ಮೈಸೂರು, ಅ.4(ಆರ್‍ಕೆಬಿ)- ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಭಾನುವಾರ ಟಿಇಟಿ(ಪರೀಕ್ಷೆ) ಸುಗಮವಾಗಿ ನಡೆದಿದ್ದು, 9761 ಪರೀಕ್ಷಾರ್ಥಿಗಳು ಹಾಜರಾಗಿ ದ್ದರು. ಒಟ್ಟು 11,902 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಪ್ರೌಢಶಾಲೆ ಶಿಕ್ಷಕರಿಗೆ 10 ಕೇಂದ್ರಗಳಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ನಡೆದ ಪರೀಕ್ಷೆಗೆ 2748 ಮಂದಿ ಹಾಜ ರಾಗಿದ್ದರು. 803 ಮಂದಿ ಪರೀಕ್ಷೆಗೆ ಗೈರಾಗಿದ್ದರು. ಒಟ್ಟು 3551 ಅಭ್ಯರ್ಥಿಗಳು ನೋಂದಾಯಿಸಿ ಕೊಂಡಿದ್ದರು. ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 7013 ಪ್ರಾಥಮಿಕ ಶಾಲಾ ಶಿಕ್ಷಕರು ಹಾಜರಾಗಿದ್ದರು. 8351 ಮಂದಿ ನೋಂದಾಯಿಸಿಕೊಂಡಿದ್ದರು. 1338 ಮಂದಿ ಗೈರು ಹಾಜರಾಗಿದ್ದರು ಎಂದು ಡಿಡಿಪಿಐ ಪಾಂಡುರಂಗ ತಿಳಿಸಿದ್ದಾರೆ.