ಪರೀಕ್ಷೆ ಬರೆಯಲು ಬಂದಿದ್ದ ಮುಕ್ತ ವಿವಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ
ಮೈಸೂರು

ಪರೀಕ್ಷೆ ಬರೆಯಲು ಬಂದಿದ್ದ ಮುಕ್ತ ವಿವಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

October 5, 2020

ಮೈಸೂರು, ಅ.4(ಪಿಎಂ)- ಮಾಹಿತಿ ನೀಡದೇ ಒಂದು ದಿನ ಮುಂಚಿತವಾಗಿಯೇ ಪರೀಕ್ಷೆ ನಡೆಸಲಾಗಿದೆ ಎಂದು ಆರೋಪಿಸಿ ಮುಕ್ತ ವಿವಿಯ ಅಂತಿಮ ಬಿಎ ಸಮಾಜ ಶಾಸ್ತ್ರ ಪರೀಕ್ಷೆ ಬರೆಯಲು ವಿವಿ ಆವರಣಕ್ಕೆ ಆಗಮಿಸಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಬಂದ್ ಹಿನ್ನೆಲೆ ಯಲ್ಲಿ ಸೆ.28ರಂದು ನಿಗದಿ ಯಾಗಿದ್ದ ಅಂತಿಮ ಬಿಎ ಸಮಾಜಶಾಸ್ತ್ರ ವಿಷಯದ ಪತ್ರಿಕೆ-3ರ ಪರೀಕ್ಷೆಯನ್ನು ಭಾನುವಾರಕ್ಕೆ ಮುಂದೂಡ ಲಾಗಿತ್ತು. ಅದರಂತೆ ಇಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಪರೀಕ್ಷೆ ನಡೆಸಬೇ ಕಿತ್ತು. ಆದರೆ ನಾವು ಪರೀಕ್ಷೆ ಬರೆಯಲು ಸ್ಥಳಕ್ಕೆ ಬೆಳಿಗ್ಗೆ 8.30ರ ವೇಳೆಗೆ ಬಂದರೆ ಶನಿವಾರವೇ ಪರೀಕ್ಷೆ ನಡೆಸಲಾಗಿದೆ ಎಂದು ಇಲ್ಲಿ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ದೂರವಾಣಿ ಮೂಲಕ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಸಂಪ ರ್ಕಿಸಿದ ವಿವಿ ಕುಲಪತಿ ಡಾ.ಎಸ್. ವಿದ್ಯಾ ಶಂಕರ್, ಶನಿವಾರ ಪರೀಕ್ಷೆಗೆ ಹಾಜರಾಗ ದವರಿಗೆ ಮತ್ತೊಂದು ದಿನ ಪರೀಕ್ಷೆ ನಡೆಸು ವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

ಈ ಸಂಬಂಧ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ವಿವಿ ಕುಲಪತಿ ಡಾ.ಎಸ್.ವಿದ್ಯಾಶಂಕರ್, ಭಾನುವಾರ ಟಿಇಟಿ ಪರೀಕ್ಷೆ ಬರೆಯುವ ಸಲುವಾಗಿ ವಿದ್ಯಾರ್ಥಿಗಳ ಮನವಿ ಮೇರೆಗೆ ಶನಿ ವಾರವೇ ಪರೀಕ್ಷೆ ನಡೆಸಬೇಕಾಯಿತು. ಈ ಸಂಬಂಧ ವಿವಿ ವೆಬ್‍ಸೈಟ್‍ನಲ್ಲಿ ಮಾಹಿತಿ ಪ್ರಕಟಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಮೊಬೈಲ್ ಫೋನ್‍ಗಳಿಗೂ ಸಂದೇಶ ರವಾನಿಸಲಾಗಿದೆ. ಆದರೆ ಇಂದು ಪರೀಕ್ಷೆ ಬರೆಯಲು ಬಂದಿದ್ದವರು ಇದನ್ನು ಗಮ ನಿಸಿಲ್ಲ. ಹೀಗಾಗಿ ಈ ರೀತಿ ಸಮಸ್ಯೆ ಯಾಗಿದೆ ಎಂದು ತಿಳಿಸಿದರು.

ನಾವು ಶನಿವಾರ ಪರೀಕ್ಷೆ ನಡೆಸುವಾ ಗಲೇ ಪರೀಕ್ಷೆಯಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಮತ್ತೊಂದು ದಿನ ಪರೀಕ್ಷೆ ಬರೆಯಲು ಅವಕಾಶ ನೀಡುವು ದಾಗಿ ತಿಳಿಸಿದ್ದೇವೆ. ಇದು ಸಹ ಅವರ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಇಂದು ವಿವಿ ಆವರಣಕ್ಕೆ ಬಂದಿದ್ದಾರೆ. ಪರೀಕ್ಷೆಗೆ ಹಾಜರಾಗದವರಿಗೆ ಮತ್ತೊಂದು ದಿನ ಪರೀಕ್ಷೆ ನೀಡಲು ಮೊದಲೇ ತೀರ್ಮಾನ ಮಾಡಲಾಗಿದೆ. ಹೀಗಾಗಿ ಇವರು ಆತಂಕ ಪಡುವ ಅಗತ್ಯವಿಲ್ಲ ಎಂದರು.

 

 

Translate »