ಪಾಲಿಕೆಯಿಂದ ಮುಂದುವರೆದ ಬಿಡಾಡಿ ಜಾನುವಾರುಗಳ ವಿರುದ್ಧದ ಕಾರ್ಯಾಚರಣೆ
ಮೈಸೂರು

ಪಾಲಿಕೆಯಿಂದ ಮುಂದುವರೆದ ಬಿಡಾಡಿ ಜಾನುವಾರುಗಳ ವಿರುದ್ಧದ ಕಾರ್ಯಾಚರಣೆ

December 21, 2018

ಮೈಸೂರು: ಮೈಸೂರಿನ ಗಾಯತ್ರಿಪುರಂನಲ್ಲಿ ಹುಚ್ಚು ಕುದುರೆಗಳು ಸೊಪ್ಪು ಮಾರುವ ಬಡ ಮಹಿಳೆ ಬಲಿ ಪಡೆದ ದುರ್ಘಟನೆಯಿಂದ ಎಚ್ಚೆತ್ತ ಮೈಸೂರು ನಗರಪಾಲಿಕೆ ಅಧಿಕಾರಿಗಳು ಮೈಸೂರಿನಲ್ಲಿ ಬಿಡಾಡಿ ಪ್ರಾಣಿ ಸೆರೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ಬುಧವಾರದಿಂದ ಬೀದಿ ನಾಯಿಗಳು, ಹಂದಿ, ಹಸು, ಎಮ್ಮೆ, ಕುದುರೆ, ಕೋತಿಗಳಂ ತಹ ಪ್ರಾಣಿಗಳನ್ನು ಹಿಡಿಯಲಾರಂಭಿಸಿ ರುವ ಮೈಸೂರು ಮಹಾನಗರ ಪಾಲಿಕೆಯ ಪಶುಪಾಲನಾ ವಿಭಾಗದ ಅಧಿಕಾರಿಗಳು, ನುರಿತ ಕೆಲಸಗಾರರ ಗ್ಯಾಂಗ್ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇಂದು ಬೆಳಿಗ್ಗೆ ಕುವೆಂಪುನಗರ, ರಾಮ ಕೃಷ್ಣನಗರ ಹಾಗೂ ಅಗ್ರಹಾರ ಸುತ್ತಮುತ್ತ ಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆ ಸಿದ ಗ್ಯಾಂಗ್‍ಮನ್‍ಗಳು, ಬಿಡಾಡಿ ಎಮ್ಮೆ ಗಳನ್ನು ಹಿಡಿದು ದೊಡ್ಡಿಗಟ್ಟಿದರು. ಪ್ರತೀ ದಿನ ಬಿಡಾಡಿ ಕುದುರೆ, ಹಸು, ಎಮ್ಮೆಗಳನ್ನು ಒಂದೊಂದು ದಿನ ಒಂದೊಂದು ಬಡಾವಣೆ ಗಳಲ್ಲಿ ಹಿಡಿಯುವ ಕೆಲಸ ಮುಂದುವರೆ ಸುತ್ತೇವೆ ಎಂದು ಪಶು ವೈದ್ಯಾಧಿಕಾರಿ ಡಾ. ಸುರೇಶ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಈಗಾಗಲೇ ಬಿಡಾಡಿ ಜಾನುವಾರುಗಳಿಂದ ತೊಂದರೆಯಾಗುತ್ತಿದೆಯಲ್ಲದೆ, ವಾಹನ ಸಂಚಾರಕ್ಕೂ ಅಡ್ಡಿಯುಂಟಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ ಯಲ್ಲದೆ, ಜನಪ್ರತಿನಿಧಿಗಳೂ ಸಲಹೆ ನೀಡಿರು ವುದರಿಂದ ಮೈಸೂರು ನಗರದಾದ್ಯಂತ ಕುದುರೆ, ಕತ್ತೆ, ಹಂದಿ, ದನಕರು ಹಾಗೂ ಇತರೆ ಜಾನು ವಾರುಗಳನ್ನು ಹಿಡಿಯುವ ಕಾರ್ಯ ನಡೆಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ತಿಳಿಸಿದರು.

ಇಂದು ಮಧ್ಯಾಹ್ನ `ಮೈಸೂರು ಮಿತ್ರ’ ಕಚೇರಿಗೆ ಕರೆ ಮಾಡಿದ್ದ ಅಕ್ರಂ ಪಾಷ ಎಂಬುವರು, ಮೈಸೂರು ನಗರದಾದ್ಯಂತ ಬಿಡಾಡಿ ಜಾನುವಾರುಗಳ ಹಾವಳಿ ಜಾಸ್ತಿ ಯಾಗಿದೆ. ಅದರಲ್ಲೂ ಎನ್.ಆರ್ ಕ್ಷೇತ್ರದಾ ದ್ಯಂತ ಇದರ ತೊಂದರೆ ಜಾಸ್ತಿಯಾದರೂ ಶಾಸಕರಾಗಲೀ, ಕಾರ್ಪೊರೇಟರ್‍ಗಳಾ ಗಲೀ ಗಮನ ಹರಿಸುತ್ತಿಲ್ಲವಾದ್ದರಿಂದ ಜನರು ಪ್ರಾಣ ಬಿಗಿ ಹಿಡಿದು ಆತಂಕದಿಂದ ಬದುಕ ಬೇಕಾಗಿದೆ ಎಂದು ದೂರಿದರು.

Translate »