ನೇಪಾಳ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಮಂಡ್ಯ

ನೇಪಾಳ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

April 2, 2020

ಮಂಡ್ಯ, ಏ.1(ನಾಗಯ್ಯ)- ಭಾರತ ಲಾಕ್‍ಡೌನ್‍ನಿಂದ ಸಮಸ್ಯೆಗೆ ಸಿಲುಕಿರುವ ನೇಪಾಳ ಮೂಲದ 16 ಮಂದಿ ಕಟ್ಟಡ ಕಾರ್ಮಿಕರಿಗೆ ಬುಧವಾರ ಕಾರ್ಮಿಕ ಇಲಾಖೆ, ಭಾರತೀಯ ರೆಡ್‍ಕ್ರಾಸ್ ಹಾಗೂ ವಾರ್ತಾ ಇಲಾಖೆಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.

ಗುತ್ತಿಗೆದಾರರು ಇಲ್ಲದ ಕಾರಣ ಊಟಕ್ಕೆ ಸಮಸ್ಯೆಯಾಗದಂತೆ ಅವರಿಗೆ ದಿನಸಿ ಪದಾರ್ಥಗಳನ್ನು ಸರಬರಾಜು ಮಾಡಿಕೊಡುವುದಾಗಿ ಕಾರ್ಮಿಕ ಅýಕಾರಿ ನಾಗೇಂದ್ರ ತಿಳಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಲಾಕ್‍ಡೌನ್ ಮುಗಿಯುವವರೆಗೆ ಅಕ್ಕಿ ಮತ್ತು ತರಕಾರಿಗಳನ್ನು ವಿತರಿಸಲಾಗುವುದು ಉಳಿದ ಆಹಾರ ಪದಾರ್ಥಗಳನ್ನು ರೆಡ್‍ಕ್ರಾಸ್ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಭರಿಸಲಾಗುವುದು. ಲಾಕ್‍ಡೌನ್ ಮುಗಿಯುವವರೆಗೆ ಎಲ್ಲಿಗೂ ಹೋಗದಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು.

ರೆಡ್‍ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಭೂಮಿ ಸಿದ್ದೇಶ್ವರ ಸ್ವಾಮಿ ದೇಗುಲದ ನಿರ್ಮಾಣ ಕಾರ್ಯಕ್ಕೆ ನೇಪಾಳದಿಂದ ಕಾರ್ಮಿಕರು ಬಂದಿದ್ದು, ಅವರು ತೊಂದರೆಗೆ ಸಿಲುಕಿದ್ದಾರೆ. ಅವರಿಗೆ ತೊಂದರೆಯಾಗ ದಂತೆ ಅಗತ್ಯ ವಸ್ತುಗಳನ್ನು ಪೂರೈಸು ವುದಾಗಿ ಭರವಸೆ ನೀಡಿದರು.

ಈಗಾಗಲೇ ಬಿಸಿಎಂ ಹಾಸ್ಟೆಲ್‍ನಲ್ಲಿ ಗೃಹಬಂಧನದಲ್ಲಿರುವವರಿಗೆ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನಿರಾಶ್ರಿತರಿಗೆ ನಮ್ಮ ಸಮು ದಾಯದ ಭವನದಲ್ಲಿ ಆಶ್ರಯ ಕಲ್ಪಿಸಿ ಅಲ್ಲೇ ಅಡುಗೆ ಮಾಡಿ ಕೂಲಿಕಾರ್ಮಿಕರಿಗೆ ಹಾಗೂ ನಿರಾಶ್ರಿತರಿಗೆ ಊಟ ವಿತರಿಸು ವುದಾಗಿ ಹೇಳಿದರು. ಕಾರ್ಮಿಕ ಅಧಿಕಾರಿ ರಾಜೇಶ್, ಗ್ರಾಪಂ ಅಧ್ಯಕ್ಷ ಲಿಂಗಣ್ಣ, ಪಿಡಿಒ ಗಂಗಾಧರ್, ರೆಡ್‍ಕ್ರಾಸ್ ಸಂಸ್ಥೆ ಪದಾಧಿಕಾರಿ ಗಳಾದ ರಂಗಸ್ವಾಮಿ ಷಡಕ್ಷರಿ ಇದ್ದರು.

Translate »