ಪೊಲೀಸ್ ಸರ್ಪಗಾವಲಲ್ಲಿ ಬಹು ನಿರೀಕ್ಷಿತ ರೈಲ್ವೆ ಕಂಟೇನರ್ ಕಾಮಗಾರಿ ಆರಂಭ
ಮೈಸೂರು

ಪೊಲೀಸ್ ಸರ್ಪಗಾವಲಲ್ಲಿ ಬಹು ನಿರೀಕ್ಷಿತ ರೈಲ್ವೆ ಕಂಟೇನರ್ ಕಾಮಗಾರಿ ಆರಂಭ

October 18, 2019

ಮೈಸೂರು, ಅ.17(ಆರ್‍ಕೆ)-ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷಿ ರೈಲ್ವೆ ಯೋಜನೆಯಾದ ಇನ್‍ಲ್ಯಾಂಡ್ ಕಂಟೇನರ್ ಡಿಪೋ ಕಾಮಗಾರಿಯು ಪೊಲೀಸ್ ಸರ್ಪಗಾವಲಿನಲ್ಲಿ ಬುಧವಾರ ಆರಂಭವಾಗಿದೆ.

ರೈಲ್ವೆ ಇಲಾಖೆಯ ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾ(ಛಿಛಿIಐ) ಲಿಮಿಟೆಡ್ ವತಿಯಿಂದ ಉದ್ದೇ ಶಿತ ಯೋಜನೆಗೆ ಕಡಕೊಳ ಸಮೀಪ 55 ಎಕರೆ ವಿಸ್ತಾರದ ಪ್ರದೇಶದಲ್ಲಿ ನಂಜನಗೂಡು ಮತ್ತು ಮೈಸೂರು ದಕ್ಷಿಣ ಗ್ರಾಮಾಂತರ ಠಾಣಾ ಪೊಲೀಸರ ಭಾರೀ ಭದ್ರತೆ ಯಲ್ಲಿ ಕಡೆಗೂ ಕಾಮಗಾರಿಗೆ ಚಾಲನೆ ದೊರೆತಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು 2017ರಲ್ಲೇ ಕಡಕೊಳ ಬಳಿ ರೈಲ್ವೇ ಇಲಾಖೆಗೆ 55 ಎಕರೆ ಭೂಮಿಯನ್ನು ಹಸ್ತಾಂತರಿಸಿತ್ತು. ಕಳೆದ ವರ್ಷ ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕಾಮಗಾರಿ ಆರಂಭಿಸಲು ಮುಂದಾದಾಗ ಭೂಮಿ ಮಾಲೀಕರೆನ್ನಲಾದ 55 ಮಂದಿ ಖಾತೆದಾರರು, ಪರಿಹಾರದ ಜೊತೆಗೆ ತಮ್ಮ ಕುಟುಂಬ ದವರಿಗೆ ರೈಲ್ವೇ ಇಲಾಖೆಯಲ್ಲಿ ಖಾಯಂ ಉದ್ಯೋಗ ನೀಡಬೇಕೆಂದು ಬೇಡಿಕೆ ಮುಂದಿಟ್ಟು ಕೆಲಸಕ್ಕೆ ಅಡ್ಡಿ ಪಡಿಸಿದ್ದರಿಂದ ಕಾಮಗಾರಿ ಆರಂಭವಾಗಿರಲಿಲ್ಲ.

ಕಡಕೊಳ ಗ್ರಾಮದ ಸರ್ವೆ ನಂಬರ್ 480ರಿಂದ 517ರವರೆಗಿನ ಭೂಮಿಯ 55 ರೈತರಿಂದ ಎಕರೆಗೆ 35 ಲಕ್ಷ ರೂ. ಪರಿಹಾರ ನೀಡಿ ಕೆಐಎಡಿಬಿಯು 2011 ರಿಂದ 2013ರ ಅವಧಿಯಲ್ಲಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ರೈಲ್ವೆ ಇಲಾಖೆಗೆ ಇನ್‍ಲ್ಯಾಂಡ್ ಕಂಟೇ ನರ್ ಡಿಪೋ ಯೋಜನೆಗಾಗಿ ಹಸ್ತಾಂತರಿಸಿತ್ತು. ರೈತರು ಪ್ರತಿಭಟನೆ ನಡೆಸಿ ಯೋಜನೆ ಜಾರಿಗೊಳಿ ಸಲು ಅಡ್ಡಿಪಡಿಸಿದ್ದರಿಂದ ಮಧ್ಯ ಪ್ರವೇಶಿಸಿದ ಜಿಲ್ಲಾ ಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಜಿ.ರಿಷ್ಯಂತ್ ಅವರು, ರೈತರು ಹಾಗೂ ಅಧಿಕಾರಿಗಳೊಂದಿಗೆ ಹಲವು ಸುತ್ತು ಮಾತುಕತೆ ನಡೆಸಿದ್ದ ಪರಿಣಾಮ, ಭೂ ಮಾಲೀಕರ ಮನೆವೊಲಿಸಿದ ಫಲವಾಗಿ ಬುಧವಾರ ಇನ್‍ಲ್ಯಾಂಡ್ ಕಂಟೇನರ್ ಡಿಪೋ ಕಾಮಗಾರಿಗೆ ಚಾಲನೆ ದೊರೆತಿದೆ.

ಮೈಸೂರು, ನಂಜನಗೂಡು ಸುತ್ತಲಿನ ಕೈಗಾರಿಕೆ ಗಳಲ್ಲಿ ಉತ್ದಾದನೆಯಾಗುವ ಉತ್ಪನ್ನಗಳನ್ನು ಹೊರದೇಶ ಗಳಿಗೆ ರಫ್ತು ಮಾಡಲು ಹಾಗೂ ಆಮದು ಮಾಡಿಕೊ ಳ್ಳಲು ಇನ್‍ಲ್ಯಾಂಡ್ ಕಂಟೇನರ್ ಡಿಪೋ ಮೂಲಕ ಬಂದರು ಪ್ರದೇಶಕ್ಕೆ ಸಾಗಿಸಲು ಅನುಕೂಲವಾಗುತ್ತದೆ.

ಮಂಗಳೂರು, ಬೆಂಗಳೂರಿನ ವೈಟ್‍ಫೀಲ್ಡ್ ಹೊರತುಪಡಿಸಿದರೆ ಕಡಕೊಳ ಸಮೀಪ ತಲೆ ಎತ್ತುತ್ತಿರುವುದು ಕರ್ನಾಟಕದ ಮೂರನೇ ಕಂಟೇನರ್ ಡಿಪೋ ಆಗಿದೆ. 100 ಕೋಟಿ ರೂ. ಯೋಜನೆಯಲ್ಲಿ ವೇರ್‍ಹೌಸಿಂಗ್, ಟ್ರಕ್ ಪಾರ್ಕಿಂಗ್ ಏರಿಯಾ, ಕಸ್ಟಮ್ಸ್ ಕ್ಲಿಯರನ್ಸ್ ಸೌಲಭ್ಯವನ್ನು ಹೊಂದಲಿದೆ.

ಕಡಕೊಳದಿಂದ ಮಂಗಳೂರು ಮತ್ತು ಚೆನ್ನೈ ಬಂದರುಗಳಿಗೆ ಕೈಗಾರಿಕಾ ಉತ್ಪನ್ನಗಳನ್ನು ರೈಲು ವ್ಯಾಗನ್‍ಗಳಲ್ಲಿ ಸಾಗಣೆ ಮಾಡಲು ಇನ್‍ಲ್ಯಾಂಡ್ ಕಂಟೇನರ್ ಡಿಪೋ ಸಹಕಾರಿಯಾಗಲಿದೆ ಎಂದು ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಡಾ.ಅನೂಪ್ ದಯಾ ನಂದ್ ಸಾಧು ಅವರು ತಿಳಿಸಿದ್ದಾರೆ.

Translate »