ಮೈಸೂರು,ಜ.10(ಎಂಟಿವೈ)- ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕಿ ತರ ರಕ್ಷಣೆಗೆ ಜಿಲ್ಲಾಡಳಿತ ಅಗತ್ಯ ಎಲ್ಲಾ ಕ್ರಮ ಕೈಗೊಂಡಿದೆ. ಆದರೂ ಜನರು ಕಡ್ಡಾಯ ವಾಗಿ ಎನ್95 ಮಾಸ್ಕ್ ಧರಿಸುವುದರೊಂ ದಿಗೆ ಕೋವಿಡ್ ಮಾರ್ಗಸೂಚಿ ಪಾಲಿಸು ವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚುತ್ತಿ ರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಹಂತಹಂತವಾಗಿ ಬಿಗಿ ನಿಲುವು ಅನಿವಾರ್ಯ ವಾಗಿದೆ. ಇದುವರೆಗೂ ಲಸಿಕೆ ಹಾಕುವ ಹಾಗೂ ಕೋವಿಡ್ ಟೆಸ್ಟ್ ಮಾಡುವುದಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿತ್ತು. ಇದೀಗ ಲಸಿಕೆ ಅಭಿಯಾನ ಕೊನೆ ಹಂತಕ್ಕೆ ಬಂದಿ ರುವುದರಿಂದ ಕೋವಿಡ್ ನಿಯಮ ಗಾಳಿಗೆ ತೂರುವವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಮಾಸ್ಕ್ ಧರಿಸದವರ ವಿರುದ್ಧ ಪಾಲಿಕೆ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳ್ಳುತ್ತದೆ ಎಂದರು.
6380 ಹಾಸಿಗೆ ವ್ಯವಸ್ಥೆ: ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಳೆದ ಒಂದು ವಾರ ದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬ ರುವ ದಿನಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾದರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ 14 ಸರ್ಕಾರಿ ಆಸ್ಪತ್ರೆಗಳ 2048, 44 ಖಾಸಗಿ ಆಸ್ಪತ್ರೆಗಳ 1661, 21 ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 2671 ಹಾಸಿಗೆ ಸೇರಿದಂತೆ ಒಟ್ಟು 6380 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಅಗತ್ಯವಿದ್ದರೆ ಮತ್ತಷ್ಟು ಹಾಸಿಗೆಗಳನ್ನು ಸಿದ್ಧಗೊಳಿಸಲು ವ್ಯವಸ್ಥೆ ಮಾಡಲಾಗಿದೆ. ಸೆಂಟ್ರಲ್ ಹಾಸ್ಪಿಟಲ್ ಮ್ಯಾನೇ ಜ್ಮೆಂಟ್ ಸಿಸ್ಟಂ ಮೂಲಕ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿ ಕಾರಿಗಳು ಸ್ಪಷ್ಟಪಡಿಸಿದರು.
21 ಕೋವಿಡ್ ಕೇರ್ ಸೆಂಟರ್: ಕಳೆದ ವರ್ಷದಂತೆ ಈ ವರ್ಷವೂ ಜಿಲ್ಲೆಯಲ್ಲಿ 21 ಕೋವಿಡ್ ಕೇರ್ ಸೆಂಟರ್ ತೆರೆ ಯಲು ಉದ್ದೇಶಿಸಲಾಗಿದೆ. ಕಳೆದ ವರ್ಷ ಕೋವಿಡ್ ಕೇರ್ ಸೆಂಟರ್‍ಗೆ ಬಳಸಿದ್ದ ವಿದ್ಯಾರ್ಥಿನಿಲಯಗಳನ್ನು ಈ ಬಾರಿಯೂ ಕೊರೊನಾ ಸೋಂಕಿತರ ಆರೈಕೆಗೆ ಬಳಸಿ ಕೊಳ್ಳಲಾಗುತ್ತದೆ. ಈಗಾಗಲೇ ಇಂತಹ ಕಡೆ ಕರ್ತವ್ಯ ನಿರ್ವಹಿಸಲು ಬೇಕಾದ ವೈದ್ಯರು, ದಾದಿಯರು, ಡಿ-ಗ್ರೂಪ್ ನೌಕ ರರು ಹಾಗೂ ಅಡುಗೆ ಸಿಬ್ಬಂದಿಯನ್ನು ನಿಯೋಜಿಸುವ ಕೆಲಸ ನಡೆಸಲಾಗಿದೆ. ಅಗತ್ಯ ಬಿದ್ದರೆ ಕೂಡಲೇ 6ರಿಂದ 12 ಗಂಟೆ ಅವಧಿ ಯೊಳಗೆ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭ ಮಾಡುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಅಗತ್ಯ ಪ್ರಯಾಣದಲ್ಲಿ ಆಕ್ಸಿಜûóನ್ ಪೂರೈ ಕೆಗೆ ಕ್ರಮ: ಮೈಸೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಆಸ್ಪತ್ರೆ ಗಳಲ್ಲಿ 17 ಆಕ್ಸಿಜನ್ ಪ್ಲಾಂಟ್ ಸ್ಥಾಪಿಸ ಲಾಗಿದೆ. ಅವುಗಳಲ್ಲಿ ಈಗಾಗಲೇ 12 ಆಕಿಜûóನ್ ಪ್ಲಾಂಟ್ ಸಿದ್ಧವಾಗಿದ್ದರೆ ಉಳಿದ 05 ಪ್ಲಾಂಟ್‍ಗಳು ಪ್ರಗತಿಯಲ್ಲಿವೆ. ಇದ ರಿಂದ ತಾಲೂಕು ಆಸ್ಪತ್ರೆಗಳಲ್ಲೂ ಸೋಂಕಿ ತರಿಗೆ ಆಕ್ಸಿಜನ್ ಬೆಡ್ ಹಾಗೂ ತುರ್ತು ಚಿಕಿತ್ಸೆಗೆ ಬೇಕಾದ ಆಕ್ಸಿಜûóನ್ ದೊರೆ ಯುತ್ತದೆ ಎಂದು ತಿಳಿಸಿದರು.
ನಿಯಮ ಉಲ್ಲಂಘಿಸಿದರೆ ಕ್ರಮ: ಎನ್-95 ಮಾಸ್ಕ್ ಧರಿಸುವುದರಿಂದ ಶೇ.99 ರಷ್ಟು ಸೋಂಕಿನಿಂದ ಬಚಾವಾಗಬಹುದು. ಅದಕ್ಕಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸು ವಂತೆ ಮನವಿ ಮಾಡಲಾಗುತ್ತಿದೆ. ಕೊರೊನಾ ಶಂಕಿತರಿಗೆ ಕೋವಿಡ್ ಟೆಸ್ಟ್ ಮಾಡುವು ದಕ್ಕೆ ಹೆಚ್ಚು ಗಮನ ಕೇಂದ್ರೀಕರಿಸಲಾಗು ತ್ತಿದೆ. ಮಾಸ್ಕ್ ಧರಿಸದÀವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಜಿ¯್ಲÁಡಳಿತದ ಜೊತೆಗೆ ಜನರು ಸಹಕರಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾ¸್ಕï ಧÀರಿಸಬೇಕು. ಕೊರೊನಾ ಸೋಂಕು ತಗುಲಿದರೂ ಗಾಬರಿ ಯಾಗಬಾರದು. ಅವಶ್ಯಕತೆ ಇರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾಗಬೇಡಿ. ಆಗ ಮಾತ್ರ ಕೊರೊನಾದ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಾಧÀ್ಯವಾಗುತ್ತದೆ ಎಂದು ಹೇಳಿದರು.
ಮೈಸೂರಿನ ಪ್ರಮುಖ ಪ್ರವಾಸಿ ತಾಣ ಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದು ಕೊಳ್ಳಲಾಗಿದೆ. ಅರಮನೆಗೆ ಒಂದು ಬಾರಿ 200ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ವಿದೆ. ಹಾಗೆಯೇ ವಸ್ತು ಪ್ರದರ್ಶನವನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗು ವುದು. ಮೈಸೂರಿನ ಜನತೆ, ಸಂಘ ಸಂಸ್ಥೆ ಗಳು ನಮ್ಮ ಜೊತೆಗೆ ಸಹಕಾರ ನೀಡ ಬೇಕು ಎಂದು ಮನವಿ ಮಾಡಿದರು.