ಮೈಸೂರು, ಆ.23(ಆರ್‍ಕೆಬಿ)- ಡಾ.ನಾಗೇಂದ್ರ ಸಾವಿಗೆ ನ್ಯಾಯಕೋರಿ ನಡೆಸು ತ್ತಿದ್ದ ಮುಷ್ಕರವನ್ನು ವೈದ್ಯರು ಹಿಂಪಡೆದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಧನ್ಯವಾದ ಹೇಳಿ ದ್ದಾರೆ. 4-5 ತಿಂಗಳಿಂದ ಕೋವಿಡ್-19 ಮಹಾ ಮಾರಿ ವಿರುದ್ಧ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಜಿಲ್ಲಾಡಳಿತ ಸೇರಿ ದಂತೆ ಅನೇಕ ಇಲಾಖೆಗಳು ಒಂದು ತಂಡವಾಗಿ ಅವಿರತವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದನ್ನು ಮರೆಯ ಲಾಗದು. ಕೋವಿಡ್ ಸಂದರ್ಭ ವೈದ್ಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ಬಗೆಹರಿಸಲಿ ಎಂದು ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ್ದರು. ಎಲ್ಲಾ ಸಮಸ್ಯೆಗಳು ಸರ್ಕಾರದ ಅರಿವಿಗೆ ಬಂದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲಾ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ ಪಡೆದಿರುವ ವೈದ್ಯರ ಕ್ರಮವನ್ನು ಸ್ವಾಗತಿಸುವುದಾಗಿ ಸಚಿವರು ತಿಳಿಸಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ವೈದ್ಯ ಸಮೂಹ ರೋಗಿಗಳ ಆರೈಕೆ ಮುಂದುವರಿಸÀುತ್ತಿರುವುದಕ್ಕೆ ಧನ್ಯವಾದ ಸಲ್ಲಿಸುವೆ ಎಂದಿದ್ದಾರೆ.
