ಎರಡು ಕೋಟಿವರೆಗಿನ ಸಾಲಗಳ ಚಕ್ರಬಡ್ಡಿ ಮನ್ನಾಕ್ಕೆ ಕೇಂದ್ರ ಸಮ್ಮತಿ; ಸುಪ್ರೀಂಕೋರ್ಟ್‍ಗೆ ಮಾಹಿತಿ
ಮೈಸೂರು

ಎರಡು ಕೋಟಿವರೆಗಿನ ಸಾಲಗಳ ಚಕ್ರಬಡ್ಡಿ ಮನ್ನಾಕ್ಕೆ ಕೇಂದ್ರ ಸಮ್ಮತಿ; ಸುಪ್ರೀಂಕೋರ್ಟ್‍ಗೆ ಮಾಹಿತಿ

October 4, 2020

ನವದೆಹಲಿ, ಅ.3- ಸಾಲದ ಕಂತು (ಇಎಂಐ) ಪಾವತಿ ಮುಂದೂಡಿಕೆ ಅವ ಧಿಗೆ ಅನ್ವಯಿಸಿ ಚಕ್ರ ಬಡ್ಡಿ(ಬಡ್ಡಿ ಮೇಲೆ ಬಡ್ಡಿ) ಮನ್ನಾ ಮಾಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಸುಪ್ರೀಂಕೋರ್ಟ್‍ಗೆ ಶನಿವಾರ ಅಫಿಡವಿಟ್ ಸಲ್ಲಿಸಿದೆ. ಇದ ರಿಂದ ಬ್ಯಾಂಕ್‍ಗಳಿಗೆ ಬರಬಹುದಾಗಿದ್ದ ಬಡ್ಡಿ ವರಮಾನದಲ್ಲಿ 6 ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟವಾಗಲಿದ್ದು, ಈ ಹೊರೆ ಹೊತ್ತುಕೊಳ್ಳುವುದಕ್ಕೂ ಸಿದ್ಧವಾ ಗಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಈ ಚಕ್ರಬಡ್ಡಿ ಮನ್ನಾ ಸೌಲಭ್ಯವು ಸಣ್ಣ-ಮಧ್ಯಮ ಉದ್ದಿಮೆ ಸಾಲ, ಗೃಹ -ಶಿಕ್ಷಣ ಸಾಲ ಸೇರಿದಂತೆ 2 ಕೋಟಿ ರೂ. ಮೊತ್ತದವರೆಗಿನ ಸಾಲಗಳಿಗಷ್ಟೇ ಅನ್ವಯವಾಗಲಿದೆ. ಈ ಸಾಲಗಾರರಿಗೆ ಇಎಂಐ ಪಾವತಿಸುವುದು 6 ತಿಂಗಳ ವರೆಗೆ ಮುಂದೂಡಿಕೆ ಆಗಿತ್ತು. ಜತೆಗೆ ಈಗ ಹೆಚ್ಚುವರಿ ಬಡ್ಡಿ ಹೊರೆಯಿಂದಲೂ ತಪ್ಪಿಸಿ ಕೊಂಡಂತಾಗಿದೆ. ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಇಎಂಐ ಮುಂದೂ ಡಿಕೆ ಯೋಜನೆಯ ಪ್ರಯೋಜನ ಪಡೆ ದರೂ ಅಥವಾ ಪಡೆಯದೇ ಇದ್ದರೂ ಚಕ್ರಬಡ್ಡಿ ಮನ್ನಾ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ನ್ಯಾಯಾಲಯಕ್ಕೆ ತಿಳಿಸಿದೆ. ಈ ಸಂಬಂಧ ಸೂಕ್ತ ಅನುದಾನಕ್ಕಾಗಿ ಸಂಸತ್‍ನಿಂದ ಅನುಮತಿ ಪಡೆಯಲಾಗುವುದು. ಆತ್ಮನಿರ್ಭರ ಯೋಜನೆಯಡಿ ಎಂಎಸ್‍ಎಂಇಗಳಿಗೆ ನೀಡಿರುವ 3.7 ಲಕ್ಷ ಕೋಟಿ ರೂ. ಹಾಗೂ ಗರೀಬ್ ಕಲ್ಯಾಣ ಯೋಜನೆಯಡಿ ಗೃಹಸಾಲ ಪಡೆದವರಿಗೆ ನೀಡಿರುವ 70 ಸಾವಿರ ಕೋಟಿ ರೂ. ನೆರವಿನ ಹೊರತಾಗಿ ಈ ಚಕ್ರಬಡ್ಡಿ ಮನ್ನಾ ಸೌಲಭ್ಯವನ್ನೂ ನೀಡಲಾಗುವುದು ಎಂದು ಸರ್ಕಾರ ನ್ಯಾಯಾಲಯಕ್ಕೆ ವಿವರಿಸಿದೆ. ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದವರನ್ನು ರಕ್ಷಿಸುವ ಉದ್ದೇಶದಿಂದ ಮಾರ್ಚ್‍ನಿಂದ ಆಗಸ್ಟ್ ಮಾಸಾಂತ್ಯದವರೆಗೆ (6 ತಿಂಗಳು) ಸಾಲದ ಕಂತು ಪಾವತಿ ಮುಂದೂಡಿಕೆಗೆ ಅವಕಾಶ ಕಲ್ಪಿಸಲಾಗಿತ್ತು.

ಸರ್ಕಾರದ ಜವಾಬ್ದಾರಿ: ಚಕ್ರಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕ್‍ಗಳಿಗೆ ಆರ್ಥಿಕ ಹೊರೆಯಾಗಲಿದ್ದು, ಈ ಹೊರೆಯನ್ನು ತಾನೇ ಹೊರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆರು ತಿಂಗಳು ಚಕ್ರಬಡ್ಡಿ ಮನ್ನಾ ಮಾಡಬೇಕೆಂದರೆ 6 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿನ ಹಣ ಬೇಕಾಗಲಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠದಲ್ಲಿ ಮುಂದಿನ ಸೋಮವಾರ ಈ ವಿಷಯ ವಿಚಾರಣೆಗೆ ಬರಲಿದೆ.

Translate »