ಗುಣಮಟ್ಟದಿಂದಲೇ ಮಹಾಲಕ್ಷ್ಮೀ ಸ್ವೀಟ್ಸ್ ಈ ಮಟ್ಟಕ್ಕೆ ಬೆಳೆದಿದೆ
ಮೈಸೂರು

ಗುಣಮಟ್ಟದಿಂದಲೇ ಮಹಾಲಕ್ಷ್ಮೀ ಸ್ವೀಟ್ಸ್ ಈ ಮಟ್ಟಕ್ಕೆ ಬೆಳೆದಿದೆ

December 22, 2021

ಮೈಸೂರು,ಡಿ.21(ಎಂಟಿವೈ)- ಸಿಹಿ ತಿನಿಸು ಮಾರಾಟ ಉದ್ಯಮದಲ್ಲಿ ಜನಪ್ರಿಯತೆ ಗಳಿಸಿರುವ ಪ್ರತಿಷ್ಠಿತ ಮಹಾಲಕ್ಷ್ಮೀ ಸ್ವೀಟ್ಸ್ ಸಂಸ್ಥೆಯ ಉನ್ನತಿ ಸಹಿಸದ ಕಿಡಿಗೇಡಿಗಳು, ನಕಲಿ ನಂದಿನಿ ತುಪ್ಪ ಬಳಸಲಾಗುತ್ತಿದೆ ಎಂದು ವದಂತಿ ಹಬ್ಬಿಸಿರು ವುದು ಖಂಡನಾರ್ಹ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ನಂದಿನಿ ತುಪ್ಪ ಹಾಗೂ ಕಲಬೆರಕೆ ತುಪ್ಪ ತಯಾರಿಸುವ ದುಷ್ಕøತ್ಯವನ್ನು ಬಯಲು ಮಾಡಿದ್ದು ಸ್ವಾಗತಾರ್ಹ. ಆದರೆ ಈ ಹಗರಣಕ್ಕೂ ಮಹಾಲಕ್ಷ್ಮೀ ಸ್ವೀಟ್ಸ್ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಉದ್ಯಮಿ ಶಿವಕುಮಾರ್ ಹಾಗೂ ಕುಟುಂಬದವರು ಕಠಿಣ ಪರಿಶ್ರಮ ಹಾಗೂ ವೃತ್ತಿ ಬದ್ಧತೆಯಿಂದ ಮಹಾಲಕ್ಷ್ಮೀ ಸ್ವೀಟ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ರುಚಿ, ಸ್ವಾದ, ಗುಣಮಟ್ಟದೊಂದಿಗೆ ಗ್ರಾಹಕರ ಸಂಪಾದಿಸಿ, ಇದೀಗ ಹೆಮ್ಮರವಾಗಿ ಬೆಳೆದಿರುವ ಮಹಾಲಕ್ಷ್ಮೀ ಸ್ವೀಟ್ಸ್ ಸಂಸ್ಥೆಯ ಏಳ್ಗೆ ಸಹಿಸದೆ ಕೆಲವರು ಸಂಚು ರೂಪಿಸಿ, ಸಂಸ್ಥೆಗೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸಿದ್ದಾರೆ. ನಂದಿನಿ ನಕಲಿ ತುಪ್ಪವನ್ನು ಬಳಕೆ ಮಾಡಲಾಗುತ್ತಿದೆ ಎಂಬ ಕಪೆÇೀಲ ಕಲ್ಪಿತ ಸುದ್ದಿ, ಸುಳ್ಳು ಆರೋಪ ಮಾಡುವುದರಲ್ಲಿ ಕೆಲವರು ಮಗ್ನರಾಗಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸುವ ಮೂಲಕ ಸತ್ಯಾಸತ್ಯತೆ ಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಮೈಸೂರಿನ ಹೊರವಲಯದ ಹೊಸಹುಂಡಿಯಲ್ಲಿ ಕೆಲವು ವಂಚಕರು ನಂದಿನಿ ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕದ ಮೇಲೆ ಸಾರ್ವಜನಿಕರು ದಾಳಿ ಮಾಡಿ, ಮೈಮುಲ್ ಅಧಿಕಾರಿಗಳು, ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಪೆÇಲೀಸರ ಗಮನಕ್ಕೆ ತಂದಿದ್ದಾರೆ. ಆದರೆ, ಮೈಮುಲ್ ವ್ಯವಸ್ಥಾಪಕ ನಿರ್ದೇಶಕರು ಪ್ರಕರಣದ ಬಗ್ಗೆ ಮಾತನಾಡುವ ಭರದಲ್ಲಿ ಮಹಾಲಕ್ಷ್ಮೀ ಹೆಸರು ಬಳಸಿರುವುದು ಈ ಎಲ್ಲ ಊಹಾಪೆÇೀಹಗಳ ಸೃಷ್ಟಿಗೆ ಕಾರಣವಾಗಿದೆ. ಮಹಾಲಕ್ಷ್ಮೀ ಸ್ವೀಟ್ಸ್ ಉತ್ಪನ್ನಗಳು ಗುಣಮಟ್ಟದಿಂದ ಕೂಡಿದ್ದು, ಯಾವ ಕಲಬೆರಕೆ ಪದಾರ್ಥಗಳಿಂದಲೂ ತಯಾರಿಸಿಲ್ಲ. ಸಿಎಫ್‍ಟಿ ಆರ್‍ಐ, ಸಂಸ್ಥೆಯ ಉತ್ಪನ್ನಗಳಿಗೆ ಗುಣಮಟ್ಟದ ಖಾತರಿ ದೃಢೀಕರಣ ಪತ್ರ ನೀಡಿದೆ. ಉತ್ಪನ್ನಗಳ ಗುಣಮಟ್ಟದ ಬಗ್ಗೆ ಗ್ರಾಹಕರಲ್ಲಿ ಖಾತ್ರಿ ಇರುವುದರಿಂದಲೇ ಸಂಸ್ಥೆ ಹೆಗ್ಗಳಿಕೆ ಸಾಧಿಸಲು ಸಾಧ್ಯವಾಗಿದೆ. ಹಾಗಾಗಿ ಯಾರೋ ಕಿಡಿಗೇಡಿಗಳು ಸಂದರ್ಭವನ್ನು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರು ವುದಕ್ಕೆ ಗ್ರಾಹಕರು ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಮೈಮುಲ್ ಸಿಬ್ಬಂದಿ ಶಾಮೀಲು ಆರೋಪ: ಹೊಸಹುಂಡಿ ಬಳಿ ನಕಲಿ ನಂದಿನಿ ತುಪ್ಪ ತಯಾರಿಕೆಯಲ್ಲಿ ಮೈಮುಲ್ ಸಿಬ್ಬಂದಿಗಳೇ ಶಾಮೀಲಾಗಿರುವ ಅನುಮಾನವಿದೆ. ಮೈಸೂರು ಡೈರಿ ಅಧಿಕಾರಿಗಳು ಮತ್ತು ನೌಕರರ ಒಳಒಪ್ಪಂದವಿಲ್ಲದೇ ಯಾರೂ ತುಪ್ಪದ ಪ್ಯಾಕೆಟ್‍ಗಳ ನಕಲಿ ಪಡೆಯಲು ಸಾಧ್ಯ ವಿಲ್ಲ. ಕಲಬೆರಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳು (ಪ್ಯಾಕಿಂಗ್ ಮೆಟಿರಿಯಲ್ಸ್) ಎಲ್ಲವೂ ಮೈಸೂರು ಡೈರಿಯವರ ಮೂಲಕವೇ ಸರಬರಾಜಾಗಿದೆ. ಡೈರಿಯ ಅಧಿಕಾರಿಗಳು, ಸಾರ್ವಜನಿಕರಿಗೆ ಬೇಕಾದ ಉತ್ಪನ್ನಗಳನ್ನು ಸಮರ್ಪಕವಾಗಿ ಸರಬರಾಜು ಮಾಡದೇ ಇರುವುದರಿಂದ ಈ ರೀತಿಯ ಅವ್ಯವಸ್ಥೆ ಉಂಟಾಗಿದೆ. ವ್ಯಾಪಾರಿಗಳೂ ಅನಿವಾರ್ಯವಾಗಿ ಬೇರೆ ಕಂಪನಿ ಉತ್ಪನ್ನಗಳ ಮೊರೆ ಹೋಗಬೇಕಾಗಿದೆ. ಇದಕ್ಕೆ ಮೈಮುಲ್ ಆಡಳಿತ ವೈಫಲ್ಯವೇ ಕಾರಣ. ಚಿಲ್ಲರೆ ವ್ಯಾಪಾರಿಗಳ ಮೂಲಕ ಮಾರಾಟವಾಗುವ ನಂದಿನಿ ಉತ್ಪನ್ನಗಳನ್ನು ಸಂಗ್ರಹಿಸಿ ಸಿಎಫ್‍ಟಿಆರ್‍ಐನಲ್ಲಿ ಪರಿ ಶೀಲನೆಗೆ ಒಳಪಡಿಸಿದರೆ ಸತ್ಯಾಂಶ ಹೊರ ಬೀಳಲಿದೆ. ಒಟ್ಟಾರೆ ಈ ಪ್ರಕರಣ ಸಂಬಂಧ ಶೀಘ್ರವಾಗಿ ಸ್ವತಂತ್ರ ತನಿಖಾ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆಗಳಿಂದ ಉನ್ನತ ಮಟ್ಟದ ತನಿಖೆ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.

ನಂದಿನಿ ತುಪ್ಪ ಖರೀದಿಸದಿರಲು ಚಿಂತನೆ: ಮಹಾಲಕ್ಷ್ಮೀ ಸ್ವೀಟ್ಸ್ ಮಾಲೀಕರಾದ ಶಿವಕುಮಾರ ಮಾತನಾಡಿ, ಖಾಸಗಿ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಖರೀದಿಸುವಂತೆ ದುಂಬಾಲು ಬಿದ್ದರೂ, ನಾವು ರೈತರಿಗೆ ನೆರವಾಗಲೆಂಬ ಉದ್ದೇಶದಿಂದ ನಂದಿನಿ ಉತ್ಪನ್ನಗಳನ್ನೇ ಖರೀದಿಸಲು ನಿರ್ಧರಿಸಿದೆವು. ಒಳ್ಳೆಯ ಉದ್ದೇಶದಿಂದಲೇ ತಿಂಗಳಿಗೆ ಕೋಟಿ ರೂ. ಮೌಲ್ಯದ ತುಪ್ಪವನ್ನು ಖರೀದಿಸಲಾಗುತ್ತಿತ್ತು. ಇದೆಲ್ಲ ತಿಳಿದಿದ್ದರೂ ಮೈಮುಲ್ ಎಂಡಿ ವಿವೇಚನೆ ಇಲ್ಲದೆ ಹೇಳಿಕೆ ನೀಡುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ. ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ಕೆಲವರು ದಾಳಿ ಮಾಡಿದಾಗ ಅಲ್ಲಿದ್ದವರು ಪರಾರಿಯಾದರು ಎಂದು ವರದಿಯಾಗಿದೆ. ಹಾಗಾದರೆ ಮೈಮುಲ್ ವ್ಯವಸ್ಥಾಪಕ ನಿರ್ದೇಶಕರು ಯಾವ ಆಧಾರ ಮೇಲೆ ಮಹಾಲಕ್ಷ್ಮೀ ಸಂಸ್ಥೆಯ ಹೆಸರು ಹೇಳಿ ದ್ದಾರೆ?. ಸತ್ಯಾಸತ್ಯತೆ ತಿಳಿಯದೆ ನಮ್ಮ ಸಂಸ್ಥೆ ಬಗ್ಗೆ ಏಕಾಏಕಿ ಆರೋಪ ಮಾಡಿರುವುದು ನೋವುಂಟು ಮಾಡಿದೆ. ಉತ್ತಮ ವ್ಯಾಪಾರ ಸಂಬಂಧ ಹೊಂದಿರುವ ಸಂಸ್ಥೆ ವಿರುದ್ಧ ತುಂಬಾ ಹಗುರವಾಗಿ ಮಾತನಾಡಿದ್ದಾರೆ. ಹಾಗಾಗಿ ಇನ್ನು ಮುಂದೆ ನಂದಿನಿ ತುಪ್ಪ ಖರೀದಿಸುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಈಗಾಗಲೇ ಖಾಸಗಿ ಸಂಸ್ಥೆಯ 35 ಟಿನ್ ತುಪ್ಪವನ್ನು ಖರೀದಿಸಿ, ಅದರಿಂದ ತಯಾರಿಸಿದ ಸಿಹಿ ತಿಂಡಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ಫಲಿತಾಂಶ 15 ದಿನದ ನಂತರ ತಿಳಿಯಲಿದೆ. ಹೀಗೆ ಹಂತ ಹಂತವಾಗಿ ಬೇರೆ ಕಂಪನಿಯ ತುಪ್ಪ ಬಳಸಲು ಉದ್ದೇಶಿಸ ಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳ ತಂಡ, ಡಿ.17 ರಂದು ನಮ್ಮ ಸಂಸ್ಥೆಯ ಸಿಹಿ ತಯಾರಿಕಾ ಘಟಕಕ್ಕೆ ಭೇಟಿ ನೀಡಿ, ಬಳಕೆ ಮಾಡುತ್ತಿರುವ ತುಪ್ಪ ಇನ್ನಿತರ ವಸ್ತುಗಳನ್ನು ಪರಿಶೀಲಿಸಿದ್ದಾರೆ. ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿ ಕೊಂಡಿದ್ದಾರೆ. ಎಲ್ಲಿಯೂ ನಕಲಿ ತುಪ್ಪವಾಗಲೀ, ಗುಣಮಟ್ಟವಿಲ್ಲದ ವಸ್ತುಗಳಾಗಲೀ ಪತ್ತೆಯಾಗಿಲ್ಲ. ಈಗಲಾದರೂ ಸಂಬಂಧಪಟ್ಟ ವರು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿಶಾಸ್ತ್ರೀ, ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ ಉಪಾಧ್ಯಕ್ಷ ಬಿ.ಉಗ್ರಯ್ಯ, ಸುರೇಶ್ ಇದ್ದರು.

Translate »