23ನೇ ವಾರ್ಡ್‍ನಲ್ಲಿ ಶಾಸಕ ಎಲ್.ನಾಗೇಂದ್ರ ಪಾದಯಾತ್ರೆ
ಮೈಸೂರು

23ನೇ ವಾರ್ಡ್‍ನಲ್ಲಿ ಶಾಸಕ ಎಲ್.ನಾಗೇಂದ್ರ ಪಾದಯಾತ್ರೆ

January 11, 2022

ಮೈಸೂರು, ಜ.10(ಆರ್‍ಕೆಬಿ)_ ಚಾಮ ರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸೋಮವಾರ ಮೈಸೂರಿನ 23ನೇ ವಾರ್ಡ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪಾದ ಯಾತ್ರೆ ಕೈಗೊಂಡು, ಸಾರ್ವಜನಿಕರಿಂದ ಅಹವಾಲು ಆಲಿಸಿದರು. 23ನೇ ವಾರ್ಡ್ ಸದಸ್ಯೆ ಪ್ರಮೀಳಾ ಭರತ್ ಅವರೊಂದಿಗೆ ಶಿವರಾಂ ಪೇಟೆ, ಬೆಳ್ಳಿಕಟ್ಟೆ ಮೀಸಲು, ರಮಾ ವಿಲಾಸ ರಸ್ತೆ, ಸೀತಾವಿಲಾಸ ರಸ್ತೆ, ಜಗ ನ್ಮೋಹನ ಅರಮನೆ ಸುತ್ತಲಿನ ಪ್ರದೇಶ ಗಳಲ್ಲಿ ಸುತ್ತಾಡಿ, ಸಮಸ್ಯೆ ಆಲಿಸಿದರು. ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳು ವಂತೆ ಸ್ಥಳದಲ್ಲಿಯೇ ಸಂಬಂಧಿಸಿದ ಅಧಿ ಕಾರಿಗಳಿಗೆ ಸೂಚನೆ ನೀಡಿದರು.
ಮೆಟ್ರೋಪೋಲ್ ವೃತ್ತದ ಬಳಿಯಿಂದ ಪಾದಯಾತ್ರೆ ಆರಂಭಿಸಿದ ಅವರು, ಡಿ.ದೇವ ರಾಜ ಅರಸು ರಸ್ತೆಯ ವಿವಿಧ ಅಡ್ಡ ರಸ್ತೆ ಗಳಲ್ಲಿ ಸಂಚರಿಸಿ, ಶಾಸಕರ ವಿವೇಚನಾ ಎಸ್‍ಎಫ್‍ಸಿ ರೂ.1.50 ಕೋಟಿ ವಿಶೇಷ ಅನುದಾನದಲ್ಲಿ ಕೈಗೊಳ್ಳಲಿರುವ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಒಳಚರಂಡಿ ನಿರ್ಮಾಣ ಕಾಮಗಾರಿ, ಲೋಕೋಪಯೋಗಿ ಇಲಾಖೆಯ ರೂ.1.50 ಕೋಟಿ ಅನು ದಾನದಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ರೂ.1.55 ಕೋಟಿ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಮತ್ತು ರಸ್ತೆ, ನಗರ ಪಾಲಿಕೆ 14ನೇ ಹಣಕಾಸು ಯೋಜನೆಯಡಿ ರೂ.37 ಲಕ್ಷ ವೆಚ್ಚದಲ್ಲಿ ಪಿಂಕ್ ಶೌಚಾ ಲಯ, ಮುಖ್ಯಮಂತ್ರಿಗಳ ಆಯವ್ಯಯ ಭಾಷಣದ ಮೈಸೂರು ನಗರದ 100 ಕೋಟಿ ಯೋಜನೆಯಡಿ ಉಳಿತಾಯ ಮೊತ್ತ 8 ಕೋಟಿಯಲ್ಲಿ ಡಿ.ದೇವರಾಜ ಅರಸು ರಸ್ತೆಯ ಇಕ್ಕೆಲಗಳ ಮಾದರಿ ಪಾದಚಾರಿ ಮಾರ್ಗ, ರಸ್ತೆ ಅಭಿವೃದ್ಧಿ, ರೂ.100 ಕೋಟಿ ವೆಚ್ಚ ದಲ್ಲಿ ದಿವಾನ್ಸ್ ರಸ್ತೆ, ಧನ್ವಂತರಿ ರಸ್ತೆ, ರಮಾ ವಿಲಾಸ ರಸ್ತೆ ಅಭಿವೃದ್ಧಿ ರೂ.50 ಲಕ್ಷದಲ್ಲಿ ನಲ್ಲಪ್ಪ ಪೊಲೀಸ್ ಠಾಣೆಯಿಂದ ಚಿಕ್ಕ ಗಡಿ ಯಾರದವರೆಗೆ ರಸ್ತೆ ಅಭಿವೃದ್ಧಿ, ಮುಜರಾಯಿ ಇಲಾಖೆಯಿಂದ ಬಿಡುಗಡೆಯಾದ ಅನುದಾನ ರೂ.230 ಲಕ್ಷದಲ್ಲಿ ವಿವಿಧ ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ 54 ಲಕ್ಷ ರೂ.ಗಳಲ್ಲಿ ವಿವಧ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿ ದಂತೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಎಲ್ಲಾ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಶಾಸಕ ಎಲ್.ನಾಗೇಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಡಿ.ದೇವರಾಜ ಅರಸು ರಸ್ತೆಯ ಕೆಲವು ಅಡ್ಡ ರಸ್ತೆಗಳಲ್ಲಿ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿಲ್ಲದಿರುವ ಬಗ್ಗೆ ಸಾರ್ವಜನಿಕರ ದೂರು ಆಲಿಸಿದ ಅವರು, ನಗರದ ಹೃದಯ ಭಾಗವಾದ ಈ ಪ್ರದೇಶಕ್ಕೆ ಪ್ರತಿದಿನ ಬೆಳಗ್ಗೆ 5 ಗಂಟೆ ಯಿಂದ 8ರವರೆಗೆ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಾಣಿ ವಿಲಾಸ ನೀರು ಸರಬರಾಜು ವಿಭಾ ಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೇಕಾಬಿಟ್ಟಿ ಕಸ ಬಿಡಾಡುವ ಹೋಟೆಲ್ ಗಳು: ಕೆಲವು ನಿವಾಸಿಗಳು ನಗರ ಪಾಲಿಕೆಯ ಕಸ ವಿಲೇವಾರಿ ಸಿಬ್ಬಂದಿ ಪ್ರತಿನಿತ್ಯ ಕಸ ಪಡೆಯಲು ಬರುತ್ತಿಲ್ಲ. ಚರಂಡಿಗಳಲ್ಲಿ ಹೂಳು ತುಂಬಿದೆ. ಅಲ್ಲದೆ ಹೋಟೆಲ್‍ಗಳವರು ಬೇಕಾಬಿಟ್ಟಿಯಾಗಿ ಕಸ ಬಿಸಾಡುತ್ತಿದ್ದಾರೆ ಎಂದು ಶಾಸಕ ರೊಂದಿಗೆ ದೂರಿದರು. ಈ ಸಂಬಂಧ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು.
ರಮಾವಿಲಾಸ ರಸ್ತೆಯ ಅಡ್ಡರಸ್ತೆಗಳಲ್ಲಿ ಆಟೋ ರಿಕ್ಷಾ, ದ್ವಿಚಕ್ರ ವಾಹನಗಳ ಕಳವು ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು.
ಈ ಕುರಿತಂತೆ ಲಕ್ಷ್ಮೀಪುರಂ, ಕೃಷ್ಣ ರಾಜ, ದೇವರಾಜ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಈ ಭಾಗದಲ್ಲಿ ಗಸ್ತು ತಿರುಗು ವುದನ್ನು ಹೆಚ್ಚಿಸಿ, ಕಳವು ಪ್ರಕರಣಗಳು ಹೆಚ್ಚಾಗದಂತೆ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದರು.

ರಸ್ತೆಗಳನ್ನು ಅಗೆದು ಯು.ಜಿ.ಕೇಬಲ್ ಅಳವಡಿಸಿ, ಸರಿಯಾಗಿ ಗುಂಡಿ ಮುಚ್ಚದಿ ರುವ ಬಗ್ಗೆ ಪಾದಾಯಾತ್ರೆ ವೇಳೆ ಗಮ ನಿಸಿದ ಅವರು, ಗುಂಡಿಗಳನ್ನು ಮುಚ್ಚಿ ಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿ ಗಳಿಗೆ ಸೂಚಿಸಿದರು.

ಪಾದಯಾತ್ರೆ ವೇಳೆ ಮುಡಾ ಸದಸ್ಯ ಮಾದೇಶ್, ನಗರ ಪಾಲಿಕೆ ಅಭಿವೃದ್ಧಿ ಉಪ ಆಯುಕ್ತ ಮಹೇಶ್, ಬಿಜೆಪಿ ಅಧ್ಯಕ್ಷ ಸೋಮಶೇಖರ ರಾಜು, ಆಶ್ರಯ ಸಮಿತಿ ಸದಸ್ಯರ ಅನೂಜ್ ಸರಸ್ವತ್, ಯುವ ಮೋರ್ಚಾ ಅಧ್ಯಕ್ಷ ಸಚಿನ್, ಮಹಿಳಾ ಮೋರ್ಚಾದ ತನುಜಾ ಮಹೇಶ್, ಮುಖಂಡರಾದ ಚರಣ್, ಬದರಿನಾಥ್, ಮೈ.ಪು.ರಾಜೇಶ್, ಪರಮೇಶ್‍ಗೌಡ ಇನ್ನಿತರರು ಉಪಸ್ಥಿತರಿದ್ದರು.

Translate »