ಹೋಟೆಲ್ ಪೈ ವಿಸ್ತಾದಲ್ಲಿ ರಿಯಾಯಿತಿ ದರದಲ್ಲಿ ಆಕರ್ಷಕ ಉಡುಪುಗಳ ಮಾರಾಟ
ಮೈಸೂರು

ಹೋಟೆಲ್ ಪೈ ವಿಸ್ತಾದಲ್ಲಿ ರಿಯಾಯಿತಿ ದರದಲ್ಲಿ ಆಕರ್ಷಕ ಉಡುಪುಗಳ ಮಾರಾಟ

October 5, 2020

ಮೈಸೂರು, ಅ.4-ಮೈಸೂರು-ನೀಲಗಿರಿ ರಸ್ತೆಯಲ್ಲಿರುವ ಹೋಟೆಲ್ ಪೈ ವಿಸ್ತಾದಲ್ಲಿ ಆಕ ರ್ಷಕ ಉಡುಪುಗಳ ಭಾರೀ ರಿಯಾಯಿತಿ ಹಾಗೂ ಮಾರಾಟ ಮೇಳ ಏರ್ಪಡಿಸಲಾಗಿದೆ. ಶನಿವಾರದಿಂದ ಆರಂಭವಾಗಿರುವ ಈ ಮೇಳ ಅ.6ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದ್ದು, ವಿವಿಧ ಪ್ರಕಾರಗಳ ಮಹಿಳೆಯರ ಮತ್ತು ಪುರುಷರ ಉಡುಪುಗಳು, ಮಕ್ಕಳ ಬಟ್ಟೆಗಳು, ಶರ್ಟ್, ಟಿ-ಶರ್ಟ್, ಪ್ಯಾಂಟ್, ಟಾಪ್, ವೆಸ್ಟರ್ನ್ ಬಟ್ಟೆ, ಕುರ್ತಿ, ಹೆಣ್ಣು ಮಕ್ಕಳ ಒಳ ಉಡುಪುಗಳು, ಕಾಟನ್, ಲೆನಿನ್, ಜಾರ್ಜೆಟ್, ಶಿಫಾನ್ ಸೀರೆಗಳು, ರಾಜಾಸ್ಥಾನ್ ಡಿಸೈನರ್ ಹಾಗೂ ವಿವಿಧ ಕುರ್ತಿಗಳು ಲಭ್ಯವಿದೆ. ಸರ್ಕಾರದ ನಿರ್ದೇಶನದಂತೆ ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಲಾಗಿದೆ.

 

 

Translate »