ವಿಜ್ಞಾನದ ಕೊಡುಗೆ ಹಳ್ಳಿಗಳತ್ತ ಹೆಜ್ಜೆ ಇಡಬೇಕಿದೆ
ಮೈಸೂರು

ವಿಜ್ಞಾನದ ಕೊಡುಗೆ ಹಳ್ಳಿಗಳತ್ತ ಹೆಜ್ಜೆ ಇಡಬೇಕಿದೆ

October 18, 2019

ಮೈಸೂರು,ಅ.17(ಆರ್‍ಕೆಬಿ)- ವಿಜ್ಞಾನ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಅವು ನಗರ ಪ್ರದೇಶಗಳಿಗೇ ಸೀಮಿತವಾಗದೆ ಹಳ್ಳಿಗಳತ್ತ ಹೆಜ್ಜೆ ಇಡಬೇಕಿದೆ ಎಂದು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿ ಯೇಷನ್ ಅಧ್ಯಕ್ಷ ಹಾಗೂ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರು ವಿವಿ ಮಾನಸಗಂಗೋತ್ರಿ ವಿಜ್ಞಾನ ಭವನ ಸಭಾಂಗಣದಲ್ಲಿ ಗುರು ವಾರ `ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣ ಅಭಿವೃದ್ಧಿ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೇ.70ರಿಂದ 80ರಷ್ಟು ಜನ ಹಳ್ಳಿಗಳ ಲ್ಲಿದ್ದಾರೆ. 2 ದಶಕದಿಂದ ವಿಜ್ಞಾನ-ತಂತ್ರ ಜ್ಞಾನದಲ್ಲಿ ಸಾಕಷ್ಟು ಮಂದಿ ಶ್ರಮಿಸಿ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಅದು ಗ್ರಾಮೀಣ ಪ್ರದೇಶದ ಜನರನ್ನು ತಲುಪಿಲ್ಲ ಎಂದು ಹೇಳಿದರು.

ಪ್ರಸ್ತುತ 4ನೇ ಕೈಗಾರಿಕಾ ಕ್ರಾಂತಿ ನಡೆ ಯುತ್ತಿದ್ದು, ಇಂದು ಕಂಪ್ಯೂಟರ್‍ಗಳು ಮಾನವನ ಬುದ್ಧಿಮತ್ತೆಗೆ ಹೊಂದಿಕೆ ಆಗುತ್ತಿವೆ. ಕಂಪ್ಯೂಟರ್ ಜ್ಞಾನ ನಮ್ಮ ಮಟ್ಟಕ್ಕೆ ಬಂದುಬಿಟ್ಟಿದೆ. ಹೀಗಾಗಿ ಸುಶಿಕ್ಷಿತರಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ. ನಾವು ಮುಂದೇನು ಮಾಡಬೇಕು? ಎಂಬುದೇ ಈಗ ನಮ್ಮ ಮುಂದಿರುವ ಸವಾಲು. ಅದನ್ನು ಎದುರಿಸಲು ನಾವು ಸಿದ್ಧರಾಗಬೇಕಿದೆ ಎಂದರು. ಈ ನಿಟ್ಟಿನಲ್ಲಿ ಮೂಲ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಒಟ್ಟಾಗಿ ಕಾರ್ಯ ನಿರ್ವಹಿಸಬೇಕಿದೆ. ಗ್ರಾಮೀಣ ಪ್ರದೇಶದ ಜನರ ಜೀವನದ ಗುಣಮಟ್ಟ ಹೆಚ್ಚಬೇ ಕಿದೆ. ನೈರ್ಮಲ್ಯಕ್ಕೆ ಹೆಚ್ಚು ಗಮನ ಹರಿಸ ಬೇಕು. ಕೃಷಿ ತಂತ್ರಜ್ಞಾನ ಬಳಕೆ ಆಗಬೇ ಕಿದೆ ಎಂದು ಆಭಿಪ್ರಾಯಪಟ್ಟರು.

ಬೆಂಗಳೂರಿನ ಇಂಡಿಯನ್ ಇನ್ಸ್‍ಟಿ ಟ್ಯೂಟ್ ಆಫ್ ಸೈನ್ಸ್‍ನ ಪ್ರೊ.ಕೆ.ಜೆ.ರಾವ್ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಇಂದು ಪುಸ್ತಕಗಳನ್ನು ಓದು ವುದು ಮತ್ತು ಖರೀದಿಸಿ ಬಳಸುವುದು ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ಕೃತಕ ಬುದ್ಧಿಮತ್ತೆಯೇ ನಮ್ಮ ಜೀವನ ದಲ್ಲಿ ಹೆಚ್ಚಾಗಿದೆ. ಇದೆಲ್ಲವನ್ನೂ ನೋಡಿ ದರೆ ಮುಂದಿನ 10 ವರ್ಷಗಳನ್ನು ಊಹಿ ಸುವುದೇ ಕಷ್ಟವಾಗಿದೆ. ಸಂಶೋಧನಾ ಪ್ರಬಂಧ ಗಳನ್ನು ಓದಿ ಅವುಗಳನ್ನು ಪ್ರಕಟಣೆಗೆ ಸಿದ್ಧ ಪಡಿಸುವ ಕೆಲಸವನ್ನು ಕಂಪ್ಯೂಟರ್‍ಗಳೇ ನಿರ್ವಹಿಸುತ್ತಿವೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಕುಲ ಪತಿ ಪ್ರೊ. ಜಿ.ಹೇಮಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ (ಐಎಸ್ ಸಿಎ) ನಿರ್ಗಮಿತ ಅಧ್ಯಕ್ಷ ಪ್ರೊ. ಅಶೋಕ್ ಕುಮಾರ್ ಸಕ್ಸೇನಾ ಸ್ಮರಣ ಸಂಚಿಕೆ ಬಿಡು ಗಡೆ ಮಾಡಿದರು. ಐಎಸ್‍ಸಿಎ ಭಾವಿ ಅಧ್ಯಕ್ಷೆ ಪ್ರೊ.ವಿಜಯಲಕ್ಷ್ಮಿ ಸಕ್ಸೇನಾ, ಸಂಚಾಲಕ ಪ್ರೊ.ಗಂಗಾಧರ್, ಮಾನಸ ಗಂಗೋತ್ರಿ ವಿಜ್ಞಾನದ ಭವನ ಸಿಎಂ ಎಸ್‍ಟಿ ಸಂಯೋಜಕ ಡಾ.ಎಸ್.ಶ್ರೀಕಂಠ ಸ್ವಾಮಿ, ಕುಲಸಚಿವ ಪ್ರೊ.ಮಹದೇವನ್ ಮೊದಲಾದವರು ಉಪಸ್ಥಿತರಿದ್ದರು.

Translate »