ಯುಪಿಎಸ್‍ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಸುಸೂತ್ರ
ಮೈಸೂರು

ಯುಪಿಎಸ್‍ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಸುಸೂತ್ರ

October 5, 2020

ಬೆಳಗ್ಗೆ ಮೊದಲ ಪತ್ರಿಕೆಗೆ 2772 ಮಂದಿ, ಮಧ್ಯಾಹ್ನ 2ನೇ ಪತ್ರಿಕೆಗೆ 2775 ಮಂದಿ ಹಾಜರಿ
ಮೈಸೂರು, ಅ.4(ಆರ್‍ಕೆಬಿ)- ಯುಪಿಎಸ್‍ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಭಾನುವಾರ ಮೈಸೂರಿನ 14 ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರ ವಾಗಿ ನಡೆಯಿತು. ಬೆಳಗ್ಗೆ ಮತ್ತು ಮಧ್ಯಾಹ್ನ ಜನರಲ್ ಸ್ಟಡೀಸ್‍ನ 2 ಪತ್ರಿಕೆಗಳ ಪರೀಕ್ಷೆ ನಡೆ ಯಿತು. ಬೆಳಗ್ಗೆ ನಡೆದ ಮೊದಲ ಪತ್ರಿಕೆ ಪರೀಕ್ಷೆಗೆ 2772 ಮಂದಿ ಹಾಜರಾಗಿದ್ದರೆ, 2578 ಮಂದಿ ಗೈರು ಹಾಜರಾಗಿದ್ದರು. ಮಧ್ಯಾಹ್ನದ ಎರಡನೇ ಪತ್ರಿಕೆ ಪರೀಕ್ಷೆಗೆ 2775 ಮಂದಿ ಹಾಜರಾದರೆ, 2575 ಮಂದಿ ಗೈರು ಹಾಜರಾಗಿದ್ದರು. ಪರೀಕ್ಷೆಗೆ 5350 ಮಂದಿ ಅಭ್ಯರ್ಥಿಗಳು ಹೆಸರು ನೋಂದಾಯಿಸಿ ಕೊಂಡಿದ್ದರು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರೀಕ್ಷೆಗಳು ನಡೆದವು.

ನಗರದ ವಿ.ವಿ.ಮೊಹಲ್ಲಾದ ನಿರ್ಮಲ ಕಾನ್ವೆಂಟ್, ಕೃಷ್ಣಮೂರ್ತಿಪುರಂನ ಎಂಎಂಕೆ ಅಂಡ್ ಎಸ್‍ಡಿಎಂ ಬಾಲಕಿಯರ ಪಿಯು ಕಾಲೇಜು, ಸೀತಾವಿಲಾಸ ರಸ್ತೆಯ ಮರಿ ಮಲ್ಲಪ್ಪ ಪಿಯು ಕಾಲೇಜು, ಜೆಎಲ್‍ಬಿ ರಸ್ತೆ ಮಹಾರಾಜ ಸರ್ಕಾರಿ ಪಿಯು ಕಾಲೇಜು, ಎಂಜಿ ರಸ್ತೆಯ ಸರ್ಕಾರಿ ಆದರ್ಶ ವಿದ್ಯಾಲಯ, ಸರಸ್ವತಿಪುರಂನ ಟಿಟಿಎಲ್ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‍ಮೆಂಟ್, ಲಕ್ಷ್ಮಿಪುರಂನ ಕ್ರೈಸ್ಟ್ ದಿ ಕಿಂಗ್ ಕಾನ್ವೆಂಟ್, ನ್ಯೂ ಸಯ್ಯಾಜಿ ರಸ್ತೆಯ ಡಿ.ಬನುಮಯ್ಯ ಸ್ವತಂತ್ರ ಪಿಯು ಕಾಲೇಜು, ಸರಸ್ವತಿಪುರಂನ ವಿಜಯ ವಿಠಲ ಸಂಯುಕ್ತ ಪಿಯು ಕಾಲೇಜು, ಜಯಲಕ್ಷ್ಮಿಪುರಂನ ಎಸ್‍ಬಿಬಿಆರ್ ಮಹಾಜನ ಪಿಯು ಕಾಲೇಜು, ಒಂಟಿಕೊಪ್ಪಲಿನ ಸರ್ಕಾರಿ ಪಿಯು ಕಾಲೇಜು, ನಜರ್ ಬಾದ್‍ನಲ್ಲಿರುವ ಸರ್ಕಾರಿ ವಿಭಜಿತ ಮಹಾರಾಜ ಪಿಯು ಕಾಲೇಜು, ಜಯಲಕ್ಷ್ಮಿ ಪುರಂನ ಮಹಾಜನ ಪಬ್ಲಿಕ್ ಸ್ಕೂಲ್ ಮತ್ತು ನಾರಾಯಣಶಾಸ್ತ್ರಿ ರಸ್ತೆಯ ಮಹಾರಾಣಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಪರೀಕ್ಷೆಗಳು ನಡೆದವು. ಪರೀಕ್ಷಾ ಕೇಂದ್ರಗಳ 200 ಮೀ. ಸುತ್ತ ನಿಷೇಧಾಜ್ಞೆ ಜಾರಿಯಿತ್ತು. ಬಂದೋಬಸ್ತ್‍ಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.

 

Translate »