ಇಂದು ಮಹಿಳಾ ದಸರಾ ಉದ್ಘಾಟನೆ
ಮೈಸೂರು

ಇಂದು ಮಹಿಳಾ ದಸರಾ ಉದ್ಘಾಟನೆ

October 11, 2018

ಮೈಸೂರು:  ಮೈಸೂರು ದಸರಾ ಮಹೋತ್ಸವ -2018 ಅಂಗವಾಗಿ ಅ.11ರಂದು ಬೆಳಿಗ್ಗೆ 7.30ಕ್ಕೆ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ರಂಗೋಲಿ ಸ್ಪರ್ಧೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಡಾ.ಜಯಮಾಲ ಉದ್ಘಾಟಿಸುವರು.

ಮಹಿಳಾ ದಸರಾ -2018ರ ಉದ್ಯಮ ಸಂಭ್ರಮ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಬೆಳಿಗ್ಗೆ 11 ಗಂಟೆಗೆ ಜೆ.ಕೆ.ಮೈದಾನದಲ್ಲಿ ಸಚಿವೆ ಡಾ.ಜಯಮಾಲ ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ಜೆ.ಕೆ. ಮೈದಾನದಲ್ಲಿ ಭಾವೈಕ್ಯತೆಯನ್ನು ಬಿಂಬಿಸುವ ವಿವಿಧ ರಾಜ್ಯಗಳ ಜಾನಪದ ಶೈಲಿಯ ನೃತ್ಯ ಪ್ರದರ್ಶನ ನಡೆಯಲಿದೆ.

ಸಂಜೆ 5 ಗಂಟೆಗೆ ಜೆ.ಕೆ. ಮೈದಾನದಲ್ಲಿ ಶ್ರೀಮಾನ್ ಶ್ರೀಮತಿ ದರ್ಬಾರ್, ವಿವಾಹಿತರ ಜೋಡಿ ನೃತ್ಯ, ಸಮೂಹ ನೃತ್ಯಕ್ಕೆ ವಿಧಾನಸಭಾ ಸದಸ್ಯರಾದ ಡಾ. ಯತೀಂದ್ರ ಅವರು ಚಾಲನೆ ನೀಡುವರು. ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಅಧ್ಯಕ್ಷತೆ ವಹಿಸುವರು. ಶ್ರೀಮಾನ್ ಶ್ರೀಮತಿ ಮೈಸೂರು ಕಿರುತೆರೆ ಕಲಾವಿದರಾದ ಸುಂದರ್ ಮತ್ತು ವೀಣಾ ಸುಂದರ್ ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Translate »