ಕೊರೊನಾ; ಕಲಾಮಂದಿರ ಭಣಭಣ
ಮೈಸೂರು

ಕೊರೊನಾ; ಕಲಾಮಂದಿರ ಭಣಭಣ

March 19, 2020

ಮೈಸೂರು, ಮಾ.18(ಎಸ್‍ಪಿಎನ್)-ಸದಾ ಒಂದಿಲ್ಲೊಂದು ಸಾಂಸ್ಕøತಿಕ ಚಟುವಟಿಕೆ, ರಾಜಕೀಯ ಚರ್ಚೆ, ಹರಟೆಗಳಿಂದ ಕೂಡಿರುತ್ತಿದ್ದ ಕಲಾಮಂದಿರ ಆವರಣ ಚಟುವಟಿಕೆಗಳಿಲ್ಲದೆ ಕೊರೊನಾ ಎಫೆಕ್ಟ್‍ನಿಂದಾಗಿ ಇದೀಗ ಬಿಕೋ ಎನ್ನುತ್ತಿದೆ.

ಮುಂದಿನ ತಿಂಗಳು ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭ ವಾಗುತ್ತಿದ್ದು, ಈ ವೇಳೆಗಾಗಲೇ ರಂಗಾಯಣ ಆವರಣದಲ್ಲಿ ಚಿಣ್ಣರ ಮೇಳಕ್ಕೆ ಸಿದ್ಧತೆಗಳು ನಡೆಯಬೇಕಿತ್ತು. ಆದರೆ, ಕೊರೊನಾ ಭೀತಿಯಿಂದಾಗಿ ಚಿಣ್ಣರ ಮೇಳದ ಮೇಲೂ ಕರಿನೆರಳು ಆವರಿಸಿದೆ.

ಕೋರೊನಾ ಭೀತಿಯಿಂದಾಗಿ ಸರ್ಕಾರ 1 ವಾರ ಶಾಲೆಗಳಿಗೆ ರಜೆ ಘೋಷಿಸಿದೆ. ರಜೆ ಇದ್ದರೂ ಮಕ್ಕಳು ಪಕ್ಕದ ಮನೆಯ ಸ್ನೇಹಿತ-ಸ್ನೇಹಿತೆಯರ ಜೊತೆ ಆಟಕ್ಕೂ ಹೋಗುವಂತಿಲ್ಲ. ಅಷ್ಟರ ಮಟ್ಟಿಗೆ ಕೊರೊನಾ ಭೀತಿ ಹುಟ್ಟಿಸಿದೆ. ಇದೊಂದು ಬಗೆಯ ಸ್ವಯಂ ದಿಗ್ಬಂಧನವಾಗಿದೆ ಎನ್ನುತ್ತಾರೆ ಹಿರಿಯ ಕಲಾವಿದ ದಿನೇಶ್.

ಕೊರೊನಾ ಭೀತಿಯಿಂದಾಗಿ ಕಳೆದ ವಾರ ಜಿಲ್ಲಾಡಳಿತ ಎಲ್ಲಾ ಕಾರ್ಯಕ್ರಮಗಳಿಗೆ ನಿಲ್ಲಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಲಾಮಂದಿರ ಆವರಣದಲ್ಲಿ ನಡೆಯುತ್ತಿದ್ದ ಎಲ್ಲಾ ಬಗೆಯ ರಂಗ ಚಟುವಟಿಕೆಗಳಿಗೆ ತೆರೆಬಿದ್ದಿದೆ. ಹವ್ಯಾಸಿ ರಂಗಕರ್ಮಿಗಳು ಸಂಜೆ ಸಮಯದಲ್ಲಿ ದೇಶದ ಆಗು-ಹೋಗುಗಳ ಬಗ್ಗೆ, ರಂಗ ಚಟು ವಟಿಕೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ಕೊರೊನಾ ಭೀತಿ ಯಿಂದಾಗಿ ಎಲ್ಲಾ ಕಾರ್ಯಕ್ರಮಗಳು ಬಂದ್ ಆಗಿವೆ ಎಂದು ಕಲಾವಿದ ದಿನೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

Translate »