ರೈತರ ಬೆಳೆಗೆ ಸ್ಥಳೀಯ ಮಾರುಕಟ್ಟೆ; ಸಿಎಸ್‍ಪಿ ಭರವಸೆ
ಮೈಸೂರು

ರೈತರ ಬೆಳೆಗೆ ಸ್ಥಳೀಯ ಮಾರುಕಟ್ಟೆ; ಸಿಎಸ್‍ಪಿ ಭರವಸೆ

April 2, 2020

ಮಂಡ್ಯ, ಏ.1(ನಾಗಯ್ಯ)- ರೈತರು ಬೆಳೆದ ಬೆಳೆಗಳು ಸಣ್ಣ ಪ್ರಮಾಣದಲ್ಲಿದ್ದರೆ ಮಾರಾಟ ಮಾಡಲು ಸ್ಥಳೀಯ ಮಾರು ಕಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೇಲುಕೋಟೆ ಶಾಸಕರಾದ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು.

ಅವರು ಮೇಲುಕೋಟೆಯಲ್ಲಿ ಹೋಬಳಿಯ ಪಿ.ಡಿ.ಒಗಳಿಗೆ ಕೊರೊನಾ ಜಾಗೃತಿ ಸಂಬಂಧ ಕೈಗೊಳ್ಳಬೇಕಾದ ಮುನ್ನೆ ಚ್ಚರಿಕೆ ಕ್ರಮದ ಮಾಹಿತಿ ನೀಡಿ ಮಾತ ನಾಡಿದರು. ರೈತರು ಬೆಳೆದ ಬೆಳೆಯನ್ನು ತಾವೆ ಕೈಯಾರೆ ನಾಶಪಡಿಸುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ರೈತರು ಎದೆಗುಂದಬಾರದು. ಹೆಚ್ಚಿನ ಪ್ರಮಾಣ ದಲ್ಲಿ ಬೆಳೆ ಇದ್ದರೆ ತಾಲ್ಲೂಕು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಮೂಲಕ ಮಾರುಕಟ್ಟೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಸಂಕಷ್ಠಕ್ಕೊಳಗಾದ ನಿರ್ಗತಿಕರು, ಅಶಕ್ತರು ಇದ್ದರೆ ಅವರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಊಟದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ ಶಾಸಕರು, ಶಾಲಾ ಮಕ್ಕಳಿಗೂ ಶಾಲೆಗಳಲ್ಲಿ ಪೋಷಕರ ಮೂಲಕ ಅಕ್ಕಿ ಬೇಳೆ ವಿತರಿ ಸುವ ವ್ಯವಸ್ಥೆ ಮಾಡಲಾಗಿದೆ. ಪಾಂಡವ ಪುರ ರೈಲ್ವೆ ನಿಲ್ದಾಣದಲ್ಲಿದ್ದ ನಿರ್ಗತಿಕರಿಗೆ ಕೆನ್ನಾಳು ಪಂಚಾಯಿತಿಯಿಂದ ಅಲ್ಲಿನ ಮುಖಂಡರು ಸೇರಿ ಊಟೋಪಚಾರದ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ವೈಯುಕ್ತಿಕವಾಗಿ ತಲಾ ಒಂದು ಸಾವಿರ ಮಾಸ್ಕ್ ವಿತರಿಸಲಾಗುತ್ತಿದೆ. ತಾಲ್ಲೂಕಿನ ಪ್ರಮುಖ ಸ್ಥಳಗಳಲ್ಲಿ ವೈರಸ್ ನಾಶಪಡಿ ಸುವ ಔಷಧ ಸಿಂಪಡಿಸಲಾಗುತ್ತಿದೆ 15 ದಿನ ನಾಗರೀಕರು ಮನೆಯಿಂದ ಹೊರ ಬರದೆ ಕೇಂದ್ರ ಹಾಗೂ ರಾಜ್ಯಸರ್ಕಾರದ ಕಾರ್ಯಗಳಿಗೆ ಸಹಕಾರ ನೀಡಿದರೆ ಕರೋನ ನಿಯಂತ್ರಣವಾಗಲಿದೆ. ಮೇಲು ಕೋಟೆ, ಜಕ್ಕನಹಳ್ಳಿ ಮುಂತಾದ ಕಡೆ ದ್ವಿಚಕ್ರವಾಹನಗಳು ಹೆಚ್ಚಾಗಿ ಸಂಚಾರ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು ಪೊಲೀಸ್ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದೂ ಸೂಚನೆ ನೀಡಿದರು.

ಮಂಡ್ಯಜಿಲ್ಲೆ ಚೆಲುವನಾರಾಯಣ ಸ್ವಾಮಿ ಕೃಪೆ ಮತ್ತು ಎಲ್ಲರ ಸತತ ಪರಿಶ್ರಮ ದಿಂದಾಗಿ ಕರೋನ ಮುಕ್ತಜಿಲ್ಲೆ ಎನಿಸಿ ಕೊಳ್ಳಲಿದೆ. ಕರೋನ ಶಂಕಿತ ಒಂದು ಪ್ರಕರಣವೂ ಜಿಲ್ಲೆಯಲ್ಲಿ ದೃಢಪಟ್ಟಿಲ್ಲ. ಹೋಂ ಕ್ವಾರಂಟೈನ್ ನಿಗಾ ಇಡಲಾಗಿದ್ದ ಯಾರೊಬ್ಬರಿಗೂ ಕರೋನ ವೈರಸ್ ಹರಡದಿರುವುದು ಸಮಾದಾನಕರ ಬೆಳವಣಿಗೆಯಾಗಿದೆ ಎಂದರು.

ಗ್ರಾ.ಪಂ ಅಧ್ಯಕ್ಷ ಅವ್ವಗಂಗಾಧರ್, ಸದಸ್ಯ ನಾರಾಯಣಭಟ್ಟರ್, ತಾ.ಪಂ.ಇ.ಒ ಮಹೇಶ್, ತಹಶೀಲ್ದಾರ್ ಪ್ರಮೋದ್ ಪಾಟೀಲ್, ವೈದ್ಯಾಧಿಕಾರಿ ಡಾ.ವರ್ಷ ಸೇರಿದಂತೆ ಹೋಬಳಿಯ ಪಿ.ಡಿ.ಒ ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Translate »