ಮೈಸೂರು,ಮಾ.18(ಎಸ್‍ಪಿಎನ್)-ಮಹದೇವಪುರ ರಸ್ತೆಯಲ್ಲಿರುವ ಉದಯ ಗಿರಿ ಪೊಲೀಸ್ ಠಾಣೆ ಹಾಗೂ ಪಕ್ಕದ ಪ್ರಾಥ ಮಿಕ ಆರೋಗ್ಯ ಕೇಂದ್ರದ ಸುತ್ತಲ ನಗರ ಪಾಲಿಕೆಗೆ ಸೇರಿದ ಜಾಗದಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ಸೊಳ್ಳೆ, ಕ್ರಿಮಿಕೀಟಗಳ ಕಾಟ ವಿಪರೀತವಾಗಿದೆ. ರಾತ್ರಿ ವೇಳೆ ಸೊಳ್ಳೆ ಕಾಟದಿಂದಾಗಿ ಕರ್ತವ್ಯ ನಿರ್ವಹಿಸುವುದೇ ಕಷ್ಟವಾಗಿದೆ ಎಂದು ಕರ್ತವ್ಯ ನಿರತ ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಠಾಣೆಯ ಕೂಗಳತೆ ದೂರದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ನಿತ್ಯ ತಪಾಸಣೆಗಾಗಿ ಗರ್ಭಿಣಿಯರು, ಚಿಕ್ಕ ಮಕ್ಕಳು, ಹಿರಿಯರು ಇಲ್ಲಿಗೆ ಬರುತ್ತಾರೆ. ಪ್ರತಿ ಗುರುವಾರ ಲಸಿಕೆ ಹಾಕಿಸಲು 1 ವರ್ಷದೊಳಗಿನ ಮಕ್ಕಳು, ಬಾಣಂತಿಯರು ಬರು ತ್ತಾರೆ. ಆದರೆ ಗಿಡಗಂಟಿಗಳಿಂದಾಗಿ ಓಡಾಡು ವುದೇ ಕಷ್ಟವಾಗಿದೆ ಎಂದು ಅಲವತ್ತುಕೊಂಡಿ ದ್ದಾರೆ ಇಲ್ಲಿನ ನಿವಾಸಿಗಳು. ನಗರಪಾಲಿಕೆ ಆಡ ಳಿತ ಆದಷ್ಟು ಬೇಗ ಈ ಗಿಡಗಂಟಿಗಳನ್ನು ತೆರವು ಗೊಳಿಸಲಿ. ಸೊಳ್ಳೆಗಳ ಕಾಟ ತಪ್ಪಿಸಲಿ ಎಂದು ಪೊಲೀಸರು, ಸಾರ್ವಜನಿಕರು ಮನವಿ ಮಾಡಿ ದ್ದಾರೆ. ಫೆಬ್ರವರಿಯಲ್ಲಿ `ಸ್ವಚ್ಛ ಮೈಸೂರು’ ಕಾರ್ಯ ಕ್ರಮದಡಿ ಠಾಣೆಗೆ ಬಂದಿದ್ದ ಮೈಸೂರು ನಗರ ಪಾಲಿಕೆ ವಲಯ ಕಚೇರಿ 8ರ ಆಯುಕ್ತರು ಮತ್ತು ಆರೋಗ್ಯಾಧಿಕಾರಿಗೆ ಠಾಣೆ ಸುತ್ತಮುತ್ತ ಬೆಳೆದಿ ರುವ ಗಿಡಗಂಟಿ ತೆರವುಗೊಳಿಸುವಂತೆÉ ಮನವಿ ಮಾಡಿದ್ದೆವು. ಆದರೆ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಪೊಲೀಸ್ ಇನ್‍ಸ್ಪೆಕ್ಟರ್ ಎನ್.ಎಂ. ಪೂಣಚ್ಚ ಬೇಸರ ವ್ಯಕ್ತಪಡಿಸಿದ್ದಾರೆ. ಠಾಣೆ ಹಿಂಭಾಗ ಮತ್ತು ಆರೋಗ್ಯ ಕೇಂದ್ರದ ಪಕ್ಕದಲ್ಲಿಯೇ ಗಲೀಜು ತಾಂಡವ ವಾಡುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೇಳತೀರದಾಗಿದೆ. ಮಕ್ಕಳಿಗೆ ರೋಗ ಹರಡುವ ಭೀತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ಅಲವತ್ತುಕೊಂಡಿದ್ದಾರೆ.