ಮೈಸೂರು ಮಹಾನಗರಪಾಲಿಕೆಯಲ್ಲಿಲ್ಲ `ಮುನ್ನೆಚ್ಚರಿಕೆ’!
ಮೈಸೂರು

ಮೈಸೂರು ಮಹಾನಗರಪಾಲಿಕೆಯಲ್ಲಿಲ್ಲ `ಮುನ್ನೆಚ್ಚರಿಕೆ’!

March 19, 2020

ಮೈಸೂರು,ಮಾ.18(ವೈಡಿಎಸ್)- ಕೊರೊನಾ ಮತ್ತು ಹಕ್ಕಿಜ್ವರ ಭೀತಿ ಹಿನ್ನೆಲೆಯಲ್ಲಿ ನಗರದ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆಯಲ್ಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಅಚ್ಚರಿ ಮತ್ತು ಆಘಾತಕ್ಕೆ ಕಾರಣವಾಗಿದೆ.

ನಿತ್ಯವೂ ಸಾವಿರಾರು ಜನರು ಬಂದು ಹೋಗುವ ನಗರಪಾಲಿಕೆಯಲ್ಲಿ ಸದ್ಯ ಕೊರೊನಾದ ಕೋವಿಡ್-19 ವೈರಸ್ ಸೋಂಕು ಹರಡದಂತೆ ತಡೆಯುವುದಕ್ಕೆ ಯಾವುದೇ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿ ಲ್ಲದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿ ಸಿದೆ. ಕೊರೊನಾ ಹರಡದಂತೆ ತಡೆಯಲು ಜಿಲ್ಲಾಡ ಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂ ಡಿದೆ. ಈ ಕುರಿತು ನಗರಪಾಲಿಕೆ ಅಧಿಕಾರಿಗಳು ಸಾರ್ವ ಜನಿಕರಲ್ಲಿ ಅರಿವನ್ನೂ ಮೂಡಿಸುತ್ತಿದ್ದಾರೆ.

ಆದರೆ, ಸಯ್ಯಾಜಿರಾವ್ ರಸ್ತೆಯಲ್ಲಿನ ಮಹಾ ನಗರಪಾಲಿಕೆ ಪ್ರಧಾನ ಕಚೇರಿಯಲ್ಲಿಯೇ ಮಾಸ್ಕ್, ಸ್ಯಾನಿಟೈಸರ್, ಟಿಶ್ಶು ಪೇಪರ್ ಬಳಸುತ್ತಿಲ್ಲ, ಸಾರ್ವ ಜನಿಕರಿಗಾಗಿಯೂ ಇರಿಸಿಲ್ಲ. `ಇಡೀ ನಗರದ ಆರೋಗ್ಯ ದತ್ತ ಗಮನ ಹರಿಸಬೇಕಾದ ನಗರಪಾಲಿಕೆಯಲ್ಲೇ ಹೀಗಾದರೆ ಹೇಗೆ?’ ಎಂಬುದು ಸಾರ್ವಜನಿಕರ ಪ್ರಶ್ನೆ. ಸೂಪರ್ ಮಾರ್ಕೆಟ್‍ಗಳಲ್ಲಿ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಗ್ರಾಹಕರಿಗೆ ಸುಲಭಕ್ಕೆ ಲಭ್ಯವಾಗುವಂತೆ ಇರಿಸಬೇಕು. ರೇಲಿಂಗ್ಸ್, ಡೋರ್, ಹ್ಯಾಂಡಲ್ಸ್, ನೆಲಹಾಸುಗಳು, ಬಿಲ್ಲಿಂಗ್ ಟೇಬಲ್ ಕೌಂಟರ್ ಮತ್ತು ಜನರು ಸ್ಪರ್ಶಿಸುವ ಜಾಗಗಳÀನ್ನು ನಿಯಮಿತವಾಗಿ ಸೋಡಿಯಂ ಹೈಫೋಕ್ಲೋರೈಟ್/ಬ್ಲೀಚಿಂಗ್ ಪೌಡರ್ ಅಥವಾ ಇನ್ನಾವುದೇ ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಬೇಕು. ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಮುಂಜಾಗ್ರತಾ ಕ್ರಮಗಳ ಮಾಹಿತಿ ಮುದ್ರಿಸಿ ಪ್ರದರ್ಶಿಸಬೇಕು ಎಂದು ನಿನ್ನೆಯಷ್ಟೆ ಜಿಲ್ಲಾ ಡಳಿತ ಸೂಚನೆ ನೀಡಿದೆ. ಆದರೆ ನಗರಪಾಲಿಕೆ ಅಧಿ ಕಾರಿಗಳು ಸಾರ್ವಜನಿಕರ ಆರೋಗ್ಯದ ಬಗ್ಗೆ ಆಸಕ್ತಿ ವಹಿಸದೇ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ಚರ್ಚೆಗೆ ಗ್ರಾಸವೊದಗಿಸಿದೆ.

Translate »