ಮೈಸೂರಲ್ಲಿ ಮಾರುಕಟ್ಟೆ, ಬೀದಿಬದಿ ವ್ಯಾಪಾರಸ್ಥರಿಗೆ ಎರಡು ವಾರಕ್ಕೊಮ್ಮೆ ಕೋವಿಡ್ ಟೆಸ್ಟ್ ಕಡ್ಡಾಯ
ಮೈಸೂರು

ಮೈಸೂರಲ್ಲಿ ಮಾರುಕಟ್ಟೆ, ಬೀದಿಬದಿ ವ್ಯಾಪಾರಸ್ಥರಿಗೆ ಎರಡು ವಾರಕ್ಕೊಮ್ಮೆ ಕೋವಿಡ್ ಟೆಸ್ಟ್ ಕಡ್ಡಾಯ

October 4, 2020

ಮೈಸೂರು, ಅ.3-ಮೈಸೂರಿನ ಮಾರುಕಟ್ಟೆಗಳು ಹಾಗೂ ಬೀದಿಬದಿ ವ್ಯಾಪಾರಸ್ಥರು ಕೋವಿಡ್ ಲಕ್ಷಣ ಇರಲಿ ಅಥವಾ ಇಲ್ಲದಿರಲಿ, ಕಡ್ಡಾಯವಾಗಿ 2 ವಾರಗಳಿಗೊಮ್ಮೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲೇಬೇಕು ಎಂದು ಆದೇಶಿಸಿರುವ ಪಾಲಿಕೆ ಆಯುಕ್ತರು, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದಿರುವವರಿಗೆ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾರುಕಟ್ಟೆ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ನಗರದ 22 ಕೇಂದ್ರಗಳಲ್ಲಿ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಲಾ ಗುವುದು ಎಂದು ಆದೇಶದಲ್ಲಿ ತಿಳಿಸ ಲಾಗಿದ್ದು, ಮೈಸೂರು ನಗರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಪಾಲಿಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳು ತ್ತಿದೆ. ಹಾಗೆಯೇ ಬೀದಿಬದಿ ವ್ಯಾಪಾರಸ್ಥರು ಮತ್ತು ಮಾರುಕಟ್ಟೆ ವ್ಯಾಪಾರಸ್ಥರ ಆರೋಗ್ಯದ ಹಿತದೃಷ್ಟಿಯಿಂದಲೂ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ವ್ಯಾಪಾ ರಸ್ಥರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದಿದ್ದಲ್ಲಿ ಅವರಿಗೆ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಅವರು ವ್ಯಾಪಾರ ಮಾಡಲು ಮುಂದಾದರೆ ಅವರ ವಿರುದ್ಧ ಪೊಲೀಸ್ ಇಲಾಖೆಯ ಮೂಲಕ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಕೇಂದ್ರ ಗಳಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಉಚಿತ ವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಸಾರ್ವಜನಿ ಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಈ ರೋಗದ ಲಕ್ಷಣ ಗಳಾದ ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ರಕ್ತದೊತ್ತಡ, ಅತಿಸಾರ ಭೇದಿ ಹಾಗೂ ವಾಸನೆ ಮತ್ತು ರುಚಿ ಗುರುತಿಸಲಾಗದೇ ಇರುವುದು ಕಂಡು ಬಂದರೆ ಸಾರ್ವಜನಿಕರು ಕಡ್ಡಾಯ ವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಕೋರಿದ್ದಾರೆ.

ಉಸ್ತುವಾರಿಗಳ ನೇಮಕ ಮೈಸೂರಿನ ದೇವರಾಜ, ವಾಣಿವಿಲಾಸ್, ಮಂಡಿ ಹಾಗೂ ಗಾಂಧಿನಗರ ಮಾರುಕಟ್ಟೆ ವ್ಯಾಪಾರಸ್ಥರಿಗೆ ಕೋವಿಡ್ ಟೆಸ್ಟ್ ಮಾಡಿಸುವ ಸಲುವಾಗಿ ನಗರ ಪಾಲಿಕೆಯು ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋ ಜಿಸಿದೆ. ದೇವರಾಜ ಮಾರುಕಟ್ಟೆಯ ಸಂಪೂರ್ಣ ಮೇಲು ಸ್ತುವಾರಿ ವಲಯ ಕಚೇರಿ-2ರ ಕಂದಾಯಾ ಧಿಕಾರಿ ಶ್ರೀಮತಿ ಅರಸು ಕುಮಾರಿ (8310192876), ಸಿಬ್ಬಂದಿ ಯಾಗಿ ದ್ವಿತೀಯ ದರ್ಜೆ ಸಹಾಯಕ ಬಲರಾಮ (72645 80528), ವಾಣಿವಿಲಾಸ ಮಾರುಕಟ್ಟೆಯ ಮೇಲುಸ್ತುವಾರಿಯಾಗಿ ವಲಯ ಕಚೇರಿ-6ರ ಸಹಾಯಕ ಕಂದಾಯಾಧಿಕಾರಿ ಸಿದ್ದರಾಜು (9663369134), ಸಿಬ್ಬಂದಿಯಾಗಿ ದ್ವಿತೀಯ ದರ್ಜೆ ಸಹಾಯಕ ಸಿದ್ದರಾಜು (9448433981), ಗಾಂಧಿ ನಗರ ಮತ್ತು ಮಂಡಿ ಮಾರು ಕಟ್ಟೆ ಮೇಲುಸ್ತುವಾರಿಯಾಗಿ ವಲಯ ಕಚೇರಿ-6ರ ಕಂದಾಯಾಧಿಕಾರಿ ಶ್ರೀಮತಿ ಆಶಾ (8861042695), ಸಿಬ್ಬಂದಿಯಾಗಿ ದ್ವಿತೀಯ ದರ್ಜೆ ಸಹಾಯಕ ನಂದ ಕುಮಾರ್ (9035345501) ಅವರನ್ನು ನಿಯೋಜಿಸಲಾಗಿದೆ.

 

Translate »