ಕೆಆರ್‌ಎಸ್‌ ಹಿನ್ನೀರಲ್ಲಿ  ಪ್ರೇಮಿಗಳ ಮೃತದೇಹ ಪತ್ತೆ
ಮೈಸೂರು

ಕೆಆರ್‌ಎಸ್‌ ಹಿನ್ನೀರಲ್ಲಿ  ಪ್ರೇಮಿಗಳ ಮೃತದೇಹ ಪತ್ತೆ

August 5, 2018

ಮೈಸೂರು:  ಪ್ರೇಮಿ ಗಳ ಮೃತದೇಹಗಳು ಮೈಸೂರಿನ ಇಲ ವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆಆರ್‌ಎಸ್‌ ಹಿನ್ನೀರಲ್ಲಿ ಸಾಗರಕಟ್ಟೆ ಹೊಸ ಸೇತುವೆ ಬಳಿ ಶನಿವಾರ ಸಂಜೆ ಪತ್ತೆಯಾಗಿವೆ.

ಸೇತುವೆ ಸಮೀಪ ಮೃತ ದೇಹಗಳನ್ನು ಗಮನಿಸಿದ ಸಾರ್ವಜನಿಕರು, ಪೊಲೀಸರಿಗೆ ವಿಷಯ ತಿಳಿಸಿ ದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಇಲ ವಾಲ ಠಾಣೆ ಸಬ್‍ಇನ್ಸ್‍ಪೆಕ್ಟರ್ ಮುದ್ದು ಮಹದೇವ ಹಾಗೂ ಸಿಬ್ಬಂದಿ, ಅವುಗಳನ್ನು ನೀರಿನಿಂದ ಮೇಲಕ್ಕೆತ್ತಿ, ಮಹ ಜರು ನಡೆಸಿದರು. ಯುವಕನಿಗೆ ಸುಮಾರು 30 ಹಾಗೂ ಯುವತಿಗೆ ಸುಮಾರು 25 ವರ್ಷ ವಯಸ್ಸಾಗಿದ್ದು, ಮೃತದೇಹಗಳು ಕೊಳೆತ ಸ್ಥಿತಿಯಲ್ಲಿವೆ. ಇಬ್ಬರೂ ತಬ್ಬಿ ಕೊಂಡು, ಸೊಂಟಕ್ಕೆ ವೇಲ್ ಬಿಗಿದು ಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮುಖವೂ ಊದಿಕೊಂಡು, ವಿರೂಪವಾಗಿವೆ.

ಕೆಆರ್‌ಎಸ್‌ ಸೇರಿದಂತೆ ಅನೇಕ ಪೊಲೀಸ್ ಠಾಣೆಗಳು ಹಾಗೂ ಸುತ್ತಮುತ್ತಲಿನ ಗ್ರಾಮ ಗಳಲ್ಲಿ ವಿಚಾರಿಸಿದ್ದು, ಯುವಕ-ಯುವತಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ವೈದ್ಯಕೀಯ ಪರೀಕ್ಷೆ ನಂತರ ಮೃತ ದೇಹಗಳನ್ನು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ವಾರಸುದಾರರು ಇಲವಾಲ ಪೊಲೀಸ್ ಠಾಣೆ(0821-2402222) ಯನ್ನು ಸಂಪರ್ಕಿಸುವಂತೆ ಮನವಿ ಮಾಡಿರುವ ಪೊಲೀಸರು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Translate »