ಲೋಕಸಭಾ ಚುನಾವಣೆ: ನಿಷೇಧಾಜ್ಞೆ ಪಾಲಿಸಲು ಜಿಲ್ಲಾ ಚುನಾವಣಾಧಿಕಾರಿ ಸೂಚನೆ
ಹಾಸನ

ಲೋಕಸಭಾ ಚುನಾವಣೆ: ನಿಷೇಧಾಜ್ಞೆ ಪಾಲಿಸಲು ಜಿಲ್ಲಾ ಚುನಾವಣಾಧಿಕಾರಿ ಸೂಚನೆ

April 8, 2019

ಹಾಸನ: ಮುಂಬರುವ ಲೋಕಸಭಾ ಚುನಾ ವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಕೆಲವು ಷರತ್ತುಗಳನ್ನು ವಿಧಿಸಿ ಮೇ 27ರವರೆಗೆ ಜಿಲ್ಲಾಯಾದ್ಯಂತ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಕಲಂ 144ರಡಿ ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿರುವರೆಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಅಭ್ಯರ್ಥಿಯ, ಮತದಾರರ ಹಾಗೂ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ನಿಷೇಧಾಜ್ಞೆಯಲ್ಲಿ ವಿಧಿಸಿರುವ ಷರತ್ತುಗಳು: ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಕಲಂ 144ರಡಿ ಹಾಗೂ ಅದ ರಲ್ಲಿನ ಉಪಕಲಂ (1) ಮತ್ತು (3)ರಂತೆ ಹಾಸನ ಜಿಲ್ಲಾ ವ್ಯಾಪ್ತಿಯ ಎಲ್ಲಾ ಮತದಾರರು ಸಾರ್ವಜನಿಕರನ್ನು ಹಾಗೂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ಉದ್ದೇಶಿಸಿ ಏ. 7ರಿಂದ ಮೇ. 27ರವರೆಗೆ ಅನುಮತಿಯಿಲ್ಲದೆ. ಚುನಾ ವಣೆ ಸಭೆ-ಸಮಾರಂಭ ನಡೆಸುವಂತಿಲ್ಲ. ಮೆರವಣಿಗೆ ನಡೆಸುವಂತಿಲ್ಲ, ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಚುನಾ ವಣಾ ಸಭೆ ನಡೆಸುವಂತಿಲ್ಲ. ಧ್ವನಿವರ್ಧಕ ಬಳಸುವಂ ತಿಲ್ಲ. ಇನ್ನೊಬ್ಬ ಅಭ್ಯರ್ಥಿಯು ಪ್ರಚಾರದಲ್ಲಿ ಅನುಮತಿ ಯಿಂದ ಬಳಸುತ್ತಿದ್ದ ಪೊಸ್ಟರ್ ಬ್ಯಾನರನ್ನು ತೆಗೆದು ಹಾಕು ವಂತಿಲ್ಲ. ಅನುಮತಿಯಿಲ್ಲದೆ ವಾಹನಗಳನ್ನು ಚುನಾವಣೆ ಪ್ರಚಾರಕ್ಕೆ ಬಳಸುವಂತಿಲ್ಲ. ಅನುಮತಿಯಿಲ್ಲದ ವಾಹನ ದಲ್ಲಿ ಪ್ರಚಾರ ಸಾಮಗ್ರಿಗಳನ್ನು ಸಾಗಿಸುವಂತಿಲ್ಲ ಹಾಗೂ ಬಳಸುವಂತಿಲ್ಲ. ಜನ ಸಾಮಾ ನ್ಯರ ಶಾಂತಿ ಸುವ್ಯವಸ್ಥೆಗೆ ಭಂಗ ವಾಗುವಂತಹ ಅಬ್ಬರದ ಪ್ರಚಾರ ಮಾಡುವಂತಿಲ್ಲ. ಮತಗಟ್ಟೆಯ 100 ಮೀಟರ್ ವ್ಯಾಪ್ತಿಯೊಳಗೆ ಪ್ರಚಾರ ಮಾಡುವಂತಿಲ್ಲ. ಮತ ಗಟ್ಟೆಯ 100 ಮೀಟರ್ ವ್ಯಾಪ್ತಿ ಯೊಳಗೆ ಮತದಾನ ದಿನದಂದು ಮೊಬೈಲ್ ಬಳಕೆ ಮಾಡುವಂತಿಲ್ಲ, ಮತದಾನದ ದಿನ ಮತ ಗಟ್ಟೆಯ ಬಳಿ ಯಾವುದೇ ರೀತಿಯ ದುರ್ನಡತೆ ಮಾಡುವಂತಿಲ್ಲ.

ಚುನಾವಣೆ ಸಭೆ-ಸಮಾರಂಭಗಳು, ಮೆರವಣಿಗೆ ಅನು ಮತಿ ಪಡೆದ ಸ್ಥಳ ಮತ್ತು ಮಾರ್ಗದಲ್ಲಿ ನಡೆಯಬೇಕು. ಮತದಾನ ಮುಕ್ತಾಯದ ಮುಂಚಿನ 48 ಗಂಟೆಗಳಲ್ಲಿ ತಮ್ಮ ಪಕ್ಷದ ಪ್ರಚಾರಕ್ಕೆಂದು ಆಗಮಿಸಿದ ಮತ ದಾರರಲ್ಲದವರು ಈ ಜಿಲ್ಲೆಯ ವ್ಯಾಪ್ತಿಯಲ್ಲಿ ಇರು ವಂತಿಲ್ಲ. ಸರ್ಕಾರದ ವಾಹನ, ಸಿಬ್ಬಂದಿಯನ್ನು ಚುನಾ ವಣಾ ಪ್ರಚಾರಕ್ಕೆಂದು ಬಳಸುವಂತಿಲ್ಲ.

ಮತದಾನದ ದಿನ ದಿನದಂದು ಮತಗಟ್ಟೆ ಬಳಿ 200 ಮೀಟರ್ ಒಳಗೆ ಅಭ್ಯರ್ಥಿಯ ಚುನಾವಣಾ ಬೂತ್ ತೆರೆಯುವಂತಿಲ್ಲ. ಮತದಾನ ದಿನದಂದು ಸ್ಥಾಪಿಸಲಾದ ಚುನಾವಣಾ ಬೂತ್‍ನಲ್ಲಿ ಒಂದು ಬ್ಯಾನರ್, ಒಂದು ಟೇಬಲ್ ಹಾಗೂ 2 ಚೇರ್‍ಗಳನ್ನು ಮಾತ್ರ ಬಳಸತಕ್ಕದ್ದು ಮತ್ತು ಬ್ಯಾನರ್‍ನಲ್ಲಿ ಅಭ್ಯರ್ಥಿಗೆ ಹಾಗೂ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಚಿಹ್ನೆ ಮತ್ತು ಭಾವ ಚಿತ್ರದ ನಮೂದು ಇರುವಂತಿಲ್ಲ.

ಚುನಾವಣಾ ಬೂತ್ ಸ್ಥಳೀಯ ಸಂಸ್ಥೆಗಳ ಅನುಮತಿ ಯಿಲ್ಲದೆ ತೆರೆಯುವಂತಿಲ್ಲ. ಪಟಾಕಿ/ಸಿಡಿಮದ್ದುಗಳನ್ನು ಅನುಮತಿಯಿಲ್ಲದೆ ಧ್ವನಿವರ್ಧಕಗಳನ್ನು ಪ್ರಚಾರ ಸಮಯದಲ್ಲಿ ಬಳಸುವಂತಿಲ್ಲ. ಮೆರವಣಿಗೆ ಮತ್ತು ಸಭೆ- ಸಮಾರಂಭಗಳು ಆ ಸ್ಥಳದ ಸಾರ್ವಜನಿಕರ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರಬಾರದು.

ಮತದಾನ ಮುಕ್ತಾಯವಾಗುವ ಸಮಯಕ್ಕಿಂತ ಮೊದಲಿನ 48 ಗಂಟೆಯಲ್ಲಿ ಬಹಿರಂಗ ಪ್ರಚಾರ ಮಾಡು ವಂತಿಲ್ಲ ಹಾಗೂ ಮನೆ-ಮನೆ ಪ್ರಚಾರಕ್ಕೆ 10 ಜನರ ಮೇಲೆ ಒಂದು ಗುಂಪಿನಲ್ಲಿ ಹೋಗುವಂತಿಲ್ಲ ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಪ್ರಚಾರ ಮಾಡುವಂತಿಲ್ಲ.

ಮತದಾನ ಮುಕ್ತಾಯವಾಗುವ ಸಮಯಕ್ಕಿಂತ ಮೊದಲಿನ 48 ಗಂಟೆಯ ಅವಧಿಯಲ್ಲಿ ಅಭ್ಯರ್ಥಿ, ಚುನಾವಣಾ ಏಜೆಂಟ್ ಅಥವಾ ಅಭ್ಯರ್ಥಿಯ ಪರ ಯಾವುದೇ ವ್ಯಕ್ತಿಯು ವಾಹನಗಳಲ್ಲಿ ಮತದಾರರನ್ನು ಸಾಗಿಸುವಂತಿಲ್ಲ ಹಾಗೂ ಅನುಮತಿ ನೀಡಿದ ವಾಹನಗಳಲ್ಲಿ ಚಾಲಕರು ಸೇರಿ ದಂತೆ 5 ಜನರ ಮೇಲೆ ಸಂಚರಿಸುವಂತಿಲ್ಲ. ಮತದಾ ನದ ದಿನ, ಮತಗಟ್ಟೆಯ ಹೊರಭಾಗದಲ್ಲಿ ಮತದಾರರಿಗೆ ನೀಡುವ ಚೀಟಿಯಲ್ಲಿ ಅಭ್ಯರ್ಥಿಗೆ/ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಚಿಹ್ನೆ, ಹೆಸರು, ಪಕ್ಷ ನಮೂ ದಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

Translate »