ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಮಹಾತ್ಮರ ತ್ಯಾಗ, ಪರಿಶ್ರಮವಿದೆ
ಮೈಸೂರು

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಮಹಾತ್ಮರ ತ್ಯಾಗ, ಪರಿಶ್ರಮವಿದೆ

April 1, 2019

ಮೈಸೂರು: ಡಾ.ಬಿ.ಷೇಕ್ ಅಲಿ ಅವರ `ಗ್ರೌಂಡ್ ವರ್ಕ್ ಆಫ್ ಕರ್ನಾಟಕ ಹಿಸ್ಟರಿ’, ಪ್ರೊ. ಬಿ.ಪರಮೇಶ್ವರ್ ಅವರ `ಕರ್ನಾಟಕ ಇತಿ ಹಾಸ ಪರಿಚಯ’, `ಭಾರತದ ಸ್ವಾತಂತ್ರ್ಯ ಚಳುವಳಿ’ ಮತ್ತು ಮಹೇಶ್ ಅಗಸರಹಳ್ಳಿ ಅವರ `ಕನ್ನಡ ಸಾಹಿತ್ಯ ಮತ್ತು ವ್ಯಾಕರಣ’ ಕೃತಿಗಳನ್ನು ವಿಶ್ರಾಂತ ಕುಲಪತಿ ಡಾ.ಬಿ. ಷೇಕ್ ಅಲಿ ಭಾನುವಾರ ಮೈಸೂರಿನ ವಿದ್ಯಾಭವನದಲ್ಲಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರ ಉಪ್ಪಿನ ಸತ್ಯಾಗ್ರಹವು ಭಾರತದಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿ ಮಾಡಿತು. ಅಹಿಂಸೆ ಬೇಡ ಎಂದು ಶಾಂತಿಯ ಮಾರ್ಗ ಅನುಸರಿಸಿದ ಗಾಂಧಿ, ನಿರಂಕುಶವನ್ನು ವಿರೋಧಿಸಿ ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ ಹೊಂದಿದ್ದರು. ಅಂದಿನ ಕಾಂಗ್ರೆಸ್ ಪಕ್ಷದಲ್ಲಿದ್ದ ನೆಹರು, ಮೌಲಾನಾ ಆಜಾದ್ ಅವರ ಆಡಳಿತ ವೈಖರಿ ಉತ್ತಮವಾಗಿತ್ತು ಎಂದು ಹೇಳಿದರು.

ಇತಿಹಾಸವನ್ನು ಕೆದಕಿ ನೋಡಿದರೆ ಪ್ಲೇಟೋ, ಅರಿಸ್ಟಾಟಲ್, ಸಾಕ್ರೆಟಿಸ್ ನಂತಹ ಪ್ರಸಿದ್ಧ ರಾಜಕೀಯ ತಜ್ಞರು ನೆನಪಿಗೆ ಬರುತ್ತಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಹಾತ್ಮರ ತ್ಯಾಗ, ಪರಿಶ್ರಮವಿದೆ ಎಂದರು.

ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಬಿ. ಪರಮೇಶ್ವರ್ ಮಾತನಾಡಿ, ಗತಿಸಿದ ಕಾಲ ವನ್ನು ಮತ್ತೆ ಮೆಲುಕು ಹಾಕುವುದರಿಂದ ಬದುಕಿನ ನೈಜ ಅರ್ಥ ತಿಳಿಯುತ್ತದೆ. ಹೀಗಾಗಿ ಜ್ಞಾನ ಸಂಪತ್ತು ಎಲ್ಲರಿಗೂ ತಲುಪುವಂತಾ ಗಲಿ ಎಂಬ ದೃಷ್ಟಿಯಿಂದ ಭಾರತದ ಇತಿ ಹಾಸ ಘಟನೆಗಳನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಕೃತಿಯಲ್ಲಿ ಸೇರಿಸಲಾ ಗಿದೆ ಎಂದರು. ನಿವೃತ್ತ ಪ್ರಾಂಶುಪಾಲ ಡಾ.ಎ.ಸೋಮಶೇಖರ್ ಅಧ್ಯಕ್ಷತೆ ವಹಿಸಿ ದ್ದರು. ಡಾ.ಬಿ.ಷೇಕ್ ಅಲಿ ಅವರ ಪುತ್ರ ಡಾ.ಜಾಕಿರ್ ಹುಸೇನ್, ವಿಶ್ರಾಂತ ಭೂಗೋಳ ಶಾಸ್ತ್ರ ಪ್ರಾಧ್ಯಾಪಕ ಡಾ.ರಂಗನಾಥ್, ಮಹೇಶ್ ಅಗಸರಹಳ್ಳಿ, ಸತ್ಯನಾರಾಯಣ, ಹರೀಶ್ ಇನ್ನಿತರರು ಉಪಸ್ಥಿತರಿದ್ದರು.

Translate »