ಮೈಸೂರಲ್ಲಿ ನಗರ ಪಾಲಿಕೆ ಒಳಚರಂಡಿ ಸಹಾಯಕರು, ಪೌರಕಾರ್ಮಿಕರ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ನಗರ ಪಾಲಿಕೆ ಒಳಚರಂಡಿ ಸಹಾಯಕರು, ಪೌರಕಾರ್ಮಿಕರ ಪ್ರತಿಭಟನೆ

December 15, 2020

ಮೈಸೂರು,ಡಿ.14(ಆರ್‍ಕೆಬಿ)- ಮೈಸೂರು ಮಹಾನಗರಪಾಲಿಕೆಯಲ್ಲಿ ಕಾರ್ಯ ನಿರ್ವ ಹಿಸುತ್ತಿರುವ 231 ಮಂದಿ ಒಳಚರಂಡಿ ಕಾರ್ಮಿಕರನ್ನು (ಸಹಾಯಕ) ಖಾಯಂ ಮಾಡಬೇಕು. ಅವರಿಗೂ ಬೆಳಗಿನ ಉಪಾ ಹಾರ ಭತ್ಯೆ ನೀಡಬೇಕು ಎಂದು ಆಗ್ರಹಿಸಿ ಮೈಸೂರು ಮಹಾನಗರಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರ ಕಾರ್ಮಿಕರು ಸೋಮವಾರ ಮೈಸೂರು ಮಹಾನಗರಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಒಳ ಚರಂಡಿ ಕಾರ್ಮಿಕರಿಗೆ ಬೆಳಗಿನ ಉಪಾಹಾರ ಹಣ ಮಂಜೂರಾಗಿದ್ದರೂ, ಅದು ಬಿಡುಗಡೆ ಆಗಿಲ್ಲ. ಹಾಗಾಗಿ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಪತ್ರ ಬರೆದಿದ್ದಾರೆ. ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು. ಕೂಡಲೇ ಖಾಯಂ ಮಾಡಿ, ನೇರ ವೇತನ ನೀಡಿ ಎಂದು ಘೋಷಣೆಗಳನ್ನು ಕೂಗಿದರು.
ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ ಮತ್ತು ಕಾರ್ಯದರ್ಶಿ ಶ್ರೀನಿವಾಸ್ ನೇತೃತ್ವ ದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಒಳಚರಂಡಿ ಸಹಾಯಕರು, ಪೌರ ಕಾರ್ಮಿಕರು ಭಾಗವಹಿಸಿದ್ದರು.

ಒಳಚರಂಡಿ ವಿಭಾಗದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿರುವ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿ ದ್ದಾರೆ. ಕರ್ನಾಟಕ ರಾಜ್ಯಾದ್ಯಂತ ಸುಮಾರು ಕಾರ್ಮಿಕರು ಗಟಾರ (ಮ್ಯಾನ್ಯುಯಲ್)ದÀಲ್ಲಿ ಇಳಿದು ಸ್ವಚ್ಛತಾ ಕೆಲಸ ಮಾಡುವಾಗ ಸಾವನ್ನಪ್ಪಿದ ಸಾಕಷ್ಟು ನಿದರ್ಶನಗಳಿವೆ. ಕೆಲವೊಮ್ಮೆ ಆರೋಗ್ಯ ಹಾಳಾಗುವ ಜೊತೆಗೆ ಅನೇಕ ಕಾರ್ಮಿಕರ ಕೈಬೆರಳುಗಳು ತುಂಡಾಗಿ, ಅನೇಕ ಕಾರ್ಮಿಕರು ವಾಸಿಯಾಗದ ಚರ್ಮರೋಗಕ್ಕೆ ಒಳಗಾಗಿದ್ದಾರೆ. ಒಳ ಚರಂಡಿ ಕಾರ್ಮಿಕರು ಒಂದು ವರ್ಷದಲ್ಲಿ ಸುಮಾರು 5-6 ಮಂದಿ ಮರಣ ಹೊಂದಿದ್ದಾರೆ. ಇವರ ಕುಟುಂಬಗಳಿಗೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ 65 ವಾರ್ಡ್ ಒಳಗೊಂಡ ಒಟ್ಟಾರೆ 2700 ಕಿ.ಮೀ. ಕೊಳವೆ ಮಾರ್ಗಕ್ಕೆ 231 ಮಂದಿ ಒಳಚರಂಡಿ ಕಾರ್ಮಿಕರು ಮಳೆಗಾಲ, ದಸರಾ ಸಂದರ್ಭ ಹಾಗೂ ಕೊರೊನಾ ಸಂದರ್ಭದಲ್ಲಿ ಎಲ್ಲಾ ವಾರ್ಡ್ ಗಳಿಗೂ ಹೋಗಿ ಹಗಲು ರಾತ್ರಿ ಔಷಧಿ ಸಿಂಪಡಿಸಿದ್ದೇವೆ. ಕೆಲವು ಕಾರ್ಮಿಕರಿಗೆ ಕೊರೊನಾ ಬಂದು, ಚಿಕಿತ್ಸೆ ಪಡೆದಿದ್ದಾರೆ. ನಮ್ಮೆಲ್ಲರ ಶ್ರಮದ ಫಲವಾಗಿ ಮೈಸೂರು ಪಾಲಿಕೆಗೆ ಹಲವು ಬಾರಿ ಪ್ರಶಸ್ತಿಗಳು ಬಂದಿದ್ದರೂ ಒಳಚರಂಡಿ ಕಾರ್ಮಿಕರನ್ನು ಕಡೆಗಣಿಸಲಾಗಿದೆ ಎಂದು ಖಂಡಿಸಿದರು.

ಉಪ ಮೇಯರ್ ಸಿ.ಶ್ರೀಧರ್, ಕಾರ್ಯ ಪಾಲಕ ಇಂಜಿನಿಯರ್ ಶ್ರೀನಿವಾಸ್ ಪ್ರತಿ ಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಆದರೆ ನಮ್ಮ ಬೇಡಿಕೆ ಈಡೇರುವವ ರೆಗೂ ಪ್ರತಿಭಟನೆ ಮುಂದುವರಿಸುವು ದಾಗಿ ತಿಳಿಸಿದ ಪಾಲಿಕೆ ಒಳಚರಂಡಿ ಸಹಾ ಯಕರು ಹಾಗೂ ಪೌರಕಾರ್ಮಿಕರು ಪ್ರತಿ ಭಟನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದರು.

ಪ್ರತಿಭಟನೆಯಲ್ಲಿ ನಗರಪಾಲಿಕೆ ಒಳ ಚರಂಡಿ ಸಹಾಯಕರು ಹಾಗೂ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಪಳನಿ ಸ್ವಾಮಿ, ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಉಸ್ತುವಾರಿ ಅಧ್ಯಕ್ಷ ಆರ್.ರಾಜು, ಪ್ರದಾನ ಕಾರ್ಯದರ್ಶಿ ಎಸ್.ಗಣೇಶ್, ಇನ್ನಿತರ ಪದಾಧಿಕಾರಿಗಳಾದ ಎಸ್.ಶಂಕರ್, ಪಿ. ಹನುಮಂತು, ಬಿ.ಜೆ.ಹನುಮೇಶ್, ಮಹ ದೇವ, ಗೋಪಾಲ, ಪಿ.ಮುರುಗ, ಸುಬ್ರ ಮಣಿ, ಲಕ್ಷ್ಮಣ, ಎ.ನರಸಿಂಹ, ಆರ್. ಲೋಕೇಶ್, ಕೆ.ಸೋಮು, ಎನ್.ಪ್ರಕಾಶ್, ಡಿ.ರವಿಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

 

 

 

Translate »