1971ರ ಪಾಕ್ ಯುದ್ಧದಲ್ಲಿ ಹುತಾತ್ಮರಾದ  ಇಬ್ಬರು ಯೋಧರ ಸಂಬಂಧಿಕರಿಗೆ ಗೌರವ
ಮೈಸೂರು

1971ರ ಪಾಕ್ ಯುದ್ಧದಲ್ಲಿ ಹುತಾತ್ಮರಾದ ಇಬ್ಬರು ಯೋಧರ ಸಂಬಂಧಿಕರಿಗೆ ಗೌರವ

December 1, 2021

ಮೈಸೂರು, ನ.30 (ಆರ್‍ಕೆಬಿ) – ಬಾಂಗ್ಲಾದೇಶದ ರಚನೆಗೆ ಕಾರಣವಾದ 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ವಿಜಯ ಸಾಧಿಸಿದ 50 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಎನ್‍ಸಿಸಿ (ನ್ಯಾಷನಲ್ ಕೆಡೆಟ್ ಕಾಪ್ರ್ಸ್) ಮೈಸೂರು ಗ್ರೂಪ್ ವತಿಯಿಂದ ಇಬ್ಬರು ಹುತಾತ್ಮ ಯೋಧರ ಕುಟುಂಬದವರನ್ನು ಅಭಿನಂದಿಸಲಾಯಿತು.

ಈ ವರ್ಷ ನ.28 ರಿಂದ ಡಿ.19ರವರೆಗೆ ದೇಶದಾದ್ಯಂತ ‘ವಿಜಯ್ ಶ್ರಂಕಲಾ ಔರ್ ಸಂಸ್ಕøತಿಯೋಂಕಾ ಮಹಾಸಂಗ್ರಾಮ್’ ಹೆಸರಿನಲ್ಲಿ ದೇಶಾದ್ಯಂತ ಸಂಭ್ರಮಾ ಚರಣೆ ನಡೆಯುತ್ತಿದೆ.

ಇದರ ಅಂಗವಾಗಿ ಮೈಸೂರಿನ ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಭ್ರಮಾಚರಣೆ ಕಾರ್ಯ ಕ್ರಮದಲ್ಲಿ ಹುತಾತ್ಮ ಯೋಧರಾದ ಫ್ಲೈಯಿಂಗ್ ಆಫೀಸರ್ ಕೆ.ಇ.20 ಏರ್ ಸ್ಕ್ವಾಡ್ರನ್ ಕೆ.ಪಿ.ಮುರಳೀಧರನ್ ಹಾಗೂ 66ನೇ ಶಸ್ತ್ರಸಜ್ಜಿತ ರೆಜಿಮೆಂಟ್‍ನ ರಿಸಲ್ದಾರ್ ಬಿ.ಎಂ.ಕಾವೇರಿಯಪ್ಪ ಅವರ ಗೌರವಾರ್ಥ ಮುರಳೀಧರನ್ ಅವರ ಸಹೋದರಿ ಲಲಿತಾ ಕೃಷ್ಣಕುಮಾರ್, ರಿಸಲ್ದಾರ್ ಬಿ.ಎಂ.ಕಾವೇರಿಯಪ್ಪ ಅವರ ಪುತ್ರ ಬಿ.ಎಂ.ಮಾಚಯ್ಯ ಅವರನ್ನು ಮುಖ್ಯ ಅತಿಥಿ ಮೇಜರ್ ಜನರಲ್ (ನಿವೃತ್ತ) ಸಿ.ಕೆ.ಕರುಂಬಯ್ಯ ಅವರು ಶಾಲು ಹೊದಿಸಿ ಗೌರವಿಸಿದರು.

ಇದಕ್ಕೂ ಮುನ್ನ `ಚೆಕ್ ದೇ ಇಂಡಿಯಾ…’, ಹಂಗೆ ಕುಣೀರೋ.. ಹಿಂಗೆ ಕುಣೀರೋ… ಮಾದೇಶ್ವರನ ಗೀತೆಗೆ ಕೆಡೆಟ್‍ಗಳು ನೃತ್ಯದ ಮೂಲಕ ಗಮನ ಸೆಳೆದರು. `ಭಾರತ್ ಹಮ್‍ಕೊ ಜಾನ್ ಸೆ ಪ್ಯಾರಾ ಹೈ…’ ಗೀತೆ ಹಾಡಿ ದೇಶಭಕ್ತಿ ಸಾರಿದರು.

ಮೇಜರ್ ಜನರಲ್ (ವಿಎಸ್‍ಎಂ ನಿವೃತ್ತ) ಎಸ್.ಜಿ.ವೊಂಬತ್ಕೆರೆ, ಎನ್‍ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಆರ್.ಆರ್. ಮೆನನ್, ಮಾಜಿ ಸೈನಿಕರ ಅಧ್ಯಕ್ಷ ಏರ್ ವೆಟರನ್ ಮಂಡೇಟಿರ ಎನ್.ಸುಬ್ರಮಣಿ ಇನ್ನಿತರರು ಉಪಸ್ಥಿತರಿದ್ದರು.

ಫ್ಲೈಯಿಂಗ್ ಆಫೀಸರ್ ಕೆ.ಪಿ.ಮುರಳೀ ಧರನ್: ಫ್ಲೈಯಿಂಗ್ ಆಫೀಸರ್ ಕೊಟ್ಟೀ ಝತ್ ಪುತಿಯಾವೆಟ್ಟಿಲ್ ಮುರಳೀಧರನ್ ಅವರು ಕೇರಳದ ಮಲ್ಲಪುರಂ ಜಿಲ್ಲೆಯ ನಿಲಂಬೂರ್ ಕೋವಿಲಕೋಮ್‍ನಿಂದ ಬಂದವರು. 1945ರ ಅ.6ರಂದು ಜನಿಸಿದ ಇವರು 21ನೇ ವಯಸ್ಸಿನಲ್ಲಿಯೇ 1966ರ ಅ.29ರಂದು ಭಾರತೀಯ ವಾಯುಪಡೆಗೆ ಸೇರ್ಪಡೆಯಾದರು. 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಲೈಟ್ನಿಂಗ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪಠಾಣ್‍ಕೋಟ್ ವಾಯು ಪಡೆ ನಿಲ್ದಾಣದಿಂದ ಕಾರ್ಯಾಚರಣೆ ಗಾಗಿ ಹಂಟರ್ (0-462)ನಲ್ಲಿ ಹೊರಟು, ಶತ್ರು ವಿಮಾನಗಳೊಂದಿಗೆ ಕಾಳಗದಲ್ಲಿ ತೊಡಗಿದರು. ಕೊನೆಂiÀiದಾಗಿ ಅವರು ಪೇಶಾವರದ ಉತ್ತರಕ್ಕೆ Pಂಈ ಸೇಬರ್ ನೊಂದಿಗೆ ಯುದ್ಧದಲ್ಲಿ ಪಿಎಎಫ್ ಸೇಬರ್ ಹೊಡೆದುರುಳಿಸಿತು.

ರಿಸಲ್ದಾರ್ ಬಿ.ಎಂ.ಕಾವೇರಿಯಪ್ಪ: ಕೊಡಗು ಜಿಲ್ಲೆಯ ವಿರಾಜಪೇಟೆಯ ಕಡಂಗಮರೂರಿನಲ್ಲಿ 1931ರ ಫೆ.4ರಂದು ಜನಿಸಿದರು. 1969ರ ಸೆಪ್ಟೆಂಬರ್‍ನಲ್ಲಿ 66 ಆರ್ಮಡ್ ರೆಜಿಮೆಂಟ್‍ಗೆ ಸೇರಿ, ಟ್ರೂಪ್ ಲೀಡರ್ ಆಗಿ ನೇಮಕಗೊಂಡರು. ಅವರು ತಮ್ಮ ಜೀವಿತದ ಕೊನೆಯ ದಿನದವರೆಗೂ ಸೇವೆ ಸಲ್ಲಿಸಿದರು.

ಕಾವೇರಿಯಪ್ಪ ಒಂದನೇ ಟ್ರೂಪ್ ಬ್ರಾವೋ ಸ್ಕ್ವಾಡ್ರನ್ ಕಮಾಂಡರ್ ಆಗಿದ್ದರು. 3 ಟ್ರೂಪ್ ಅನ್ನು ಬಲ ಪಡಿಸಲು ಹೊರಟಿದ್ದಾಗ ಅವರ ಟ್ಯಾಂಕ್‍ಗೆ ಶತ್ರುಗಳು ಹೊಡೆದುರುಳಿ ಸಿದರು. ಈ ವೇಳೆ ಅವರು ತಮ್ಮ ಸಿಬ್ಬಂದಿ ಯೊಂದಿಗೆ ಪ್ರಾಣ ತ್ಯಾಗ ಮಾಡಿದರು.

1971ರ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ 50ನೇ ವರ್ಷದ ನೆನಪಿನಲ್ಲಿ ದೇಶದೆಲ್ಲೆಡೆ ಸ್ವರ್ಣಿಮ ವಿಜಯ್ ವರ್ಷ್ ಆಚರಿಸಲಾಗುತ್ತಿದೆ. ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಸೈನಿಕರನ್ನು ಸ್ಮರಿಸಲಾಗುತ್ತದೆ. – ಮೇಜರ್ ಜನರಲ್ (ನಿವೃತ್ತ) ಸಿ.ಕೆ.ಕರುಂಬಯ್ಯ

Translate »