ಮೈಸೂರು: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅ.11ರಿಂದ 15ರವರೆಗೆ ಮಹಿಳಾ ದಸರಾ-2018ರ ಪ್ರಯುಕ್ತ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜೆ.ಕೆ ಮೈದಾನದ ಆವರಣದಲ್ಲಿ ಏರ್ಪಡಿಸಲಾಗಿದೆ. ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳು/ಸದಸ್ಯರು/ ಸ್ತ್ರೀಶಕ್ತಿ ಒಕ್ಕೂಟಗಳು/ ಮಹಿಳಾ ಉದ್ಯಮಿಗಳಿಂದ ತಯಾರಿಸಿದ ವಿಶೇಷ ಗೃಹೋಪಯೋಗಿ ಕರಕುಶಲ ವಸ್ತುಗಳು, ಗುಣಮಟ್ಟದ ಪೇಯಿಂಟಿಂಗ್ಸ್‍ಗಳು, ವಿಶೇಷ ಕೈಕಸೂತಿ/ಕೈಮಗ್ಗ ಉತ್ಪನ್ನಗಳನ್ನು ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸಲು ಇಚ್ಛಿಸುವ ಮಹಿಳಾ ಉದ್ಯಮಿಗಳು ಸ್ತ್ರೀಶಕ್ತಿ ಗುಂಪುಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಇಲಾಖೆಯಿಂದ ರಚಿಸಲ್ಪಟ್ಟ ಸ್ತ್ರೀಶಕ್ತಿ ಗುಂಪುಗಳು, ಉದ್ಯೋಗಿನಿ, ಕಿರುಸಾಲ ಮತ್ತು ಮಹಿಳಾ ತರಬೇತಿ ಯೋಜನೆಯ ಪ್ರಯೋಜನ ಪಡೆದ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಭಾಗವಹಿ ಸಲು ಇಚ್ಛಿಸುವ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು/ ಮಹಿಳಾ ಉದ್ಯಮಿಗಳು ಪ್ರದರ್ಶಿಸುವ ಉತ್ಪನ್ನಗಳು/ವಸ್ತುಗಳನ್ನು ಕುರಿತು ಸೆ.25 ರೊಳಗೆ ಖುದ್ದು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ಇಲ್ಲಿ ಅರ್ಜಿಯನ್ನು ಸಲ್ಲಿಸುವುದು. ಮಾಹಿತಿಗೆ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ಇವರ ಮೊ 9590099951, ಹಾಗೂ ಬೆಳಿಗ್ಗೆ 10.30ರಿಂದ 5.00 ಗಂಟೆಯೊಳಗೆ ಖುದ್ದು ಕಚೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಸ್ತು ಪ್ರದರ್ಶನದ ಮಳಿಗೆಯಲ್ಲಿ ಪ್ರದರ್ಶಿಸುವ ವಸ್ತುಗಳನ್ನು ಆಯ್ಕೆ ಮಾಡಲು ಸೆ.28ರಂದು ಮಧ್ಯಾಹ್ನ 2.00 ಗಂಟೆಗೆ ಸ್ತ್ರೀಶಕ್ತಿ ಭವನ ವಿಜಯನಗರ 2ನೇ ಹಂತದಲ್ಲಿ ಸಿದ್ಧಪಡಿಸಿದ ಸ್ಯಾಂಪಲ್ ವಸ್ತುಗಳನ್ನು ತರತಕ್ಕದ್ದು.