ಇಂದು ಬೆಂಗಳೂರಿಗೆ ಮೋದಿ
News

ಇಂದು ಬೆಂಗಳೂರಿಗೆ ಮೋದಿ

February 6, 2023

ಬೆಂಗಳೂರು,ಫೆ.5-ಪ್ರಧಾನಿ ನರೇಂದ್ರ ಮೋದಿ ಅವರು ಫೆ.6ರಂದು ಕರ್ನಾ ಟಕಕ್ಕೆ ಆಗಮಿಸುತ್ತಿದ್ದು, ಬೆಂಗಳೂರಿನಲ್ಲಿ ಇಂಡಿಯಾ ಎನರ್ಜಿ ವೀಕ್ 2023ಕ್ಕೆ ಚಾಲನೆ ನೀಡಲಿದ್ದಾರೆ. ಇದರ ಜೊತೆಗೆ ಇ20 ಇಂಧನ ಲೋಕಾರ್ಪಣೆ, ಗ್ರೀನ್‍ಮೊಬಿಲಿಟಿ ರ್ಯಾಲಿಗೆ ಚಾಲನೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ರ್ಯಾಲಿ ಹಿನ್ನೆಲೆಯಲ್ಲಿ 1000-1,500 ವಿದ್ಯಾರ್ಥಿಗಳ ರವಾನಿ ಸುವಂತೆ ನಗರದ 6 ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಇಲಾಖೆ ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ನಾಳೆ ಬೆಂಗಳೂರಿಗೆ ಆಗಮಿಸಿರುವ ಮೋದಿಯವರು ಗ್ರೀನ್ ಮೊಬಿಲಿಟಿ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ಈ ರ್ಯಾಲಿಯು ಹಸಿರು ಇಂಧನ ಮೂಲಗಳ ಮೇಲೆ ಚಲಿಸುವ ವಾಹನಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ ಮತ್ತು ಹಸಿರು ಇಂಧನ ಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. ರ್ಯಾಲಿಯು 42 ಕಿ.ಮೀ. ರಸ್ತೆಯವರೆಗೂ ನಡೆಯಲಿದ್ದು, ರ್ಯಾಲಿಗೆ 1,000-1,5000 ವಿದ್ಯಾರ್ಥಿಗಳನ್ನು ಕಳುಹಿಸುವಂತೆ ವಿವಿಗಳಿಗೆ ಶಿಕ್ಷಣ ಇಲಾಖೆ ಮನವಿ ಮಾಡಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ರ್ಯಾಲಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಆರಂಭಗೊಂಡು ನೀಲಕಂಠ ಪಾರ್ಕಿಂಗ್ ಮೈದಾನ/ಮಾದಾವರ ಮೈದಾನದಲ್ಲಿ ಕೊನೆಗೊಳ್ಳಲಿದೆ. ಈ ಕಾರ್ಯ ಕ್ರಮಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಲು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳು, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾ ಲಯ, ನೃಪತುಂಗ ವಿವಿ ಮತ್ತು ಯುವಿಸಿಇಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

Translate »