ನಂಜನಗೂಡು ತಾಲೂಕು ವೈದ್ಯಾಧಿಕಾರಿ ಸಾವಿಗೆ ಉಸ್ತುವಾರಿ ಸಚಿವ ಸೋಮಶೇಖರ್ ಸಂತಾಪ
ಮೈಸೂರು

ನಂಜನಗೂಡು ತಾಲೂಕು ವೈದ್ಯಾಧಿಕಾರಿ ಸಾವಿಗೆ ಉಸ್ತುವಾರಿ ಸಚಿವ ಸೋಮಶೇಖರ್ ಸಂತಾಪ

August 21, 2020

ಮೈಸೂರು, ಆ.20- ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಸಾವಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸಂತಾಪ ಸೂಚಿಸಿದ್ದಾರೆ.

ಕಳೆದ 5-6 ತಿಂಗಳಿನಿಂದ ತಾಲೂಕು ವೈದ್ಯಾ ಧಿಕಾರಿಯಾಗಿದ್ದ ಡಾ.ನಾಗೇಂದ್ರ ಅವರು, ಕೋವಿಡ್-19 ನಡುವೆಯೂ ಕ್ರಿಯಾ ಶೀಲತೆ ಹಾಗೂ ಉತ್ಸಾಹದಿಂದ ಕಾರ್ಯನಿರ್ವಹಿಸಿ ದ್ದರು. ಇವರ ಅಗಲಿಕೆಯಿಂದ ರಾಜ್ಯ ಓರ್ವ ಯುವ ವೈದ್ಯರನ್ನು ಕಳೆದುಕೊಂಡಂ ತಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡ ಲೆಂದು ಪ್ರಾರ್ಥಿಸುತ್ತೇನೆ. ಈ ಪ್ರಕರಣ ಸಂಬಂಧ ಮುಖ್ಯ ಮಂತ್ರಿಗಳು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರ ಜೊತೆ ಚರ್ಚಿ ಸಿದ್ದು, ಸರ್ಕಾರ ದಿಂದ ಸಿಗಬೇಕಾದ ಎಲ್ಲಾ ಸೌಲಭ್ಯವನ್ನು ನಾಗೇಂದ್ರ ಅವರ ಕುಟುಂಬಕ್ಕೆ ದೊರಕಿಸಿ ಕೊಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಿಂದ ವೈದ್ಯರು ಸೇರಿದಂತೆ ಜಿಲ್ಲಾಡಳಿತವು ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ. ಸರ್ಕಾರ ಕೊರೊನಾ ವಾರಿಯರ್ಸ್ ಪರ ವಾಗಿದ್ದು, ಇನ್ನು ಮುಂದೆ ಇಂತಹ ಘಟನೆಗಳು ಜರುಗದಂತೆ ಮತ್ತಷ್ಟು ಎಚ್ಚರಿಕಾ ಕ್ರಮ ಗಳನ್ನು ತೆಗೆದುಕೊಳ್ಳಲಾಗುತ್ತದೆ. ಯಾರಿಗೆ, ಏನೇ ಸಮಸ್ಯೆಗಳಿದ್ದರೂ ಸರ್ಕಾರ ಹಾಗೂ ನಮ್ಮ ಗಮನಕ್ಕೆ ತರಬೇಕು. ಯಾವುದಕ್ಕೂ ಸಾವು ಪರಿಹಾರವಲ್ಲ. ಯಾರೂ ಇಂತಹ ಘೋರ ಚಿಂತನೆ ಮಾಡಲೇಬಾರದು ಎಂದು ಸಚಿವರು, ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

Translate »