ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಚಾಲನೆ
ಮೈಸೂರು

ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಚಾಲನೆ

December 21, 2018

ಮೈಸೂರು:  ಮೈಸೂರು ವಿಶ್ವವಿದ್ಯಾನಿಲಯದ ಹಾಕಿ ಮೈದಾನದಲ್ಲಿ ಇಂದಿನಿಂದ ನಾಲ್ಕು ದಿನ ಗಳ ಕಾಲ ಆಯೋಜಿಸಿರುವ ರಾಜ್ಯಮಟ್ಟದ ಪುರುಷರ ಹಾಕಿ ಪಂದ್ಯಾವಳಿಗೆ ಗುರು ವಾರ ಚಾಲನೆ ನೀಡಲಾಯಿತು.

ಹಾಕಿ ಮೈಸೂರು ಸಂಸ್ಥೆ ಆಯೋಜಿ ಸಿರುವ ಹಾಕಿ ಪಂದ್ಯಾವಳಿಗೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ಪ್ರಸ್ತುತ ಕ್ರಿಕೆಟ್, ಪ್ರೋ ಕಬಡ್ಡಿಗೆ ಸಿಗುತ್ತಿರುವ ಪ್ರಾಮುಖ್ಯತೆ ಹಾಕಿ ಪಂದ್ಯಾವಳಿಗೆ ಸಿಗುತ್ತಿಲ್ಲ. ಇದರಿಂದಾಗಿ ಹಾಕಿ ತೆರೆಮರೆಗೆ ಸರಿಯುತ್ತಿದೆಯೇನೋ ಎಂಬ ಭಾವನೆ ಮೂಡುತ್ತಿದೆ. ಆದರೆ, ಕೊಡ ಗಿನ ಭಾಗದಲ್ಲಿ ಹಾಕಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ಇತರೆ ಕಡೆಗಳಲ್ಲೂ ಹಾಕಿ ಹೆಚ್ಚು ಆಯೋಜಿಸುವ ಮೂಲಕ ಬೆಳೆಸಬೇ ಕಿದೆ ಎಂದು ಹೇಳಿದರು.

ಭಾರತೀಯ ಹಾಕಿ ತಂಡವು ಸತತ 4 ಬಾರಿ ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕ ಪಡೆ ದಿದೆ. ಧ್ಯಾನ್‍ಚಂದ್, ಕೊಡಗಿನ ಅರ್ಜುನ್ ಹಾಲಪ್ಪ ಮತ್ತಿತರೆ ಆಟಗಾರರು ತಂಡವನ್ನು ಪ್ರತಿನಿಧಿಸಿದ್ದಾರೆ. ಹಾಗಾಗಿ ಇಂದು ಹಾಕಿ ಪಂದ್ಯದಲ್ಲಿ ಭಾಗವಹಿಸಿರುವ ಎಲ್ಲರೂ ಉತ್ತಮವಾಗಿ ಆಟವಾಡಿ ಮುಂದಿನ ದಿನ ಗಳಲ್ಲಿ ಭಾರತೀಯ ಹಾಕಿ ತಂಡವನ್ನು ಪ್ರತಿ ನಿಧಿಸುವಂತಾಗಬೇಕು ಎಂದು ಕಿವಿ ಮಾತು ಹೇಳಿದರು. ಇಂದು ಅಂತರ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ ಆಯೋಜಿ ಸಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸಬೇಕು ಎಂಬುದು ನನ್ನ ಅಭಿಲಾಷೆ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಉದ್ಘಾಟನಾ ಕಾರ್ಯ ಕ್ರಮಕ್ಕೂ ಮುನ್ನ ನಡೆದ ಹಾಕಿ ಪಂದ್ಯಾ ವಳಿಯ ಲೀಗ್‍ನಲ್ಲಿ ಹಾಕಿ ಶಿವಮೊಗ್ಗ (8)-ಗುಲ್ಬರ್ಗಾ(1) ಗೋಲ್ ಬಾರಿಸಿದರೆ, ಕೂರ್ಗ್(7)-ಬಳ್ಳಾರಿ(0), ಬೆಳಗಾವಿ(1)-ತುಮಕೂರು(2), ಗದಗ್(1)-ಧಾರವಾಡ(1), ಶಿವಮೊಗ್ಗ(1)-ಮಂಗಳೂರು(1), ಕೂರ್ಗ್ (6)-ಹುಬ್ಬಳ್ಳಿ(1) ಗೋಲ್‍ಗಳನ್ನು ಭಾರಿಸಿದೆ. ಉತ್ತಮ ಆಟವಾಡಿದ ಕೂರ್ಗ್ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಉದ್ಘಾ ಟನಾ ಕಾರ್ಯಕ್ರಮ ದಲ್ಲಿ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ.ಪುಲಿಕೇಶಿ ವೈ.ಶೆಟ್ಟೆಪ್ಪನವರ್, ಎನ್.ಆರ್. ಗ್ರೂಪ್ ನಿರ್ದೇಶಕ ಪವನ್‍ರಂಗ, ಬೃಂದಾ ವನ ಆಸ್ಪತ್ರೆ ನಿರ್ದೇಶಕ ಎ.ಎಸ್.ಮನೋಜ್ ಕುಮಾರ್, ಮಾಂಡೋವಿ ಮೋಟಾರ್ಸ್ ಉಪಾಧ್ಯಕ್ಷ ಪಿ.ಎಂ.ಗಣಪತಿ, ವಕೀಲ ಎಂ.ಯು. ಸುಬ್ಬಯ್ಯ, ಹಾಕಿ ಮೈಸೂರು ಅಧ್ಯಕ್ಷ ಕೆ.ಬಿ. ದಿಲೀಪ್, ಉಪಾಧ್ಯಕ್ಷ ಕೆ.ಎನ್.ಮುದ್ದಯ್ಯ, ಕಾರ್ಯದರ್ಶಿ ಸಿ.ಟಿ.ಸತೀಶ್ ಮತ್ತಿತರರಿದ್ದರು.

Translate »