ಯುವ ದಸರಾದಲ್ಲಿ ಮಂಗ್ಲಿ ಗಾಯನ ಮೋಡಿ
ಮೈಸೂರು

ಯುವ ದಸರಾದಲ್ಲಿ ಮಂಗ್ಲಿ ಗಾಯನ ಮೋಡಿ

October 3, 2022

ಮೈಸೂರು, ಅ.2(ಎಂಕೆ)- ಸ್ಟಾರ್ ನಟ-ನಟಿಯರ ಮಸ್ತ್ ಮನರಂಜನೆಯೊಂದಿಗೆ ಮಂಗ್ಲಿ ಮೋಡಿಗೆ ಮನಸೋತ ಯುವ ಮಂದಿ…!
ನಾಡಹಬ್ಬ ಮೈಸೂರು ದಸರಾ ಆಕರ್ಷಣೆಯಾದ ‘ಯುವ ದಸರಾ’ದಲ್ಲಿ ಹಾಡು, ನೃತ್ಯ, ಹಾಸ್ಯದ ಹೊನಲು ಯುವ ಮನಸುಗಳಿಗೆ ಮಸ್ತ್ ಮನರಂಜನೆ ನೀಡಿದರೆ, ಖ್ಯಾತ ಗಾಯಕ ಮಂಗ್ಲಿ ತಮ್ಮ ಕಂಚಿನ ಕಂಠಸಿರಿಯಿಂದ ಎಲ್ಲರ ಹೃದಯದಲ್ಲಿ ಮನೆ ಮಾಡಿದರು.

ಮೊದಲ ಬಾರಿಗೆ ‘ಯುವ ದಸರಾ’ ವೇದಿಕೆಯಲ್ಲಿ ಸಂಗೀತ ಸುಧೆ ಹರಿಸಿದ ಗಾಯಕಿ ಮಂಗ್ಲಿ, ಕನ್ನಡ ಹಾಗೂ ತೆಲುಗು ಹಾಡುಗಳನ್ನು ಹಾಡಿ ಭಾರೀ ಪ್ರಶಂಸೆ ಪಡೆ ದರು. ಮೈಸೂರೆಂದರೆ ನನಗೆ ತುಂಬಾ ಇಷ್ಟ… ಕನ್ನಡ ನನ್ನ ಎರಡನೇ ಮನೆ ಎಂದ ಮಂಗ್ಲಿ, ‘ಕಣ್ಣು ಹೊಡಿ ಯಾಕ ಮೊನ್ನೆ ಕಲತೀನಿ, ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ’ ಹಾಡನ್ನು ಹಾಡಿ ರಂಜಿಸಿದರಲ್ಲದೆ, ‘ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ’ ಹಾಡನ್ನು ಹಾಡಿ ಅಪ್ಪು ಅಭಿಮಾನ ಮೆರೆದರು.

ಗಾಯಕ ಅನಿರುದ್ಧ್ ಜೊತೆಗೂಡಿ ‘ಸಾಧು ಜಂಗಮ ಆದಿ ದೇವುಡಾ’, ‘ಎಣ್ಣೆಗೂ-ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ’, ‘ರಾ ರಾ ರಕ್ಕಮ್ಮ’ ಹಾಡನ್ನು ಹಾಡಿ ವೇದಿಕೆಗೆ ರಂಗು ತಂದರಲ್ಲದೆ ನೆರೆದಿದ್ದ ಜನ ಸ್ತೋಮವೇ ಕುಣಿದು ಕುಪ್ಪಳಿಸುವಂತೆ ಮಾಡಿದರು. ಈ ವೇಳೆ ‘ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವ ವಿನೋ ದಿನಿ ನಂದನುತೆ’ ಹಾಡಿನ ಮೂಲಕ ಪ್ರೇಕ್ಷಕರೇ ನಿಬ್ಬೆರಗಾಗು ವಂತೆ ಮಾಡಿದರು. ಹಾಡಿನಿಂದಲೇ ಮೈಸೂರಿಗರಿಗೆ ಮೋಡಿ ಮಾಡಿ ಮಂಗ್ಲಿ, ಕುಣಿದರಲ್ಲದೆ ತಮ್ಮೊಂದಿಗೆ ಅಭಿಮಾನಿಗಳನ್ನು ಕುಣಿಸಿ ಅಪರಾ ಪ್ರೀತಿ ಗಳಿಸಿದರು.

ಅಮಿತ್ ತ್ರಿವೇದಿ ಮಿಂಚು: ಖ್ಯಾತ ಬಾಲಿವುಡ್ ಗಾಯಕ ಅಮಿತ್ ತ್ರಿವೇದಿ ಹಿಂದಿ ಹಾಡುಗಳನ್ನು ಹಾಡುವ ಮೂಲಕ ಯುವ ದಸರಾದಲ್ಲಿ ಮಿಂಚು ಹರಿಸಿದರು. ಆರ್‍ಆರ್‍ಆರ್ ಸಿನಿಮಾ ಹಾಡಿನೊಂದಿಗೆ ವೇದಿಕೆಗೆ ಆಗಮಿಸಿದ ತ್ರಿವೇದಿ,
ಯುವ ಸಮೂಹಕ್ಕೆ ಸಂಗೀತದ ಝಲಕ್ ನೀಡಿದರು.

ಪುಳಕ ನೀಡಿದ ಸ್ಟಾರ್ ನೈಟ್: ಖ್ಯಾತ ನಟಿ ಹರ್ಷಿಕಾ ಪೂಣಚ್ಚ ನೇತೃತ್ವದಲ್ಲಿ ನಡೆದ ‘ಸ್ಟಾರ್ ನೈಟ್’ ಕಾರ್ಯ ಕ್ರಮದಲ್ಲಿ ಹಾಡು ನೃತ್ಯ ಹಾಗೂ ಹಾಸ್ಯದ ಹೊನಲು ನೋಡುಗರಿಗೆ ಹೊಸ ಪುಳಕ ನೀಡಿತು. ಹಾಸ್ಯನಟ ರಾದ ತಬಲ ನಾಣಿ ಹಾಗೂ ಮಿತ್ರಾ ಹ್ಯಾಸದ ಹೊನಲು ಹರಿಸಿ, ಎಲ್ಲೆರನ್ನು ನಕ್ಕು ನಗಿಸಿದರು. ನಟಿಯರಾದ ರಾಧಿಕಾ ನಾರಾಯಣ್, ನಟಿ ಪಾಯಲ್ ಹಾಗೂ ನಟ ಪೃಥ್ವಿ ಅಂಬರ್ ಅಮೋಘ ನೃತ್ಯ ಪ್ರದರ್ಶನ ನೀಡಿದರೆ, ಗಾಯಕಿ ಇಂಚರ ಹಾಗೂ ಗಾಯಕ ಶಶಾಂಕ್ ಸುಮಧುರ ಹಾಡುಗಳ ಮೂಲಕ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿದರು. ಬಿಗ್‍ಬಾಸ್ ಖ್ಯಾತಿಯ ನಟ ಪ್ರಥಮ್ ಪಂಚಿಂಗ್ ಡೈಲಾಗ್ ಮೂಲಕ ಗಮನ ಸೆಳೆ ದರಲ್ಲದೆ ತಮ್ಮ ‘ನಟ ಭಯಂಕರ’ ಸಿನಿಮಾ ಗೆಲ್ಲಿಸುವಂತೆ ಮನವಿ ಮಾಡಿದರು.

ಪಡ್ಡೆ ಹುಡುಗ-ಹುಡಿಗಿಯರ ಹೃದಯ ಗೆದ್ದ ಫ್ಯಾಷನ್ ಶೋ: ಇದಕ್ಕೂ ಮುನ್ನ ಯುವ ಸಂಭ್ರಮ ವೇದಿಕೆಯಲ್ಲಿ ವಿಜೇತ ರಾದ ಕಾಲೇಜು ತಂಡಗಳು ನೃತ್ಯ ಪ್ರದರ್ಶನ ನೀಡಿದರೆ, ಹಾರ್ಟ್‍ಬೀಟ್ಸ್ ಡ್ಯಾನ್ಸ್ ಅಕಾಡೆಮಿ ರೂಪದರ್ಶಿಗಳ ಕ್ಯಾಟ್ ವಾಕ್ ಪಡ್ಡೆ ಹುಡುಗ-ಹುಡಿಗಿ ಯರ ಹೃದಯದ ಗೆದ್ದಿತು. ಸೀರೆ ಯುಟ್ಟು ಕಂಗೊಳಿಸುತ್ತಿದ್ದ ಬೆಡಗಿಯರ ಯುವ ದಸರಾ ವೇದಿಕೆಯನ್ನು ಇನ್ನಷ್ಟು ವರ್ಣಮಯವಾಗಿಸಿದರು.

Translate »