ಜಮೀನು ಹದ್ದುಬಸ್ತು, ಭೂ ಸರ್ವೇ ದರ ಹೆಚ್ಚಳಕ್ಕೆ ಎಂಎಲ್‍ಸಿ ದಿನೇಶ್ ಗೂಳಿಗೌಡ ಆಕ್ಷೇಪ
ಮೈಸೂರು

ಜಮೀನು ಹದ್ದುಬಸ್ತು, ಭೂ ಸರ್ವೇ ದರ ಹೆಚ್ಚಳಕ್ಕೆ ಎಂಎಲ್‍ಸಿ ದಿನೇಶ್ ಗೂಳಿಗೌಡ ಆಕ್ಷೇಪ

February 9, 2022

ಮೈಸೂರು,ಫೆ.8(ಪಿಎಂ)-ಜಮೀನು ಹದ್ದುಬಸ್ತು ಮತ್ತು ಭೂ ಸರ್ವೇ ಸಂಬಂಧ ಸುಮಾರು ಶೇ.150ರಷ್ಟು ದರ ಹೆಚ್ಚಳ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಮಂಡ್ಯ ಸ್ಥಳೀಯ ಸಂಸ್ಥೆ ಗಳ ಕ್ಷೇತ್ರದ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಹೆಚ್ಚಳದ ಆದೇಶ ಹಿಂಪಡೆದು, ಈ ಹಿಂದಿನ ದರವನ್ನೇ ಮುಂದುವರೆಸಬೇಕೆಂದು ಮುಖ್ಯಮಂತ್ರಿ ಗಳು ಮತ್ತು ಕಂದಾಯ ಸಚಿವರಲ್ಲಿ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮಂಗಳವಾರ ಪ್ರತ್ಯೇಕ ಪತ್ರ ಮುಖೇನ ದಿನೇಶ್ ಗೂಳಿಗೌಡ ಈ ಮನವಿ ಮಾಡಿದ್ದು, ಪ್ರಕೃತಿ ವಿಕೋಪ, ಕೋವಿಡ್, ಬೆಳೆ ಏರಿಳಿತ, ಅತಿವೃಷ್ಟಿ, ಅನಾವೃಷ್ಟಿ ಸೇರಿ ದಂತೆ ನಾನಾ ಕಾರಣಗಳಿಂದ ರೈತರ ಬದುಕು ಸಂಕಷ್ಟದಲ್ಲಿದೆ. ಇಂದಿಗೂ ನಮ್ಮ ರೈತರಿಗೆ ಸ್ಥಿರವಾದ ಬೆಲೆ ಸಿಗುತ್ತಿಲ್ಲ. ಸದಾ ಅನಿಶ್ಚಿತತೆಯಲ್ಲೇ ಬದುಕುವ ಪರಿಸ್ಥಿತಿ ಯಲ್ಲಿದ್ದಾರೆ. ಕೋವಿಡ್ ರೂಪಾಂ ತರ ಅಲೆಗಳಿಂದ ಆರ್ಥಿಕ ಪರಿಸ್ಥಿತಿ ಮೇಲೆ ತೀವ್ರ ಪರಿ ಣಾಮ ಉಂಟಾ ಗಿದೆ. ಇದು ಜನಜೀವ ನದ ಮೇಲೂ ವ್ಯತಿ ರಿಕ್ತ ಪರಿಣಾಮ ಬೀರಿದೆ. ಇಂತಹ ಪರಿ ಸ್ಥಿತಿಯಲ್ಲಿ ದರ ಹೆಚ್ಚಳದ ಹೊಸ ಆದೇ ಶವು ಗಾಯದ ಮೇಲೆ ಬರೆ ಎಳೆದಂತಾ ಗಿದೆ. ಶೇ.100ರಿಂದ 150ರಷ್ಟು ಸರ್ವೇ ಶುಲ್ಕ ಹೆಚ್ಚಿಸಿರುವುದು ನಿಜಕ್ಕೂ ದಿಗಿಲು ಹುಟ್ಟಿ ಸಿದೆ ಎಂದು ದಿನೇಶ್ ಗೂಳಿಗೌಡ ಪತ್ರ ದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಜಮೀನು ಸರ್ವೇ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಹಲವು ಕಡೆ ಇನ್ನೂ ಹಕ್ಕು ಪತ್ರಗಳು ಸರಿಯಾಗಿ ಆಗಿಲ್ಲ. ಎರಡು, ಮೂರು ತಲೆಮಾರುಗಳ ಜಮೀನುಗಳು ಸರಿಯಾದ ರೀತಿ ಸರ್ವೇ ಆಗದೆ ಭೂಮಿ, ರೈತರ ಮಕ್ಕಳ ಹೆಸರಿಗೆ ಆಗಿರುವುದಿಲ್ಲ. ಇದರಿಂದ ಅವರಿಗೆ ವ್ಯವಹಾರಿಕವಾಗಿಯೂ ಕೆಲವು ಸಮಸ್ಯೆಗಳು ತಲೆದೋರುತ್ತಿವೆ. ಸರ್ಕಾರದ ಅನುದಾನ, ಯೋಜನೆಗಳು ಸರಿ ಯಾಗಿ ಸಿಗಬೇಕಾದರೂ ಹಕ್ಕುಪತ್ರಗಳು ಸಮರ್ಪಕವಾಗಿರಬೇಕು. ಅಲ್ಲದೆ, ಸರ್ವೇ ಮಾಡುವ ಸಿಬ್ಬಂದಿ ಪ್ರಮಾಣವೂ ಕಡಿಮೆ ಇರುವ ಕಾರಣ ಈಗಾಗಲೇ ಶುಲ್ಕ ಪಾವತಿ ಸಿದವರಿಗೂ ನಿಧಾನ ಪ್ರಕ್ರಿಯೆಯಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ಈ ಪ್ರಕ್ರಿಯೆ ತ್ವರಿ ತಗತಿಯಲ್ಲಿ ಆಗಬೇಕಿದೆ. ಜೊತೆಗೆ ಅತಿ ಯಾದ ಶುಲ್ಕ ಹೇರಿರುವ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

35 ರೂಪಾಯಿಯಲ್ಲಿ ಈವರೆಗೆ ಆಗು ತ್ತಿದ್ದ ಸರ್ವೇ ಕಾರ್ಯಕ್ಕೆ ಇನ್ನು ಮುಂದೆ 3,500 ರೂ., 4 ಸಾವಿರ ರೂ. ಪಾವತಿ ಮಾಡಬೇಕಿದೆ. ಇದು ಗ್ರಾಮೀಣ ಪ್ರದೇ ಶದ ಜನರಿಗೆ ದೊಡ್ಡ ಆಘಾತ. ಇನ್ನು ನಗರ ಪ್ರದೇಶದಲ್ಲಿಯೂ ಇದೇ ರೀತಿ ಬೆಲೆ ಏರಿಕೆ ಮಾಡಲಾಗಿದೆ. ಇದು ಸೂಕ್ತವಲ್ಲ. ಈಗಾಗಲೇ ಕೋವಿಡ್ ಸಂಕಷ್ಟದಲ್ಲಿ ರೈತರು ಹಲವು ಸಮಸ್ಯೆಗಳಿಗೆ ಸಿಲು ಕಿದ್ದಾರೆ. ಜೊತೆಗೆ ಅತಿವೃಷ್ಟಿ, ಪ್ರವಾಹ ದಿಂದ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. ಹಲವು ರೈತರು ಸಾಲದ ಸುಳಿಯಲ್ಲಿದ್ದಾರೆ. ಇದನ್ನು ಸರ್ಕಾರ ಮನಗಾಣಬೇಕು.

ಸರ್ವೇದಾರರಿಗೆ ವೇತನ ಸೇರಿದಂತೆ ಭೂಮಾಪನ ಕೇಂದ್ರ ನಿರ್ವಹಣಾ ವೆಚ್ಚ ವನ್ನು ನಿರ್ವಹಿಸಲು ರೈತರ ಮೇಲೆ ಆರ್ಥಿಕ ಹೊರೆ ಹಾಕುವುದು ಸೂಕ್ತವಲ್ಲ. ಸರ್ಕಾರ ಇದಕ್ಕೆ ಪರ್ಯಾಯ ಆದಾಯ ಮೂಲ ಕಂಡುಕೊಳ್ಳಬೇಕು. ಇಲಾಖೆ ನಿರ್ವಹಣೆಗೆ ರೈತರಿಂದಲೇ ಹಣ ವಸೂಲಿ ಮಾಡು ವುದು ಸರಿಯಾದ ಕ್ರಮವಲ್ಲ. ಯಾವುದೇ ಶುಲ್ಕ ನಿಗದಿಪಡಿಸುವುದಾದರೂ ವೈಜ್ಞಾ ನಿಕವಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮರುಪರಿಶೀಲನೆ ನಡೆಸಬೇಕು.
ಶ್ರಮಜೀವಿಯಾದ ರೈತ, ದೇಶದ ಬೆನ್ನೆಲು. ಹಾಗಾಗಿ ಅನ್ನದಾತನ ಪರವಾಗಿ ಕಾನೂನು ಗಳು ಇರಬೇಕೇ ಹೊರತು. ಆತನ ಬೆನ್ನು ಮೂಳೆ ಮುರಿಯುವಂತಹ ಕಾನೂನು, ಆದೇಶಗಳನ್ನು ಎಂದಿಗೂ ಮಾಡಬಾರದು. ಇಂದು ಅನ್ನದಾತ ಒಂದೊಂದು ರೂಪಾಯಿ ಖರ್ಚು ಮಾಡಲೂ ಯೋಚನೆ ಮಾಡುವ ಸ್ಥಿತಿಯಲ್ಲಿದ್ದಾನೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅವರ ಪರ ನಿಲ್ಲಬೇಕು. ಪರಿಷ್ಕøತ ದರ ರೈತ ವಿರೋಧಿಯಾಗಿದ್ದು, ಈ ಕೂಡಲೇ ಇದನ್ನು ಕೈಬಿಡಬೇಕು ಎಂದು ದಿನೇಶ್ ಗೂಳಿ ಗೌಡ ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ.

Translate »