬರುವ ಚುನಾವಣೆಗಾಗಿ ಪಾಲಿಕೆಯು ಪುನರ್‍ವಿಂಗಡಣೆಯಾಗಿರುವ ವಾರ್ಡ್‍ವಾರು ಮತದಾರರ ಪಟ್ಟಿ ಸಿದ್ಧಪಡಿಸಿದ್ದು, ಈಗಾಗಲೇ ಜಿಲ್ಲಾಧಿಕಾರಿಯಿಂದ ಅನುಮೋದನೆ ಪಡೆದುಕೊಂಡು ಇಂದು ಸಂಜೆ ಪಾಲಿಕೆ ಆಯುಕ್ತರು ಪಟ್ಟಿ ಪ್ರಕಟಿಸಿದ್ದಾರೆ. ವೆಬ್‍ಸೈಟ್‍ನಲ್ಲಿ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಪಾಲಿಕೆಯೊಂದಿಗೆ ಟಿ.ನರಸೀಪುರ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ಪಟ್ಟಣ ಮುನಿಸಿಪಲ್ ಕೌನ್ಸಿಲ್‍ಗಳಿಗೂ ನಡೆಯಲಿದೆ.

ಚುನಾವಣೆಗಳಿಗೆ ಪೂರ್ವ ಸಿದ್ಧತೆ ನಡೆಸಿ ಜೂ.11ರೊಳಗೆ ಪರಿಷ್ಕೃತ ಮತದಾರರ ಪಟ್ಟಿ ಸಿದ್ಧಪಡಿಸುವಂತೆ ಚುನಾವಣಾ ಆಯೋಗವು ಸೂಚನೆ ನೀಡಿತ್ತು. ಜೂ.27ರಂದು ಪರಿಷ್ಕೃತ ಮತದಾರರ ಅಂತಿಮ ಅಧಿಕೃತ ಪಟ್ಟಿಯನ್ನು ಆಯೋಗವು ಪ್ರಕಟಿಸಲಿದೆ. ಇವಿಎಂಗಳನ್ನು ಪರಿಶೀಲಿಸಿ ಸಿದ್ಧ ವಿರಿಸಿಕೊಳ್ಳಬೇಕು. ಜನಸಂಖ್ಯೆಗನುಸಾರ ಪುನರ್‍ವಿಂಗಡಿಸಿರುವ ವಾರ್ಡ್‍ಗಳಿಗೆ ಸಂಖ್ಯೆಗಳನ್ನು ನೀಡಿ, ಮತದಾರನ ಕೇಂದ್ರಗಳನ್ನು ಗುರುತಿಸಬೇಕೆಂದೂ ಆಯೋಗ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ. 13,000ದಿಂದ 15,000 ಮತದಾರರ ಸಂಖ್ಯೆ ಗನುಸಾರ ಮೈಸೂರಿನ ಎಲ್ಲಾ ವಾರ್ಡ್‍ಗಳನ್ನು ಪುನರ್‍ವಿಂಗಡಣೆ ಮಾಡಲಾಗಿದೆ. ವಾರ್ಡ್‍ಗಳ ಗಡಿಯನ್ನೂ ಈಗಾಗಲೇ ಗುರುತಿಸಿ, ನಕ್ಷೆ ತಯಾರಿಸಲಾಗಿದೆ.

Translate »