ವಿಶ್ವದ ಅತಿ ಉದ್ದದ ಸುರಂಗ `ಅಟಲ್ ಟನಲ್’ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ
Uncategorized, ಮೈಸೂರು

ವಿಶ್ವದ ಅತಿ ಉದ್ದದ ಸುರಂಗ `ಅಟಲ್ ಟನಲ್’ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

October 4, 2020

ರೋಹ್ಟಾಂಗ್, ಅ.3- ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಎನಿಸಿಕೊಂಡಿರುವ, ಹಿಮಾಚಲ ಪ್ರದೇಶದ ರೋಹ್ಟಾಂಗ್‍ನಲ್ಲಿ ನಿರ್ಮಾಣಗೊಂಡಿರುವ 9.02 ಕಿ.ಮೀ. ಉದ್ದದ `ಅಟಲ್ ಸುರಂಗ ಹೆದ್ದಾರಿ’ ಲೋಕಾರ್ಪಣೆಗೊಂಡಿದೆ.

4 ಸಾವಿರ ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಿದ, ಬಹು ನಿರೀಕ್ಷೆಯ `ಅಟಲ್ ಸುರಂಗ ಹೆದ್ದಾರಿ’ಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು. ಬಳಿಕ ಸುರಂಗ ಮಾರ್ಗದಲ್ಲಿ ಸಂಚಾರ ನಡೆಸಿ ದರು. ಮನಾಲಿಯಿಂದ ಲೇಹ್-ಸ್ಟಿತಿ ಕಣಿವೆ ಸಂಪರ್ಕಿಸುವ ಸುರಂಗ ಮಾರ್ಗ, ವಿಶ್ವದ ಅತ್ಯಂತ ಉದ್ದದ ಹೆದ್ದಾರಿ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮುದ್ರ ಮಟ್ಟದಿಂದ 3 ಸಾವಿರ ಮೀಟರ್ ಎತ್ತರದಲ್ಲಿರುವ ಈ ಸುರಂಗ ಮಾರ್ಗದಿಂದಾಗಿ ಪ್ರಯಾಣಿ ಕರಿಗೆ ಮನಾಲಿ ಮತ್ತು ಲೇಹ್ ಮಧ್ಯೆ 46 ಕಿ.ಮೀ. ದೂರದ 5 ಗಂಟೆಗಳ ಪ್ರಯಾಣದಲ್ಲಿ ಭಾರೀ ಸಮಯ ಉಳಿತಾಯವಾಗಲಿದೆ. ಲಡಾಖ್ ಗಡಿಯಲ್ಲಿ ಸೇನಾಪಡೆಯ ಯುದ್ಧ ವಾಹನಗಳ ಸಂಚಾ ರಕ್ಕೂ ಈ ಹೆದ್ದಾರಿ ಸುರಂಗ ಮಾರ್ಗದಿಂದ ಉಪಯೋಗವಾಗಲಿದೆ. ಪ್ರವಾಸೋದ್ಯಮ, ಚಳಿಗಾಲದ ಕ್ರೀಡೆಗಳಿಗೆ ಸಹ ಉತ್ತೇಜನ ಸಿಗಲಿದೆ. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಗಡಿಭಾಗದ ಮೂಲಸೌಕರ್ಯಕ್ಕೆ ಅಟಲ್ ಸುರಂಗ ಹೊಸಶಕ್ತಿ ನೀಡಲಿದೆ. ಗಡಿಭಾಗದ ಮೂಲಸೌಕರ್ಯ ಗಳನ್ನು ಹೆಚ್ಚಿಸಲು ದೀರ್ಘಕಾಲ ದಿಂದ ಬೇಡಿಕೆಯಿತ್ತು, ಆದರೆ ಯೋಜನೆ ಸಾಕಾರಗೊಳ್ಳುತ್ತಿರ ಲಿಲ್ಲ. ಮಧ್ಯದಲ್ಲಿಯೇ ಕೆಲಸ ನಿಂತು ಹೋಗುತ್ತಿತ್ತು. ಇದೀಗ ಸಾಕಾರಗೊಂಡಿದ್ದು, ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು. 2002ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ಸುರಂಗ ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 2013-14ರಲ್ಲಿ 1,300 ಮೀ.ವರೆಗೆ ಮಾತ್ರ ಸುರಂಗ ನಿರ್ಮಾಣವಾಗಿತ್ತು. 2014ರ ನಂತರ ಕಾಮಗಾರಿ ತ್ವರಿತವಾಗಿ ನಡೆದು ಪೂರ್ಣ ಗೊಂಡಿದೆ. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇನ್ನಿತರರಿದ್ದರು.

Translate »