ಮೈಸೂರು, ಸೆ.10(ಪಿಎಂ)- ಡ್ರಗ್ಸ್ ದಂಧೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದ ಹಲವು ರಾಜಕಾರಣಿಗಳು ಇದ್ದಾರೆ ಎಂದು ಆರೋಪಿಸಿರುವ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಈ ದಂಧೆಯಲ್ಲಿರುವ 32 ರಾಜ ಕಾರಣಿಗಳ ಪಟ್ಟಿಯನ್ನು ಗೃಹ ಸಚಿವರಿಗೆ ನೇರವಾಗಿ ಸಲ್ಲಿಸುವು ದಾಗಿ ಮೈಸೂರಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿಗೆ ಸೇರಿದ ಬಿಬಿಎಂಪಿ ಸದಸ್ಯರಲ್ಲಿ ಬಹುತೇಕರ ಪುತ್ರರು ಪಬ್ ಹಾಗೂ ಕ್ಲಬ್ಗಳನ್ನು ನಡೆಸುತ್ತಿದ್ದಾರೆ. ಇಲ್ಲೆಲ್ಲಾ ಮಾದಕ ವಸ್ತುಗಳು ಸಿಗುತ್ತಿವೆ ಎಂದು ಆರೋಪಿಸಿದರು. ಬೆಂಗಳೂರಿನಲ್ಲಿ ಮಾದಕ ದ್ರವ್ಯಗಳ ಬೃಹತ್ ಜಾಲವಿದೆ ಎಂಬ ಮಾಹಿತಿ ಪೆÇಲೀಸರಿಗೆ ಗೊತ್ತಿರಲಿಲ್ಲವೇ? ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಎಂದು ಹರಿಹಾಯ್ದ ಅವರು, ಲವ್ ಜಿಹಾದ್ ಮಾದರಿಯಲ್ಲೇ ಡ್ರಗ್ಸ್ ಜಿಹಾದ್ ದೇಶಾದ್ಯಂತ ನಡೆಯುತ್ತಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದರ ಮೂಲ ರೂವಾರಿ ಎಂದು ದೂರಿದರು. ಬೆಂಗಳೂರಿನ ಶಾಸಕರೊಬ್ಬರ ಪುತ್ರ ತಮ್ಮ ಹೆಸರನ್ನು ಮಾದಕ ವಸ್ತು ಮಾಫಿಯಾದಲ್ಲಿ ಸಿಲುಕಿಸಿ ಆರೋಪ ಮಾಡಬಾರದು ಎಂದು ನ್ಯಾಯಾಲಯಕ್ಕೆ ಹೋಗಿ ಮನವಿ ಸಲ್ಲಿಸಿದ್ದಾರೆ. ಅವರು ಒಂದು ವೇಳೆ ಪ್ರಾಮಾಣಿಕರಾಗಿದ್ದರೆ ಈ ರೀತಿ ಮನವಿ ಸಲ್ಲಿಸುವ ಅಗತ್ಯವಾದರೂ ಏನಿತ್ತು? ಎಂದು ಪ್ರಶ್ನಿಸಿದರು.