ಡಾ.ಎ.ವಿ.ನರಸಿಂಹಮೂರ್ತಿಯವರಿಗೆ ಎಂ.ವೆಂಕಟಕೃಷ್ಣಯ್ಯ(ತಾತಯ್ಯ) ಪ್ರಶಸ್ತಿ ಪ್ರದಾನ
ಮೈಸೂರು

ಡಾ.ಎ.ವಿ.ನರಸಿಂಹಮೂರ್ತಿಯವರಿಗೆ ಎಂ.ವೆಂಕಟಕೃಷ್ಣಯ್ಯ(ತಾತಯ್ಯ) ಪ್ರಶಸ್ತಿ ಪ್ರದಾನ

December 27, 2021

ಮೈಸೂರು,ಡಿ.26(ಎಸ್‍ಪಿಎನ್)- ಭಾರ ತೀಯ ವಿದ್ಯಾಭವನದ ಮೈಸೂರಿನ ಮಾಜಿ ಅಧ್ಯಕ್ಷರು ಹಾಗೂ ಇತಿಹಾಸ ತಜ್ಞರಾದ ಡಾ.ಎ.ವಿ.ನರಸಿಂಹಮೂರ್ತಿ ಅವರಿಗೆ ಈ ಸಾಲಿನ ವೃದ್ಧ ಪಿತಾಮಹ ದಯಾಸಾಗರ ಎಂ.ವೆಂಕಟಕೃಷ್ಣಯ್ಯ(ತಾತಯ್ಯ) ಪ್ರಶಸ್ತಿ ಯನ್ನು ಭಾನುವಾರ ಪ್ರದಾನ ಮಾಡಲಾಯಿತು.

ಮೈಸೂರು ನಾರಾಯಣಶಾಸ್ತ್ರಿ ರಸ್ತೆಯಲ್ಲಿ ರುವ ಅನಾಥಾಲಯ ಆವರಣದಲ್ಲಿ 177ನೇ ಎಂ.ವೆಂಕಟಕೃಷ್ಣಯ್ಯ (ತಾತಯ್ಯ)ನವರ ಜಯಂತ್ಯುತ್ಸವ ಸಮಿತಿ ಹಾಗೂ ಅನಾ ಥಾಲಯ ಸಹಯೋಗದೊಂದಿಗೆ ನಡೆದ ಸಮಾರಂಭದಲ್ಲಿ ಎಂ.ವೆಂಕಟಕೃಷ್ಣಯ್ಯ ಪ್ರಶಸ್ತಿಯನ್ನು ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ, ಉದ್ಯಮಿ ಆರ್.ಗುರು ಹಾಗೂ ಅನಾಥಾಲಯ ಅಧ್ಯಕ್ಷ ಸಿ.ವಿ.ಗೋಪಿನಾಥ್ ಅವರು ಡಾ.ಎ.ವಿ.ನರಸಿಂಹ ಮೂರ್ತಿಯವರಿಗೆ ಪ್ರದಾನ ಮಾಡಿದರು.

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಇತ್ತೀಚೆಗೆ ಎಂ. ವೆಂಕಟಕೃಷ್ಣಯ್ಯ ಕುರಿತು ಓದುತ್ತಿದ್ದಾಗ ಅವರ ಸಾಧನೆಗಳನ್ನು ನೋಡಿ, ನನಗೆ ಆಚ್ಚರಿ ಉಂಟು ಮಾಡಿತು. ಬಡತನವಿ ದ್ದರೂ ಜೊತೆಜೊತೆಗೆ ಸಮುದಾಯ ಏಳಿಗೆಗೆ ಕೆಲಸ ಮಾಡಿದ್ದಾರೆ. ಅನೇಕ ಸಂಘ-ಸಂಸ್ಥೆಗಳ ಹುಟ್ಟಿಗೂ ಕಾರಣರಾಗುವುದು ಅವರಲ್ಲಿದ್ದ ಸಾಮಾಜಿಕ ಬದ್ಧತೆ ತಿಳಿ ಯುತ್ತದೆ ಎಂದರು.

ತಾತಯ್ಯನವರು ಅನೇಕ ಶಿಕ್ಷಣ ಸಂಸ್ಥೆ, ಪತ್ರಿಕೆಗಳನ್ನು ಹುಟ್ಟು ಹಾಕಿ ಈ ಮೂಲಕ ಸಮುದಾಯ ಸಮಸ್ಯೆಗಳನ್ನು ಕುರಿತು ಅಂದಿನ ಆಡಳಿತ ವರ್ಗಕ್ಕೆ ತಿಳಿಸಿದ್ದಾರೆ. ಅವರ ಸಾಧನೆ ಕುರಿತು ಮಾತನಾಡುವಾಗ ಸಾಕಷ್ಟು ಅಧ್ಯಯನ ಮುಖ್ಯ. ಅವರ ಹೆಸರಿನಲ್ಲಿ ಸಾಧಕರು, ಹಿರಿಯರಾದ ಡಾ.ಎ.ವಿ.ನರಸಿಂಹಮೂರ್ತಿ ಅವರಿಗೆ ಈ ಸಾಲಿನ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.

ನಂತರ ಭಾರತ ಸರ್ಕಾರದ ನಿವೃತ್ತ ಹೆಚ್ಚು ವರಿ ಕಾರ್ಯದರ್ಶಿ ಹಾಗೂ ಅನಾಥಾ ಲಯ ಅಧ್ಯಕ್ಷ ಸಿ.ವಿಗೋಪಿನಾಥ್ ಮಾತ ನಾಡಿ, ಎಂ.ವೆಂಕಟಕೃಷ್ಣಯ್ಯನವರು ಶಿಕ್ಷಣ ಮತ್ತು ಪತ್ರಿಕೋದ್ಯಮದಲ್ಲಿ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಗಳು ಇಂದಿನ ಯುವ ಪೀಳಿಗೆಗೆ ಮಾದರಿ. ಅವರ ಹೆಸ ರಿನಲ್ಲಿ ಕೊಡ ಮಾಡುವ ಪ್ರಶಸ್ತಿಯನ್ನು ಭಾರತೀಯ ವಿದ್ಯಾಭವನ ಮೈಸೂರಿನ ಮಾಜಿ ಅಧ್ಯಕ್ಷರು ಹಾಗೂ ಇತಿಹಾಸ ತಜ್ಞ ಡಾ. ಎ.ವಿ.ನರಸಿಂಹಮೂರ್ತಿ ಅವರಿಗೆ ನೀಡು ತ್ತಿರುವುದು ಸಂತಸದ ವಿಚಾರ. ಡಾ.ಎ.ವಿ ನರಸಿಂಹಮೂರ್ತಿ ಅವರು, ತಿರುಪತಿ ದೇವ ಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿ ಯಲ್ಲಿನ ನಾಣ್ಯಗಳನ್ನು ಅಧ್ಯಯನ ನಡೆಸಿ ಆ ನಾಣ್ಯ ಚಲಾವಣೆಯಲ್ಲಿದ್ದ ಕಾಲಘಟ್ಟ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಅನೇಕ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ ಎಂದರು. ಡಾ.ಎ.ವಿ.ನರಸಿಂಹಮೂರ್ತಿ ಅವರು ಅನಾಥಾಲಯದ ಏಳಿಗೆಗೆ 50 ಸಾವಿರ ರೂ., ಚೆಕ್ ಹಾಗೂ ಇತರೆ ಗೃಹಪಯೋಗಿ ವಸ್ತುಗಳನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಗೋಪಿನಾಥ್ ಇದೇ ವೇಳೆ ಸಭೆಗೆ ತಿಳಿಸಿದರು. ಈ ವೇಳೆ ಅನಾಥಾಲಯ ಟ್ರಸ್ಟಿ ಗಳಾದ ನಾಗರಾಜ್, ರಾಮಚಂದ್ರ, ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಆರ್.ಗುರು ಇದ್ದರು. ಇದೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ನಗದು ವಿತರಿಸಲಾಯಿತು.

Translate »