ರೋಟರಿ ಮೈಸೂರು ಉತ್ತರ ಸಂಸ್ಥೆ ಅಧ್ಯಕ್ಷರಾಗಿ ಎಂ.ಕೆ.ನಂಜಯ್ಯ ಪದಗ್ರಹಣ
ಮೈಸೂರು

ರೋಟರಿ ಮೈಸೂರು ಉತ್ತರ ಸಂಸ್ಥೆ ಅಧ್ಯಕ್ಷರಾಗಿ ಎಂ.ಕೆ.ನಂಜಯ್ಯ ಪದಗ್ರಹಣ

July 8, 2018

ಮೈಸೂರು: 2018-19ನೇ ಸಾಲಿನ ರೋಟರಿ ಮೈಸೂರು ಉತ್ತರ ಸಂಸ್ಥೆಯ ಅಧ್ಯಕ್ಷರಾಗಿ ಎಂ.ಕೆ. ನಂಜಯ್ಯ, ಕಾರ್ಯದರ್ಶಿಯಾಗಿ ಡಾ.ಎಸ್.ಹೆಚ್.ಜಗದೀಶ್ ಅಧಿಕಾರ ಸ್ವೀಕರಿಸಿದರು.ವಿಜಯನಗರ 3ನೇ ಹಂತದ ದಿ ಹೆರಿಟೇಜ್ ಕ್ಲಬ್‍ನಲ್ಲಿ ಮಂಗಳೂರಿನ ಮಾಜಿ ಜಿಲ್ಲಾ ಗವರ್ನರ್ ರೊ.ಕೃಷ್ಣಶೆಟ್ಟಿ, ಸಹಾಯಕ ಗವರ್ನರ್ ರೊ.ಎಂ.ಮಲ್ಲರಾಜೇ ಅರಸ್ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಉದ್ಯಮಿ ಎಂ.ಜಗನ್ನಾಥ ಶೆಣೈ ಗೌರವ ಸದಸ್ಯತ್ವ ಸ್ವೀಕರಿಸಿದರು.

ನಂತರ ಮಾತನಾಡಿದ ಉದ್ಯಮಿ ಎಂ.ಜಗನ್ನಾಥ ಶೆಣೈ, ರೋಟರಿ ಸಂಸ್ಥೆ ಎಲ್ಲಾ ವಿಭಾಗದಲ್ಲೂ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ. ಇದರ ಜೊತೆಗೆ ಕೃಷಿ ಕ್ಷೇತ್ರವನ್ನು ಸೇವಾ ವಲಯವಾಗಿ ಗುರುತಿಸಬೇಕು. ಇದಕ್ಕೆ ಪೂರಕವಾಗಿ ರೋಟರಿ ಸದಸ್ಯರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆ ಸಾಕಷ್ಟು ಹೆಸರು ಗಳಿಸಿದೆ. ಬಡವರ ಪರವಾಗಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡಿದೆ. ಈ ಸಂಸ್ಥೆಯಲ್ಲಿ ಸದಸ್ಯತ್ವ ಸ್ವೀಕರಿಸುವುದೇ ಹೆಮ್ಮೆಯ ವಿಷಯ. ಆದ್ದರಿಂದ ನಮ್ಮ ದುಡಿಮೆಯಲ್ಲಿ ಶೇ.10 ರಷ್ಟು ಹಣವನ್ನು ಸೇವಾ ವಲಯಕ್ಕೆ ವಿನಿಯೋಗಿಸಿದರೆ, ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪದಗ್ರಹಣ ಸಮಾರಂಭದಲ್ಲಿ ಉಪಾಧ್ಯಕ್ಷ ರೊ.ಎಂ.ಕೆ.ಶ್ರೀಧರ್, ಸಹ ಕಾರ್ಯದರ್ಶಿ ರೊ.ಡಿ.ಸಿ.ಹೇಮೇಶ್, ಖಜಾಂಚಿ ರೊ.ಎಂ. ಕೆ.ಯಶವಂತ್ ಕುಮಾರ್, ನಿರ್ದೇಶಕರಾದ ಬಿ.ರಾಮಾರಾಧ್ಯ, ರೊ.ಡಿ.ಬಿ.ರಾಜಶೇಖರ ಮೂರ್ತಿ, ರೊ.ಎಲ್. ಚನ್ನಬಸವರಾಜು, ರೊ.ವೈ.ಜಿ.ಚಿನ್ನಸ್ವಾಮಿ, ರೊ. ಬಿ.ಎಸ್. ಶಿವರುದ್ರಪ್ಪ, ರೊ.ರತ್ನರಾಜ್, ಕಾರ್ಯಾಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್, ರೊ.ಕೆ.ರವಿ, ವೈ.ಆರ್.ಮಂಜುನಾಥ್, ರೊ.ಶಿವಕುಮಾರ್ ಹಾಂಜಿ, ರೊ.ಜಿ.ಆರ್. ಪರಮೇಶ್ವರಪ್ಪ, ರೊ.ಹೆಚ್.ಎಸ್.ಪ್ರಕಾಶ್, ರಾಮ್‍ಪ್ರಸಾದ್, 2019-20ನೇ ಸಾಲಿನ ನಿಯೋಜಿತ ಅಧ್ಯಕ್ಷ ಉದಯ್ ಎಸ್.ಕುಮಾರ್, ನಿಕಟ ಪೂರ್ವ ಅಧ್ಯಕ್ಷ ರೊ.ರಾಜಶೇಖರ ಕದಂಬ, ರೊ.ಬಿ.ಆರ್. ಶಿವಕುಮಾರ್, ರೊ.ವಿರೂಪಾಕ್ಷ, ರೊ.ಎಂ.ರಾಜು ಉಪಸ್ಥಿತರಿದ್ದರು.

ಮೈಸೂರು ವಿಜಯನಗರ 3ನೇ ಹಂತದ ದಿ ಹೆರಿಟೇಜ್ ಕ್ಲಬ್‍ನಲ್ಲಿ ಮಂಗಳೂರಿನ ಮಾಜಿ ಜಿಲ್ಲಾ ಗವರ್ನರ್ ರೊ.ಕೃಷ್ಣಶೆಟ್ಟಿ, ಸಹಾಯಕ ಗವರ್ನರ್ ರೊ.ಎಂ.ಮಲ್ಲರಾಜೇ ಅರಸ್ ಸಮ್ಮುಖದಲ್ಲಿ ರೋಟರಿ ಮೈಸೂರು ಉತ್ತರ ಸಂಸ್ಥೆಯ ಅಧ್ಯಕ್ಷರಾಗಿ ಎಂ.ಕೆ. ನಂಜಯ್ಯ, ಕಾರ್ಯದರ್ಶಿಯಾಗಿ ಡಾ.ಎಸ್.ಹೆಚ್.ಜಗದೀಶ್ ಅಧಿಕಾರ ಸ್ವೀಕರಿಸಿದರು.

Translate »