ಏಕಲವ್ಯನಗರದಲ್ಲಿ ಕುಂದು-ಕೊರತೆ ಆಲಿಸಿದ ಪೊಲೀಸರು
ಮೈಸೂರು

ಏಕಲವ್ಯನಗರದಲ್ಲಿ ಕುಂದು-ಕೊರತೆ ಆಲಿಸಿದ ಪೊಲೀಸರು

December 15, 2020

ಮೈಸೂರು,ಡಿ.14(ಆರ್‍ಕೆ)-ಮೇಟಗಳ್ಳಿ ಠಾಣೆ ಪೊಲೀಸರು ಏಕಲವ್ಯನಗರದ ನರ್ಮ್ ಯೋಜನೆ ವಸತಿ ಸಮುಚ್ಛಯದಲ್ಲಿ ವಾಸಿಸುತ್ತಿರುವ ನಿವಾಸಿಗಳ ಕುಂದು-ಕೊರತೆ ವಿಚಾರಿಸಿದರು. ಕಸ ವಿಲೇವಾರಿ ಮಾಡದಿರುವುದರಿಂದ ಸಮುಚ್ಛಯದ ಸುತ್ತ ಕಸದ ರಾಶಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ತೊಂದರೆ ಅನುಭವಿಸುತ್ತಿದ್ದೇ ವಲ್ಲದೆ, ಅಂಗನವಾಡಿ ಕೇಂದ್ರ, ನ್ಯಾಯಬೆಲೆ ಅಂಗಡಿ, ದನಕರುಗಳಿಗೆ ನೀರಿನ ತೊಟ್ಟಿ ಅಗತ್ಯವಿದೆ. ತಾವು ವಾಸಿಸುತ್ತಿರುವ ಮನೆಗಳಿಗೆ ಹಕ್ಕು ಪತ್ರ ನೀಡಿಲ್ಲ ಎಂಬಿತ್ಯಾದಿ ದೂರುಗಳನ್ನು ನಿವಾಸಿಗಳು ಹೇಳಿದರು. ಕುಡಿತ, ಜೂಜು, ಗಾಂಜಾ, ಅಪೀಮಿನಂತಹ ದುಶ್ಚಟಗಳಿಗೆ ದಾಸರಾಗದೆ, ನಿಮ್ಮ ವೃತ್ತಿಗಳನ್ನು ಮಾಡಿಕೊಂಡು ಗೌರವಯುತವಾಗಿ ಬಾಳ್ವೆ ನಡೆಸಿ, ಯಾವುದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳಬೇಡಿ ಎಂದು ಸಲಹೆ ನೀಡಿದ ಮೇಟಗಳ್ಳಿ ಠಾಣೆ ಇನ್ಸ್‍ಪೆಕ್ಟರ್ ಎ.ಮಲ್ಲೇಶ್, ಸುರಕ್ಷತೆ ದೃಷ್ಟಿಯಿಂದ ಎಂತಹ ಸಂದರ್ಭದಲ್ಲೂ ನಾವು ನಿಮ್ಮೊಂದಿಗಿದ್ದೇವೆ ಎಂದರು. ಸಬ್‍ಇನ್ಸ್‍ಪೆಕ್ಟರ್ ವಿಶ್ವನಾಥ್, ದಸಂಸ ಮುಖಂ ಡರುಗಳಾದ ನಂಜಪ್ಪ, ನಿಂಗರಾಜ್ ಮಲ್ಲಾಡಿ, ಪುಟ್ಟಲಕ್ಷ್ಮಮ್ಮ ಸೇರಿದಂತೆ ಹಲವರು ಕುಂದು-ಕೊರತೆ ವಿಚಾರಣಾ ಸಭೆಯಲ್ಲಿ ಪಾಲ್ಗೊಂಡಿದ್ದರು.

 

 

 

Translate »