ತಂಬಾಕು ಬೆಳೆಗೆ ಸೂಕ್ತ ಬೆಲೆಗೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ
ಮೈಸೂರು

ತಂಬಾಕು ಬೆಳೆಗೆ ಸೂಕ್ತ ಬೆಲೆಗೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ

October 23, 2020

ಮೈಸೂರು, ಅ.22(ಆರ್‍ಕೆಬಿ)- ತಂಬಾಕು ಬೆಳೆಗೆ ಪ್ರತಿಕೆಜಿಗೆ 200-250 ರೂ. ಬೆಲೆ ನೀಡುವಂತೆ ಮತ್ತು ಕಾರ್ಡ್‍ದಾರ ಬೆಳೆಗಾರರ ಸಮಸ್ಯೆ ಗಳನ್ನು ಪರಿಹರಿಸುವಂತೆ ಆಗ್ರಹಿಸಿ ಪಿರಿಯಾಪಟ್ಟಣ ತಾಲೂ ಕಿನ ಆರ್.ತುಂಗಾ ಗ್ರಾಮದ ಪಿ.ಶ್ರೀನಿವಾಸ್ ಎಂಬುವರು ಡಿಸಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು. ಈ ಬಾರಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕಿಗೆ ಸೂಕ್ತ ಬೆಲೆ ಸಿಗದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. 1 ಕೆಜಿ ತಂಬಾಕು ಬೆಳೆಯಲು ಸುಮಾರು 195ರಿಂದ 215 ರೂ. ಖರ್ಚಾಗುತ್ತಿದೆ. ಆದರೆ ಮಾರುಕಟ್ಟೆ ನೀಡುತ್ತ್ತಿರುವುದು 130ರಿಂದ 170 ರೂ. ಬೆಲೆ ಮಾತ್ರ. ಬೆಳೆಗೆ ಮಾಡಿದ ಖರ್ಚು ಕೂಡ ಸಿಗದೇ ರೈತ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ತಂಬಾಕು ದರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಕಾರ್ಡ್‍ದಾರರಿಗೆ ವಿಧಿಸುವ ಕಮಿಷನ್ ಶುಲ್ಕ ತಗ್ಗಿಸÀಬೇಕು. ಇಲ್ಲವಾದರೆ ಕಾರ್ಡ್‍ದಾರರಿಗೆ ಲೈಸೆನ್ಸ್ ನೀಡಬೇಕು. ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ರೈತಪರ ಸಂಘಟನೆಗಳು, ರೈತರು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Translate »