ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಆಹಾರ ತಯಾರಿಸುವ ಅಡುಗೆ ಮನೆಗೆ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ
ಮೈಸೂರು

ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಆಹಾರ ತಯಾರಿಸುವ ಅಡುಗೆ ಮನೆಗೆ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ

May 3, 2020

ಮೈಸೂರು,ಮೇ 2(ಎಂಟಿವೈ)-ಲಾಕ್ ಡೌನ್‍ನಿಂದಾಗಿ ಸಂತ್ರಸ್ತರಾಗಿದ್ದವರಿಗೆ ಆಹಾರ ಪೂರೈಸುವ ನಿಟ್ಟಿನಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಮನೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಸಮಾಜ ಸೇವಾ ಕಾರ್ಯಕ್ಕೆ ಶ್ಲಾಘಿಸಿದರು.

ಮೈಸೂರಿನ ವಿವೇಕಾನಂದನಗರದ ವಿವೇಕಾನಂದ ವೃತ್ತದ ಸಮೀಪ ಲಾಕ್ ಡೌನ್ ಸಂತ್ರಸ್ತರು ಹಾಗೂ ಬಡ ಕಾರ್ಮಿಕ ವರ್ಗದವರಿಗೆ ಆಹಾರ ಪೂರೈಸಲು ಪ್ರತಿ ದಿನ ಅಡುಗೆ ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಕೊರೊನಾ ಹಿನ್ನೆಲೆಯ ಲಾಕ್‍ಡೌನ್‍ನಿಂ ದಾಗಿ ಸಂತ್ರಸ್ತರಾಗಿರುವ ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಮೈಸೂರಲ್ಲಿ ಹಲವು ಸಂಘ ಸಂಸ್ಥೆಗಳು ಸೇವಾ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ. ಇಂತ ಹವರ ಸಾಲಿನಲ್ಲಿ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮುಂಚೂಣಿಯ ಲ್ಲಿದ್ದು, ಪ್ರತಿದಿನ 4 ಸಾವಿರ ಮಂದಿಗೆ ಆಹಾರ ಪೂರೈಸುವ ಪ್ರಾಮಾಣಿಕ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಆಹಾರ ತಯಾರಿಕೆಯಲ್ಲಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಸಂತ್ರಸ್ತರು ಹಾಗೂ ಬಡವರಿಗೆ ನೆರವು ನೀಡಲು ಇದು ಸೂಕ್ತ ಸಮಯ. ಶಾಸಕ ಎಸ್.ಎ.ರಾಮದಾಸ್ ಕ್ಷೇತ್ರದ ಜನರಿಗಾಗಿ ಉತ್ತಮ ಕಾರ್ಯ ಕೈಗೊಂಡಿದ್ದಾರೆ. ನೂರಾರು ಜನ ಸ್ವಯಂ ಸೇವಕರಿಂದ ಅಚ್ಚುಕಟ್ಟಾಗಿ ಆಹಾರ ತಯಾರಿ ಹಾಗೂ ವಿತರಣೆಯನ್ನು ಮಾಡುತ್ತಿದ್ದಾರೆ. ಈ ಮಹತ್ಕಾರ್ಯ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ. ಇನ್ನಷ್ಟು ಹೆಚ್ಚಿನ ಮಂದಿಗೆ ಸೇವೆ ಒದಗಿಸುವ ಶಕ್ತಿ ನೀಡ ಲೆಂದು ಕೋರುತ್ತೇನೆ ಎಂದರು.

ಶಾಸಕ ಎಸ್.ಎ.ರಾಮದಾಸ್ ಮಾತ ನಾಡಿ, ಲಾಕ್‍ಡೌನ್ ದಿನದಿಂದಲೂ ಕೆ.ಆರ್. ಕ್ಷೇತ್ರ ಸೇರಿದಂತೆ ವಿವಿಧೆಡೆ ಸಂಕಷ್ಟಕ್ಕೀಡಾ ಗಿರುವ ಬಡಜನರಿಗೆ, ನಿರಾಶ್ರಿತರಿಗೆ ಹಾಗೂ ಕೊರೊನಾ ಭದ್ರತೆಯಲ್ಲಿ ತೊಡಗಿಸಿ ಕೊಂಡಿರುವ ಸೇವಾ ನಿರತರಿಗೆ ಆಹಾರ ಪೂರೈಸುವ ಸೇವೆ ಮಾಡಲಾಗುತ್ತಿದೆ. ಕೋವಿಡ್ ಕೇರ್ ಟೀಮ್ ತಯಾರಿಸಿ ಅಗತ್ಯ ವಸ್ತುಗಳ ಕಿಟ್ ಅನ್ನು ಅರ್ಹರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರ ಅನಾರೋಗ್ಯ ಪೀಡಿತರಿಗೆ ಔಷಧ ಸರಬ ರಾಜು, ಡಯಾಲಿಸಿಸ್‍ಗೆ ರೋಗಿಗಳನ್ನು ಕರೆದೊಯ್ಯಲು ಉಚಿತ ವಾಹನದ ವ್ಯವಸ್ಥೆ ಯನ್ನೂ ಮಾಡಲಾಗಿದೆ. ಆಹಾರ ತಯಾ ರಿಕೆಯಲ್ಲಿ ಗುಣಮಟ್ಟದ ಪದಾರ್ಥ ಬಳಸ ಲಾಗುತ್ತಿದ್ದು, ಶುಚಿ ಹಾಗೂ ರುಚಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉಪಾ ಹಾರ ಸೇವಿಸಿದರು. ಈ ಸಂದರ್ಭದಲ್ಲಿ ಸೇಫ್ ವೀಲ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »