ಕೊಡಗಿನ ಹರ್ಷೀಲ್ ಕಾವೇರಿ ಶೂಟಿಂಗ್‍ನಲ್ಲಿ ನ್ಯಾಷನಲ್ಸ್‍ಗೆ ಅರ್ಹತೆ
ಮೈಸೂರು

ಕೊಡಗಿನ ಹರ್ಷೀಲ್ ಕಾವೇರಿ ಶೂಟಿಂಗ್‍ನಲ್ಲಿ ನ್ಯಾಷನಲ್ಸ್‍ಗೆ ಅರ್ಹತೆ

October 18, 2019

ಮೈಸೂರು,ಅ.17-ಕೊಡಗಿನ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್-ಕರುಂಬಯ್ಯ ಅಕಾ ಡೆಮಿ ಫಾರ್ ಲರ್ನಿಂಗ್ ಅಂಡ್ ಸ್ಪೋಟ್ರ್ಸ್ (ಕೆಎಎಲ್‍ಎಸ್) ಸದಸ್ಯರಾದ ಹರ್ಷೀಲ್ ಕಾವೇರಿ ಅವರು ಸೆಪ್ಟೆಂಬರ್ 23ರಿಂದ 29 ರವರೆಗೆ ಅಲಹಾಬಾದ್‍ನಲ್ಲಿ ನಡೆದ 29ನೇ ಅಖಿಲ ಭಾರತ ಜಿ.ವಿ. ಮಾವ ಲಂಕಾರ್ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ 400 ಅಂಕಗಳಿಗೆ 377 ಅಂಕಗಳನ್ನು ಗಳಿಸುವ ಮೂಲಕ ನ್ಯಾಷನಲ್ಸ್‍ಗೆ ಅರ್ಹತೆ ಪಡೆದು ಕೊಂಡಿದ್ದಾರೆ. ಕಾವೇರಿ ಅವರು 10 ಮೀಟರ್ ಪೀಪ್ ಶೈಟ್ ಏರ್ ರೈಫಲ್ (ಎನ್‍ಆರ್) ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದರು. ಅಲ್ಲದೆ, ಕಳೆದ ತಿಂಗಳು ಅಹಮದಾಬಾದ್ ನಲ್ಲಿ ನಡೆದ ಪ್ರೀ-ನ್ಯಾಷನಲ್ಸ್‍ನಲ್ಲಿ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಭಾಗವಹಿಸಿದ್ದರು. ಹರ್ಷೀಲ್ ಕಾವೇರಿ ಅವರು ಗೋಣಿಗೊಪ್ಪ ಲಿನ ಕೆಎಎಲ್‍ಎಸ್ ಸ್ಕೂಲ್‍ನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಕೆ ಮೈಸೂರಿನ ಕುವೆಂಪುನಗರದ ನಿವಾಸಿ ಚೇನಂಡ ಪಂಡಿತ್ ಮತ್ತು ಗಂಗೆ ದಂಪತಿ ಪುತ್ರಿ.

Translate »