ನ್ಯಾ.ನಾಗಮೋಹನ್‌ದಾಸ್ ವರದಿ ಜಾರಿಗೆ ಚಾ.ನಗರ ಜಿಲ್ಲಾದ್ಯಂತ ಬೃಹತ್ ಪ್ರತಿಭಟನೆ
ಮೈಸೂರು

ನ್ಯಾ.ನಾಗಮೋಹನ್‌ದಾಸ್ ವರದಿ ಜಾರಿಗೆ ಚಾ.ನಗರ ಜಿಲ್ಲಾದ್ಯಂತ ಬೃಹತ್ ಪ್ರತಿಭಟನೆ

May 21, 2022

ಚಾಮರಾಜನಗರ, ಮೇ ೨೦-ನ್ಯಾಯ ಮೂರ್ತಿ ನಾಗಮೋಹನ್‌ದಾಸ್ ವರದಿ ಜಾರಿಗೆ ಆಗ್ರಹಿಸಿ ಹಾಗೂ ಜನಾಂಗದ ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ವಾಲ್ಮೀಕಿ ಮಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣ ಬೆಂಬಲಿಸಿ ನಾಯಕ ಸಮುದಾಯದಿಂದ ನಗರ ಸೇರಿದಂತೆ ಜಿಲ್ಲಾ ದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಚಾಮರಾಜನಗರದ ಪ್ರವಾಸಿಮಂದಿರ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟ ನಾನಿತರರು, ಅಲ್ಲಿಂದ ಮೆರವಣ ಗೆ ಹೊರಟು ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆತಡೆ ನಡೆಸಿದರು. ನಂತರ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟಿಸಿ ಎಡಿಸಿ ಕಾತ್ಯಾಯಿನಿದೇವಿ ಅವರÀ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ನಾಯಕ ಜನಾಂಗದ ಮುಖಂಡ ಪು.ಶ್ರೀನಿವಾಸ ನಾಯಕ ಮಾತನಾಡಿ, ೨೦೧೧ರ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಗೆ ಇರುವ ಶೇ.೧೫ರಷ್ಟು ಮೀಸಲಾತಿಯನ್ನು ಶೇ.೧೭ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಇರುವ ಶೇ.೩ರಷ್ಟು ಮೀಸಲಾತಿಯನ್ನು ಶೇ.೭.೫ಕ್ಕೆ ಹೆಚ್ಚಿಸಲು ವರದಿ ಸೂಚಿಸಿದ್ದು, ಇದನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಇಲ್ಲದ್ದರೆ ಜನ-ಜಾನು ವಾರುಗಳೊಂದಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ದಲಿತ ಮುಖಂಡ ಅರಕಲವಾಡಿ ನಾಗೇಂದ್ರ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚAದ್ರ, ಮಾಜಿ ಸದಸ್ಯರಾದ ಎಸ್.ಸೋಮನಾಯಕ, ರಮೇಶ್, ತಾಪಂ ಮಾಜಿ ಅಧ್ಯಕ್ಷ ಹೆಚ್.ವಿ.ಚಂದ್ರು, ಪಾಳ್ಯ ಜಯಸುಂದರ್, ನಿವೃತ್ತ ಅಭಿಯಂತರ ರಂಗರಾಮನಾಯಕ, ಯ.ರಾಜುನಾಯಕ, ನಗರಸಭಾ ಸದಸ್ಯರಾದ ಶಿವರಾಜ್, ಸುರೇಶ್, ಪ್ರಕಾಶ್, ಮಾಜಿ ಸದಸ್ಯ ಚೆಂಗುಮಣ , ಮುಖಂಡರಾದ ಕಪಿನಿನಾಯಕ, ನಗರ ಸಭಾ ಮಾಜಿ ಅಧ್ಯಕ್ಷ ಸುರೇಶ್‌ನಾಯಕ, ಚಾ.ಸಿ.ಸೋಮನಾಯಕ, ಕೃಷ್ಣನಾಯಕ, ನಾರಾಯಣ್, ಶಿವುವಿರಾಟ್, ಬುಲೆಟ್ ಚಂದ್ರು, ದಲಿತ ಮುಖಂಡ ಸಿ.ಎಂ.ಕೃಷ್ಣಮೂರ್ತಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ ಸೇರಿ ದಂತೆ ತಾಲೂಕಿನ ನಾಯಕ ಸಮುದಾಯ ದವರು ಸಹಸ್ರಾರು ಸಂಖ್ಯೆಯಲ್ಲಿದ್ದರು.

ಗುAಡ್ಲುಪೇಟೆ ವರದಿ: ಜನಾಂಗದ ಮೀಸ ಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ನಾಯಕ ಸಮುದಾಯದವರಿಂದ ಬೃಹತ್ ಪ್ರತಿಭಟಿಸ ಲಾಯಿತು. ಪಟ್ಟಣದ ಪಟ್ಟಲದಮ್ಮನವರ ದೇವಾಲಯದಿಂದ ಪ್ರವಾಸಿ ಮಂದಿರ ಮಾರ್ಗವಾಗಿ ರಾಷ್ಟಿçÃಯ ಹೆದ್ದಾರಿಯಲ್ಲಿ ಮೆರವಣ ಗೆ ಸಾಗಿದ ಪ್ರತಿಭಟನಾಕಾರರು, ಸಾರಿಗೆ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ರಚಿಸಿ ನಾಗಮೋಹನ್ ವರದಿ ಜಾರಿಗೆ ತರುವಂತೆ ಘೋಷಣೆ ಕೂಗಿ ಆಗ್ರಹಿಸಿದರು. ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ರವಿಶಂಕರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಮಲ್ಲೇಶ್, ಮುಖಂಡರಾದ ನಿಂಗರಾಜನಾಯ್ಕ, ತಮ್ಮಣ್ಣ ನಾಯ್ಕ, ಪುರಸಭೆ ಸದಸ್ಯ ಕುಮಾರ್, ಪುರ ಸಭೆ ಮಾಜಿ ಉಪಾಧ್ಯಕ್ಷ ಸುರೇಶ್‌ನಾಯಕ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಲಿಂಗರಾಜು, ವಕೀಲ ಟಿ.ಎಸ್.ವೆಂಕಟೇಶ್, ಟಿ.ಆರ್.ರಮೆಶ್‌ನಾಯ್ಕ, ವೆಂಕಟೇಶ್ ನಾಯಕ, ಹಂಗಳ ಗ್ರಾಪಂ ಸದಸ್ಯ ವೃಷ ಭೇಂದ್ರ, ನಾರಾಯಣನಾಯ್ಕ, ನಾಗೇಂದ್ರ, ಚಂದ್ರಶೇಖರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ನಾಯಕ ಸಮುದಾಯದ ಯಜಮಾನರು, ಮುಖಂಡರು ಹಾಗೂ ಸಮುದಾಯದವರಿದ್ದರು.

ಯಳಂದೂರು ವರದಿ: ಯಳಂದೂರು ಪಟ್ಟಣದಲ್ಲೂ ಭಾರೀ ಪ್ರತಿಭಟನೆ ನಡೆಸಲಾಯಿತು. ತಾಲೂಕು ನಾಯಕ ಮಂಡಳಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ನಾಯಕ ಜನಾಂಗದವರು ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು ಪಟ್ಟಣದ ಪ್ರಮುಖಬೀದಿಗಳಲ್ಲಿ ಮೆರವಣ ಗೆ ಸಾಗಿ ಧಿಕ್ಕಾರ ಕೂಗಿದರಲ್ಲದೆ, ಪಟ್ಟಣದ ಮಿನಿ ವಿಧಾನಸೌಧ ಮುಂಭಾಗದ ರಾಷ್ಟಿçÃಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ನಂತರ ತಹಸೀಲ್ದಾರ್ ಆನಂದಪ್ಪ ನಾಯಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಜನಾಂಗ ಯಜಮಾನರಾದ ಮೂರ್ತಿ, ಪಪಂ ಸದಸ್ಯ ಮಹೇಶ್, ಕಂದಹಳ್ಳಿ ಮಹೇಶ್, ಮಾಜಿ ಸದಸ್ಯ ವೈ.ವಿ. ಉಮಾಶಂಕರ್, ಕಂದಹಳ್ಳಿ ನಾರಾಯಣ, ಅಗ್ರಹಾರ ರಂಗಸ್ವಾಮಿ, ಶ್ರೀನಿವಾಸ್ ಮಾತನಾಡಿದರು. ತಾಲೂಕು ನಾಯಕ ಮಂಡಳಿ ಅಧ್ಯಕ್ಷ ವೈ.ಎನ್.ಮುರಳೀಕೃಷ್ಣ, ವೆಂಕಟೇಶ್, ಉಮೇಶ್, ವೆಂಕಟಾಚಲ, ಪಪಂ ಸದಸ್ಯ ರಾದ ವೈ.ಜಿ.ರಂಗನಾಥ, ಮಹದೇವ ನಾಯಕ, ಮಂಜು, ಮಾಜಿ ಸದಸ್ಯರಾದ ಭೀಮಪ್ಪ ಮುಖಂಡರಾದ ರಾಜಶೇಖರ್ ಸೇರಿದಂತೆ ಅನೇಕರಿದ್ದರು.

ನ್ಯಾ.ನಾಗಮೋಹನ್‌ದಾಸ್ ವರದಿ ಜಾರಿಗೆ ಆಗ್ರಹಿಸಿ ಚಾಮರಾಜನಗರದ ಜಿಲ್ಲಾಡಳಿತ ಭವನ, ಗುಂಡ್ಲುಪೇಟೆಯ ರಾಷ್ಟಿçÃಯ ಹೆದ್ದಾರಿ, ಯಳಂದೂರಿನ ಮಿನಿ ಮಿನಿವಿಧಾನ ಸೌಧದ ಮುಂಭಾಗ ನಾಯಕ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

 

Translate »