ರೈತರ ಹೋರಾಟಕ್ಕೆ ಪ್ರಜಾಪಾರ್ಟಿ ಬೆಂಬಲ
ಮೈಸೂರು

ರೈತರ ಹೋರಾಟಕ್ಕೆ ಪ್ರಜಾಪಾರ್ಟಿ ಬೆಂಬಲ

December 15, 2020

ಬೆಂಗಳೂರು, ಡಿ.14- ಕರ್ನಾಟಕ ಪ್ರಜಾಪಾರ್ಟಿ(ರೈತಪರ್ವ) ವತಿಯಿಂದ ಬೆಂಗ ಳೂರಿನ ಫ್ರೀಡಂಪಾರ್ಕ್‍ನಲ್ಲಿ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.

ಪಾರ್ಟಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಶಿವಣ್ಣ ಮಾತನಾಡಿ, ಕೃಷಿ ಕಾಯ್ದೆ (ತಿದ್ದುಪಡಿ)ಗಳನ್ನು ವಿರೋಧಿಸಿ ನವದೆಹಲಿಯಲ್ಲಿ ರೈತರು ಅನಿರ್ಧಾಷ್ಟಾವದಿ ಮುಷ್ಕರ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮೂಲಕ ರೈತಾಪಿ ವರ್ಗವನ್ನು ಗೌರವಿಸಬೇಕೆಂದು ಆಗ್ರಹಿಸಿದರು.

ಪಾರ್ಟಿಯ ರಾಜ್ಯ ಮಾಧ್ಯಮ ವಕ್ತಾರ ಶ್ರೀನಿವಾಸಗೌಡ, ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಆರ್.ಲೋಕೇಶ್, ಖಜಾಂಚಿ ಬಿ.ಆದರ್ಶ್ ಚಿತ್ರದುರ್ಗ, ಜಿಲ್ಲಾಧ್ಯಕ್ಷ ರಂಗಸ್ವಾಮಿ ಮಹಿಳಾ ಘಟಕದ ಉಪಾಧ್ಯಕ್ಷೆ ತಾರಾ, ಕೆ.ಆರ್.ನಗರ ತಾಲೂಕು ಅಧ್ಯಕ್ಷೆ ಗೀತಾ ಚಾಮರಾಜನಗರ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್, ಕಾನೂನು ಸಲಹೆಗಾರ ಮುರುಗೇಶ ಮೈಸೂರಿನ 8ನೇ ವಾರ್ಡ್ ಅಧ್ಯಕ್ಷೆ ನೂರುಲ್ಲಾ, ಸರಗೂರು ತಾಲೂಕು ಅಧ್ಯಕ್ಷ ಹೆಚ್.ಸಿ.ರಾಜೇಂದ್ರ, ಜಿಲ್ಲಾ ಸಂಚಾಲಕರಾದ ಬಿ.ಉಮೇಶ್, ಜೆ.ಸಿ.ಸೋಮೇಶ್, ನಾರಾಯಣಸ್ವಾಮಿ, ರಾಜ್ಯ ಕಾರ್ಯ ದರ್ಶಿ ಕೆ.ಎಸ್.ಮಹೇಶ್ ಶಿವರುದ್ರಪ್ಪ ಸಹ ಕಾರ್ಯದರ್ಶಿ ಎಸ್.ಲೋಕೇಶ್, ಬಂದಿಗೌಡ ನಾರಾಯಣ, ಶಂಕರ್, ವಿನಯ್, ಸಾಗರ್ ದಾಸಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಬಿ.ಶಿವಣ್ಣ, ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷರನ್ನಾಗಿ ಎ.ಓ.ಪ್ರಸಾದ್ ಅವರನ್ನು ನೇಮಕ ಮಾಡಿ, ಆದೇಶ ಪತ್ರ ನೀಡಿದರು.

Translate »