ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಕ್ಕೆ  ಪಂಪ ಪ್ರಶಸ್ತಿ ಪುರಸ್ಕøತ ಸಾಹಿತಿ ಪ್ರೊ.ಜಿ.ಹೆಚ್.ನಾಯಕ ವಿರೋಧ
ಮೈಸೂರು

ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಕ್ಕೆ ಪಂಪ ಪ್ರಶಸ್ತಿ ಪುರಸ್ಕøತ ಸಾಹಿತಿ ಪ್ರೊ.ಜಿ.ಹೆಚ್.ನಾಯಕ ವಿರೋಧ

December 21, 2018

ಮೈಸೂರು: ಒಂದನೇ ತರಗತಿಯಿಂ ದಲೇ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುವ ಸರ್ಕಾ ರದ ಪ್ರಸ್ತಾಪಕ್ಕೆ ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿ, ಗೋಕಾಕ್ ಮಾದರಿ ಹೋರಾಟಕ್ಕೆ ಚಿಂತನೆ ನಡೆಸಿರುವ ಬೆನ್ನಲ್ಲೇ ಪಂಪ ಪ್ರಶಸ್ತಿ ಪುರಸ್ಕøತರೂ ಆದ ಹಿರಿಯ ವಿಮರ್ಶಕ ಪ್ರೊ.ಜಿ.ಹೆಚ್.ನಾಯಕ ಕನ್ನಡಪರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವ ಘೋಷಣೆ ಮಾಡಿದ್ದಾರೆ.

ನಿನ್ನೆಯಷ್ಟೇ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಬೆಂಗಳೂರಿನಲ್ಲಿ ಸಭೆ ನಡೆಸಿ ಅನಿ ವಾರ್ಯವಾದರೆ ಸರ್ಕಾರದ ವಿರುದ್ಧ ಗೋಕಾಕ್ ಮಾದರಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು. ಗುರು ವಾರ ಮೈಸೂರಿನಲ್ಲಿ ಪ್ರೊ.ಜಿ.ಹೆಚ್.ನಾಯಕ ಅವರು ತಾವೂ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಏರ್ಪಡಿಸಿದ್ದ ಸಾಧಕ ರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಾಧಕರಾಗಿ ಪಾಲ್ಗೊಂಡಿದ್ದ ಪ್ರೊ.ಜಿ.ಹೆಚ್.ನಾಯಕ, ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುವ ಸರ್ಕಾರದ ಪ್ರಸ್ತಾಪದ ವಿರುದ್ಧ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾ ರರು ಗಟ್ಟಿ ಧ್ವನಿ ಎತ್ತಿದ್ದಾರೆ. ಇದಕ್ಕೆ ನಮ್ಮಂಥವರ ಬೆಂಬಲ ಇದ್ದೇ ಇರುತ್ತದೆ. ಸರ್ಕಾರ ಈ ಗಟ್ಟಿ ಧ್ವನಿಯನ್ನು ಲಘುವಾಗಿ ಪರಿಗಣಿಸದೆ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಮಕ್ಕಳ ಶಿಕ್ಷಣ ಮಾಧ್ಯಮವನ್ನು ನಿರ್ಣಯಿಸುವ ಹಕ್ಕು ಪೋಷಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸುಪ್ರಿಂಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ರಾಜ್ಯ ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಕ್ಕೆ ಚಿಂತನೆ ನಡೆಸಿದೆ. ಇದಕ್ಕೆ ಕನ್ನಡಪರ ಹೋರಾಟಗಾರ ರಿಂದ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ತಮ್ಮ ಅಭಿ ಪ್ರಾಯವೇನೆಂದು ನಿವೃತ್ತ ಪ್ರಾಧ್ಯಾಪಕ ಡಾ.ಪಂಡಿತಾ ರಾಧ್ಯ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಮೇಲಿನಂತೆ ಪ್ರೊ. ಜಿ.ಹೆಚ್.ನಾಯಕ ಪ್ರತಿಕ್ರಿಯಿಸಿದರು.

ನಿಮ್ಮ ತಾಯಿಯವರ ವ್ಯಕ್ತಿತ್ವ ನಿಮ್ಮ ಮೇಲೆ ಯಾವ ರೀತಿಯ ಪ್ರಭಾವ ಉಂಟು ಮಾಡಿತು ಎಂಬ ಪ್ರಾಧ್ಯಾಪಕ ಡಾ.ಹೆಚ್.ಆರ್.ತಿಮ್ಮೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಪ್ರೊ.ಜಿ.ಹೆಚ್.ನಾಯಕರು, ನನ್ನ ತಾಯಿ ಅಕ್ಷರ ಬಲ್ಲವಳಲ್ಲ. ಆದರೆ ನ್ಯಾಯ-ನೀತಿ ವಿಚಾರದಲ್ಲಿ ಅವಳ ನಿಷ್ಠೆ ಅಪಾರವಾದುದು. ಇದು ನನ್ನ ಮೇಲೆ ಭಾರೀ ಪ್ರಭಾವ ಬೀರಿತು ಎಂದರು.

ನಾನು ಪ್ರಾಥಮಿಕ ಶಾಲೆಯಲ್ಲಿದ್ದ ಸಂದರ್ಭ. ಆಗ ನಮ್ಮೂರು ಸ್ವಾತಂತ್ರ್ಯ ಹೋರಾಟದ ಅಗ್ನಿಕುಂಡದಂ ತಿತ್ತು. ನನ್ನ ತಂದೆ ಹಾಗೂ ಅಣ್ಣ ಜೈಲು ಸೇರಿದ್ದರು. ತಾಯಿಯ ಅಣ್ಣ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಯುವಕರನ್ನೆಲ್ಲಾ ಜೈಲು ಪಾಲು ಮಾಡಲಾಗಿತ್ತು. ಈ ರೀತಿ ಸಾಮಾನ್ಯ ಜನರಿದ್ದ ಗ್ರಾಮದಿಂದ ಅಸಾಮಾನ್ಯ ಹೋರಾಟವೇ ನಡೆಯಿತು. ಇಂತಹ ಸನ್ನಿವೇಶಗಳು ನನ್ನಲ್ಲಿ ದಿಟ್ಟತನದ ಸ್ವಭಾವ ಬೆಳೆಯುವಂತೆ ಮಾಡಿತ ಲ್ಲದೆ, ಜೀವನದುದ್ದಕ್ಕೂ ಅದೇ ದಿಟ್ಟತನ ಕಾಯ್ದು ಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.

ಉದ್ಘಾಟನೆ ನೆರವೇರಿಸಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತ ನಾಡಿ, ಸ್ನಾತಕೋತ್ತರ ಪದವಿಯಲ್ಲಿ ಪ್ರೊ.ಜಿ.ಹೆಚ್. ನಾಯಕರು ನನ್ನ ಪ್ರಾಧ್ಯಾಪಕರು. ಪಾಠ ಹೇಳಿದ ಎಲ್ಲಾ ಗುರುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಓದು ಬದುಕನ್ನು ರೂಪಿಸುತ್ತದೆ ಎಂಬುದನ್ನು ತಿಳಿಸಿಕೊಟ್ಟ ಪ್ರೊ.ಜಿ.ಹೆಚ್. ನಾಯಕರು ಸಾವಿರಾರು ವಿದ್ಯಾರ್ಥಿಗಳಿಗೆ ಸಮಾಜ ಮುಖಿಯಾಗಿ ಬದುಕುವ ದಾರಿ ತೋರಿದ ಗುರುಗಳು. ಇವರು ಕನ್ನಡ ಸಾರಸ್ವತ ಲೋಕದ ಕಟು ಹಾಗೂ ಮಾದರಿ ವಿಮರ್ಶಕರು ಎಂದು ಅಭಿಮಾನ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರೊ.ಜಿ.ಹೆಚ್.ನಾಯಕ ಅವರನ್ನು 5 ಸಾವಿರ ರೂ. ಗೌರವಧನ ಹಾಗೂ ಸ್ಮರಣಿಕೆಯೊಂ ದಿಗೆ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಡಾ.ಎನ್.ಎಸ್. ತಾರಾನಾಥ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾ ಯಕ ನಿರ್ದೇಶಕ ಹೆಚ್.ಚೆನ್ನಪ್ಪ ಮತ್ತಿತರರು ಹಾಜ ರಿದ್ದರು. ಬಳಿಕ ನಡೆದ ಯುವ ಕವಿಗೋಷ್ಠಿಯಲ್ಲಿ ಹಲವು ಯುವ ಕವಿಗಳು ತಮ್ಮ ಕವನ ವಾಚಿಸಿದರು.

ಪ್ರೊ.ನಾಯಕರು ಬಗೆಬಗೆಯ ಭಾವಗಳ ಸಂಗಮ: ಡಾ.ತಾರಾನಾಥ್

ಮೈಸೂರು:  ನಿಲುವಿನ ವಿಚಾರ ದಲ್ಲಿ ಭಿನ್ನತೆ ಇದ್ದವರೊಂದಿಗೂ ಪ್ರೀತಿ-ಸ್ನೇಹವನ್ನು ಜೀವನದುದ್ದಕ್ಕೂ ಕಾಯ್ದುಕೊಂಡು ಬಂದ ಪ್ರೊ.ಜಿ. ಹೆಚ್.ನಾಯಕ ಅವರು ಪ್ರೀತಿ, ಕರುಣೆ, ಸಹಾನುಭೂತಿ ಸೇರಿದಂತೆ ಬಗೆಬಗೆಯ ಭಾವಗಳ ಸಂಗಮ ಎಂದು ಹಿರಿಯ ಸಾಹಿತಿ ಡಾ.ಎನ್.ಎಸ್.ತಾರಾನಾಥ್ ಬಣ್ಣಿಸಿದರು.

ಪ್ರೊ. ಜಿ.ಹೆಚ್.ನಾಯಕರು ನನಗೂ ಶಿಕ್ಷಕರು. ಮೈಸೂರು ವಿವಿ ಹಾಗೂ ವಿವಿಯ ಕನ್ನಡ ವಿಭಾಗಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ಬರವಣಿಗೆ ತರ್ಕಬದ್ಧ ಲಕ್ಷಣಗಳನ್ನು ಹೊಂದಿದ್ದು, ಓದುಗನಲ್ಲಿ ಆ ತರ್ಕಬದ್ಧ ನಿಲುವಿಗೆ ಸಹಮತ ವ್ಯಕ್ತವಾಗುವ ಅದ್ಭುತ ಬರವಣಿಗೆ ಅವರಿಗೆ ಒಲಿದು ಬಂದಿದೆ. ಇತರರ ವಿಚಾರ ಗಳಿಗೆ ಸಂಬಂಧಿಸಿದಂತೆ ಭಿನ್ನ ನಿಲುವು ಹೊಂದಿದ್ದರೂ ವೈಯಕ್ತಿಕವಾಗಿ ಪ್ರೀತಿ ಹಂಚುವ ಗುಣ ಅವರದು. ಹಾ.ಮಾ.ನಾಯಕ. ಯು.ಆರ್.ಅನಂತಮೂರ್ತಿ ಅವರ ಬರವಣಿಗೆ ಬಗ್ಗೆ ಭಿನ್ನ ನಿಲುವು ವ್ಯಕ್ತಪಡಿಸಿದ್ದರೂ ವೈಯಕ್ತಿಕವಾಗಿ ಅವರಲ್ಲಿ ಪ್ರೀತಿ-ವಿಶ್ವಾಸ ಹೊಂದಿ ದ್ದರು. ಆದರೆ ನಿಲುವಿನ ವಿಚಾರದಲ್ಲಿ ಅವರು ಎಂದೂ ರಾಜಿಯಾದವರಲ್ಲ. ಅವರು ತಮ್ಮ ಆತ್ಮಸಾಕ್ಷಿಗೆ ಅನು ಗುಣವಾಗಿ ನಡೆಯುವ ವ್ಯಕ್ತಿತ್ವ ಎಂದರು.

ಇಂದು ಸ್ವಚ್ಛತಾ ಅಭಿಯಾನದ ಮಾತು ಹೆಚ್ಚು ಕೇಳಿ ಬರುತ್ತಿದೆ. ಆದರೆ ಇದಕ್ಕಿಂತಲೂ ಮನಸ್ಸು ಮತ್ತು ಕರ್ತವ್ಯ ದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ. ನಾಯ ಕರ ಬದುಕಲ್ಲಿ ಸ್ವಚ್ಛ ಮನಸ್ಸು ಮತ್ತು ಕರ್ತವ್ಯ ಪ್ರಧಾನವಾಗಿ ಕಂಡು ಬರುತ್ತದೆ. ಧಾರ್ಮಿಕ ಆಚರಣೆಗಳ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಮೌಢ್ಯದ ಕಟು ವಿರೋಧಿ. ಆದರೆ ರಾಷ್ಟ್ರೀಯ ಹಬ್ಬಗಳನ್ನು ಅಪಾರ ಗೌರವದಿಂದ ಆಚರಿಸುತ್ತಾರೆ. ಅವರ ಹೆಚ್ಚಿನ ಕೃತಿಗಳು ವಿಮರ್ಶೆಗೆ ಸಂಬಂಧಿಸಿವೆ. ಆದಿ ಕವಿ ಪಂಪನಿಂದ ಇಂದಿನ ದೇವನೂರ ಮಹಾದೇವ ಅವರ ಬರವಣಿಗೆಯ ವಿಮರ್ಶೆ ಮಾಡಿದ್ದಾರೆ ಎಂದರು.
ಮನೆಯಲ್ಲಿ ಕುಸಿದು ಬಿದ್ದು

Translate »