ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್ ಹೆಸರೇಳುವ ನೈತಿಕತೆ ಬಿಜೆಪಿಗಿಲ್ಲ
ಮೈಸೂರು

ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್ ಹೆಸರೇಳುವ ನೈತಿಕತೆ ಬಿಜೆಪಿಗಿಲ್ಲ

January 14, 2021

ಮೈಸೂರು, ಜ.13(ಆರ್‍ಕೆಬಿ)- ಬಿಜೆಪಿ ಯವರಿಗೆ ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ಹೆಸರೇಳು ವಷ್ಟು ನೈತಿಕತೆ ಇಲ್ಲ ಎಂದು ಚಾಮ ರಾಜನಗರ ಮಾಜಿ ಸಂಸದ ಆರ್.ಧ್ರುವ ನಾರಾಯಣ್ ಇಂದಿಲ್ಲಿ ತಿಳಿಸಿದರು.

ಮೈಸೂರಿನಲ್ಲಿ ವರುಣಾ ಕ್ಷೇತ್ರ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಭಿ ನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಮತ್ತು ಡಾ. ಅಂಬೇಡ್ಕರ್ ಶಾಪ ಕಾಂಗ್ರೆಸ್‍ಗೆ ತಟ್ಟಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ಮಾಡಿರುವ ಟೀಕೆಗೆ ತಿರುಗೇಟು ನೀಡಿ ದರು. ನಿಜಸ್ಥಿತಿ ಎಂದರೆ ಗಾಂಧಿ ಮತ್ತು ಡಾ.ಅಂಬೇಡ್ಕರ್ ಹೆಸರು ಹೇಳಲು ಅವರಿಗೆ ನೈತಿಕತೆ ಇಲ್ಲ. ಕಟೀಲ್ ಬರೀ ಸುಳ್ಳು ಪದ ಗಳನ್ನು ಉದುರಿಸಿದ್ದಾರೆ. ಕಾಂಗ್ರೆಸ್ ಡಾ. ಅಂಬೇಡ್ಕರ್ ಅವರಿಗೆ ನೀಡಿದ ಗೌರವ ಯಾರೂ ನೀಡಿಲ್ಲ. ಸಂವಿಧಾನದ ಎಲ್ಲಾ ಆಶಯಗಳನ್ನು ಈಡೇರಿಸಲು ಪ್ರಯತ್ನಿ ಸಿದ್ದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸ ಲಾತಿ ಕೊಟ್ಟಿದ್ದು ಕಾಂಗ್ರೆಸ್ ಎಂದರು. ಮಹಾತ್ಮ ಗಾಂಧಿ ಅವರನ್ನು ಕೊಂದವ ರಿಗೆ ಗಾಂಧಿ ಬಗ್ಗೆ ಮಾತನಾಡುವ ನೈತಿ ಕತೆ ಎಲ್ಲಿದೇ? ಎಂದು ಪ್ರಶ್ನಿಸಿದರು.

ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆ ದಾರರಿಗೆ ಮೀಸಲಾತಿ, ಎಸ್‍ಸಿ-ಎಸ್‍ಟಿ ಗಳಿಗೆ ಗ್ರಾಪಂ ಅಧ್ಯಕ್ಷ ಸ್ಥಾನ ಮೀಸಲಾತಿ ನೀಡಿದ್ದು ಸಿದ್ದರಾಮಯ್ಯ. ಹಾಗಾಗಿ ಡಾ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷರಿಗಿರುವ ಅಧಿಕಾರ ಶಾಸಕ, ಸಂಸದರಿಗೂ ಇಲ್ಲ: ಗ್ರಾಮ ಪಂಚಾ ಯಿತಿಗೆ ಹೆಚ್ಚಿನ ಅಧಿಕಾರ, ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷ. ಗ್ರಾಪಂ ಅಧ್ಯಕ್ಷರಿಗಿರುವ ಅಧಿಕಾರ ಶಾಸಕ, ಸಂಸದ ರಿಗೂ ಇಲ್ಲ. ಅವರಿಗಿಂತ ಹೆಚ್ಚಿನ ಅಧಿ ಕಾರ ಅಧ್ಯಕ್ಷರಿಗಿದೆ. ಗ್ರಾಮದ ಅಭಿವೃದ್ಧಿ ಗ್ರಾಪಂಗಳಿಂದ ಸಾಧ್ಯ. ಕಾಂಗ್ರೆಸ್‍ನ ಭದ್ರ ಕೋಟೆಯಾದ ವರುಣಾ ಕ್ಷೇತ್ರದಲ್ಲಿ ನೂತನ ವಾಗಿ ಆಯ್ಕೆಯಾದ ಗ್ರಾಪಂ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಿ, ಜನರ ವಿಶ್ವಾಸ ಗಳಿಸಿ, ಕಾಂಗ್ರೆಸ್ ಭದ್ರಕೋಟೆ ಯನ್ನು ಯಾರೂ ಬೇಧಿಸಲಾಗದು ಎಂಬುದನ್ನು ತೋರಿಸಿಕೊಡಬೇಕು ಎಂದು ಮನವಿ ಮಾಡಿದರು.

Translate »