ಶೀಘ್ರವಾಗಿ ಬೆಳೆ ಸಮೀಕ್ಷೆ ಮುಗಿಸಲು ಡಿಸಿ ಸೂಚನೆ
ಹಾಸನ

ಶೀಘ್ರವಾಗಿ ಬೆಳೆ ಸಮೀಕ್ಷೆ ಮುಗಿಸಲು ಡಿಸಿ ಸೂಚನೆ

September 21, 2018

ಹಾಸನ:  ಅತಿವೃಷ್ಟಿ ಹಾಗೂ ಅನಾವೃಷ್ಟಿ ಬೆಳೆ ಪರಿಹಾರ ಹಾಗೂ ವಿಮೆ ಪಾವತಿಗೆ ಪೂರಕವಾಗಿ ಜಿಲ್ಲಾದ್ಯಂತ 10 ದಿನಗಳೊಳಗಾಗಿ ಬೆಳೆ ಸಮೀಕ್ಷೆ ಪ್ರಾರಂಭಿಸಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಂದಾಯ ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಹಾಗೂ ತಾಲೂಕು ತಹಶೀಲ್ದಾರ್ ಮತ್ತು ವಿವಿಧ ಇಲಾಖಾ ಅಧಿಕಾರಿಗಳ ವೀಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಸರ್ವೇ ಕಾರ್ಯ ಪ್ರಾರಂಭಿಸುವಂತೆ ನಿರ್ದೇಶನ ನೀಡಿದರಲ್ಲದೆ, ಆಯಾ ತಹಶೀ ಲ್ದಾರ್ ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಸಮೀಕ್ಷಾ ತಂಡವನ್ನು ರಚಿಸಿಕೊಂಡು, ಲಭ್ಯವಿರುವ ನುರಿತ ಖಾಸಗಿ ವ್ಯಕ್ತಿಗಳ ಸಹಾಯ ಪಡೆದು ಜಿಪಿಎಸ್ ಆಧಾರಿತ 7 ಸರ್ವೇ ಕಾರ್ಯವನ್ನು ನಡೆಸುವಂತೆ ತಿಳಿಸಿದರು.

ಸರ್ಕಾರ ಅಭಿವೃದ್ಧಿ ವಹಿಸಿರುವ ದಿಶಾಂಕ್ ಮೊಬೈಲ್ ತಂತ್ರಾಂಶವನ್ನು ಡೌನ್‍ಲೋಡ್ ಮಾಡಿಕೊಂಡು ದಿಕ್ಸೂಚಿ ಯಾಗಿ ಬಳಸಬಹುದು. ಮೊದಲ ಹಂತದಲ್ಲಿ ತಾಲೂಕಿನಲ್ಲಿ ಶೇ.10ರಷ್ಟು ಗ್ರಾಮಗಳಲ್ಲಿ ಜಿ.ಪಿ.ಎಸ್ ಆಧಾರಿತ ಸಮೀಕ್ಷೆ ನಡೆಸಿ ನಿಗದಿತ ತಂಡಗಳಲ್ಲಿ ಸರ್ವೆ ನಂಬರ್‍ವಾರು ಮಾಹಿತಿ ಹಾಗೂ ಪೋಟೋವನ್ನು ಅಪ್‍ಲೋಡ್ ಮಾಡುವಂತೆ ಹೇಳಿದರು.

ಪ್ರತಿ ತಾಲೂಕಿನಲ್ಲಿ ವ್ಯವಸ್ಥಿತವಾಗಿ ಮಾರ್ಗ ನಕ್ಷೆ ಸಿದ್ಧಪಡಿಸಿ ಕೊಂಡು ಗ್ರಾಮಲೆಕ್ಕಿಗರು ಲಭ್ಯವಿರುವ ಇತರ ಸರ್ಕಾರಿ ನೌಕರರು ಮತ್ತು ಆಸಕ್ತ ಖಾಸಗಿ ಸಮೀಕ್ಷಗಾರರಿಗೆ ಆ್ಯಪ್ ಬಳಕೆಯ ಬಗ್ಗೆ ಮಾಹಿತಿ ನೀಡಿ ಕ್ಷೇತ್ರ ಕಾರ್ಯಕ್ಕೆ ಕಳುಹಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ರೈತರು ಬಳಸಲು ಅನುಕೂಲವಾಗು ವಂತಹ ಆ್ಯಪ್ ಕೂಡ ಇದ್ದು ತಾವೇ ಸ್ವತಃ ಜಿಪಿಎಸ್ ಆಧಾರಿತ ಫೋಟೋ ಕಳಿಸಬಹುದಾಗಿದೆ. ಆಸಕ್ತದಾಯಕ ಖಾಸಗಿ ವ್ಯಕ್ತಿಗಳಿಗೆ ಪ್ರತಿ ಫೋಟೋಗೆ 10 ರೂ. ನಂತೆ ಪ್ರೋತ್ಸಾಹಧನ ನೀಡಲಾಗುವುದು. ಪ್ರತಿದಿನ ಗರಿಷ್ಠ 1,500 ರೂ. ಗಳಿಸಲು ಅವಕಾಶವಿದೆ. ಆದರೆ ಅವರು ಸಂಪೂರ್ಣ ಆಸಕ್ತಿ ಮತ್ತು ಶ್ರದ್ಧೆಯಿಂದ ಈ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ 14,79,786 ಕೃಷಿ ತಾಕುಗಳಲ್ಲಿ ಸರ್ವೇ ಕಾರ್ಯ ನಡೆಯಬೇಕಿದೆ. ಆಯಾಯಾ ತಾಲೂಕಿನಲ್ಲಿ ತಹಶೀಲ್ದಾರರು ಕೃಷಿ ತೋಟಗಾರಿಕಾ ಹಾಗೂ ಇತರ ಇಲಾಖಾಧಿಕಾರಿಗಳ ನೆರವು ಪಡೆದು ಯಶಸ್ವಿಯಾಗಿ ಸಮೀಕ್ಷೆ ಕಾರ್ಯ ಪೂರೈಸಿ ಎಂದು ತಿಳಿಸಿದರು.

ಸಕಲೇಶಪುರ, ಆಲೂರು ಮತ್ತು ಅರಕಲಗೂಡು ತಾಲೂಕು ಗಳಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಬೆಳೆ ಹಾನಿ ಸಂಭವಿಸಿದ್ದು, ಅರಸೀಕೆರೆ, ಬೇಲೂರು ಮತ್ತಿತರ ತಾಲೂಕುಗಳಲ್ಲಿ ಬರ ಮುಂದುವ ರೆದಿದೆ. ಸಮರ್ಪಕವಾಗಿ ಸರ್ವೇ ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರಲ್ಲದೆ, ಜಿಲ್ಲಾಧಿಕಾರಿಯವರು ನಾಳೆ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಉಪವಿಭಾಗಾ ಧಿಕಾರಿ ಡಾ. ನಾಗರಾಜು, ಜಂಟಿ ಕೃಷಿ ನಿರ್ದೇಶಕ ಡಾ. ಮಧುಸೂಧನ್, ಉಪನಿರ್ದೇಶಕ ಕೋಕಿಲ, ಭೂದಾಖಲೆಗಳ ಉಪನಿರ್ದೇಶಕ ಕೃಷ್ಣಪ್ರಸಾದ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಸಂಜಯ್ ಮತ್ತಿತರರಿದ್ದರು.

Translate »