ಮತದಾರರ ಪಟ್ಟಿ ದೃಢೀಕರಿಸಿಕೊಳ್ಳಲು ನ.18ರವರೆಗೆ ಕಾಲಾವಕಾಶ
ಮೈಸೂರು

ಮತದಾರರ ಪಟ್ಟಿ ದೃಢೀಕರಿಸಿಕೊಳ್ಳಲು ನ.18ರವರೆಗೆ ಕಾಲಾವಕಾಶ

October 19, 2019

ಬೆಂಗಳೂರು: ಮತದಾರರ ದೃಢೀಕರಣ ಆಂದೋಲನದ (ಇವಿಪಿ) ಅವಧಿಯನ್ನು ನ.18ರವರೆಗೂ ವಿಸ್ತರಿಸಿ ಕೇಂದ್ರ ಚುನಾವಣಾ ಆಯೋಗ ಶುಕ್ರ ವಾರ ಆದೇಶ ಹೊರಡಿಸಿದೆ. `ಸಂಪೂರ್ಣ ದೋಷಮುಕ್ತ ಮತದಾರರ ಪಟ್ಟಿ’ ಸಿದ್ಧಪಡಿಸುವ ಉದ್ದೇಶದಿಂದಲೇ ಕೇಂದ್ರ ಚುನಾವಣಾ ಆಯೋಗ ಈ ಆಂದೋ ಲನವನ್ನು ಕೈಗೆತ್ತಿಕೊಂಡಿದೆ.

ಮತದಾನ ದಿನ ಮತದಾರರು ಪಟ್ಟಿಯಲ್ಲಿ ನಮ್ಮ ಹೆಸರಿಲ್ಲ, ವಿಳಾಸ ತಪ್ಪಾಗಿದೆ, ಬೂತ್ ಗೊಂದಲ ಎಂದು ದೂರುವಂತಾಗಬಾರದು. ಹಾಗಾಗಿ ಮತದಾರರ ಪಟ್ಟಿಯಲ್ಲಿನ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಆಯೋಗವು ಈ ಆಂದೋಲನ ನಡೆಸಿದೆ. ದೋಷಮುಕ್ತ ಮತದಾರರ ಪಟ್ಟಿ ಯೊಂದಿಗೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಬೇಕೆಂಬುದು ಆಯೋಗದ ಆಶಯವಾಗಿದೆ.

ಮತದಾರರು ತಮ್ಮ ಹೆಸರು, ಭಾವ ಚಿತ್ರ, ಜನ್ಮ ದಿನಾಂಕ, ತಂದೆ ಹೆಸರು, ವಿಳಾಸ ಮತ್ತಿತರ ವಿವರಗಳನ್ನು ಪರಿ ಶೀಲಿಸಿ, ಯಾವುದೇ ತಪ್ಪುಗಳಿದ್ದರೆ ಸರಿ ಪಡಿಸಿಕೊಳ್ಳಬಹುದಾಗಿದೆ. ಈ ಕಾರ್ಯ ಶೇ.100ರಷ್ಟು ಪರಿಪೂರ್ಣವಾಗಿರಬೇಕು. ಎಲ್ಲಾ ಮತದಾರರು ತಮ್ಮ ವಿವರಗಳನ್ನು ದೃಢೀಕರಿಸಿಕೊಳ್ಳಬೇಕು ಎಂದೇ ಈ ಕಾರ್ಯದ ಗಡುವನ್ನು ಮತ್ತಷ್ಟು ವಿಸ್ತರಿ ಸಿದ್ದೇವೆ ಎಂದು ಮುಖ್ಯ ಚುನಾವಣಾಧಿ ಕಾರಿ (ಸಿಇಓ) ಸಂಜೀವ್‍ಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.

ಪ್ರವಾಹದಿಂದ ಹಿನ್ನಡೆ: ಪ್ರವಾಹದ ಪರಿಸ್ಥಿತಿ ಇದ್ದ ಕಾರಣ ಬೆಳಗಾವಿ, ಬಾಗಲ ಕೋಟೆ, ಧಾರವಾಡ ಜಿಲ್ಲೆಗಳಲ್ಲಿ ಈ ಆಂದೋ ಲನಕ್ಕೆ ಹಿನ್ನಡೆಗೆಯಾಗಿದೆ. ‘ರಾಜ್ಯದಲ್ಲಿ ಒಟ್ಟು 5,10,69,354
ಮತದಾರರಿದ್ದು, ಈವರೆಗೆ 1,88,06,866 ಮಂದಿ(ಶೇ.37) ಮತ ದಾರರ ಪಟ್ಟಿಯಲ್ಲಿನ ತಮ್ಮ ವಿವರಗಳನ್ನು ಪರಿಶೀಲಿಸಿ ದೃಢೀಕರಿಸಿದ್ದಾರೆ. ಪರಿಷ್ಕರಣೆಯಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನ(ಶೇ.81)ದಲ್ಲಿದೆ. ಬೆಳಗಾವಿ ಜಿಲ್ಲೆ ಕೊನೆ ಸ್ಥಾನ(ಶೇ.6ಕ್ಕೆ)ದಲ್ಲಿದೆ ಎಂದರು.

ನಾಗರಿಕರು ಮತದಾರರ ಪಟ್ಟಿ ಪರಿಶೀಲಿಸಿ, ಯಾವುದೇ ಸಣ್ಣಪುಟ್ಟ ಲೋಪ ವಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸುವುದು. ಮತದಾರರ ಸೇವೆ ಸುಧಾರಣೆ, ದೋಷಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸುವುದು. ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡ ವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿರುವ ಹೆಸರನ್ನು ಕೈಬಿಡುವುದು. ಮತದಾರರ ಅನುಕೂಲಕ್ಕೆ ಮತಗಟ್ಟೆ ಬದಲಾವಣೆ ಕೋರಿಕೆಗಳನ್ನು ಪರಿಗಣಿಸಲು ಸಾಧ್ಯವಿದ್ದು, `ವೋಟರ್ ಹೆಲ್ಪ್‍ಲೈನ್’ ಮೊಬೈಲ್ ಆ್ಯಪ್ ಮೂಲಕ ಮತದಾರರು ತಿದ್ದುಪಡಿ ಮಾಡಬಹುದು. ಸಾಮಾನ್ಯ ಸೇವಾ ಕೇಂದ್ರ (ಸಿಎಸ್‍ಸಿ)ಗಳಿಗೆ ಖುದ್ದಾಗಿ ಭೇಟಿ ನೀಡಿಯೂ ಪಟ್ಟಿ ಪರಿಶೀಲಿಸಬಹುದು. ಇಆರ್‍ಒ ಕಚೇರಿಯಲ್ಲೂ ದೃಢೀಕರಣ ಮಾಡಿಕೊಳ್ಳಬಹುದು. ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದು.

Translate »